newsfirstkannada.com

×

ಆರ್​ಸಿಬಿಗೆ ದೊಡ್ಡ ಲಾಸ್​; ತಂಡ ತೊರೆಯಲು ನಿರ್ಧರಿಸಿದ ಬಿಗ್​ ಪ್ಲೇಯರ್..!

Share :

Published July 31, 2024 at 10:09am

    ಮೆಗಾ ಆಕ್ಷನ್​​​ಗೂ ಮುನ್ನ ದೊಡ್ಡ ಆಘಾತ

    ಸ್ಟಾರ್ ಬ್ಯಾಟ್ಸ್​ಮನ್ ಮ್ಯಾಕ್ಸ್​ವೆಲ್​​​ ಗುಡ್​​ಬೈ..?

    ಆರ್​ಸಿಬಿ ತೊರೆಯಲು ಸಜ್ಜಾದ ಬಿಗ್ ಹಿಟ್ಟರ್​​..?

ವಿರಾಟ್ ಕೊಹ್ಲಿ ಬಿಟ್ರೆ ಆರ್​ಸಿಬಿ ಅಂದ್ರೆ ಥಟ್ಟನೇ ನೆನಪಾಗೋದೇ ಈ ಡೇಂಜರಸ್​ ಬ್ಯಾಟರ್​​. ಯಾಕಂದ್ರೆ ಕೊಹ್ಲಿ ಬಳಿಕ ತಂಡದ ಜವಾಬ್ದಾರಿ ನೊಗ ಹೊತ್ತಿದ್ದೇ ಈ ಡಿಸ್ಟ್ರಕ್ಟಿವ್ ಬ್ಯಾಟ್ಸ್​​​ಮನ್. ಇದೀಗ ಈ ನಂಬಿಗಸ್ಥ ಆಟಗಾರ ಆರ್​ಸಿಬಿ ತಂಡ ತೊರೆಯಲು ಸಜ್ಜಾಗಿದ್ದಾರೆ.

2025ನೇ ಐಪಿಎಲ್ ಮೆಗಾ ಆಕ್ಷನ್​ಗೆ ಇನ್ನೂ 5 ತಿಂಗಳು ಬಾಕಿ ಇದೆ. ಈಗಿನಿಂದಲೇ ಎಲ್ಲಾ ಫ್ರಾಂಚೈಸಿಗಳಲ್ಲಿ ಚಟುವಟಿಕೆ ಗರಿಗೆದರಿದೆ. ಇಲ್ಲಿಯತನಕ ಒಮ್ಮೆಯೂ ಟ್ರೋಫಿ ಗೆಲ್ಲದ ಆರ್​ಸಿಬಿ ಹೊಸ ತಂಡವನ್ನ ಕಟ್ಟಲು ನಿರ್ಧರಿಸಿದ್ದು, ಮೆಗಾ ಆಕ್ಷನ್​ನಲ್ಲಿ ಗೆಲ್ಲುವ ಕುದುರೆಗಳಿಗೆ ಗಾಳ ಹಾಕಲು ಸಿದ್ಧತೆ ನಡೆಸಿದೆ. ಈ ನಡುವೆ ಸ್ಟಾರ್ ಆಟಗಾರನೊಬ್ಬ ಆರ್​ಸಿಬಿಗೆ ಗುಡ್​​ಬೈ ಹೇಳಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:ಗಂಭೀರ್ ಅಧ್ಯಕ್ಷತೆಯಲ್ಲಿ ಎಲ್ಲರೂ ಬೌಲರ್​ಗಳೇ​​.. 4 ವಿಕೆಟ್ ಕಿತ್ತ ಸೂರ್ಯ, ರಿಂಕು ಸಿಂಗ್..!

ರೆಡ್​ ಆರ್ಮಿಗೆ ಬಿಗ್​ ಶಾಕ್​​..!
ಗ್ಲೆನ್ ಮ್ಯಾಕ್ಸ್​ವೆಲ್​​​.. ಆರ್​ಸಿಬಿ ತಂಡದ ಮ್ಯಾಚ್ ವಿನ್ನರ್​​. ಬಿಗ್​ ಹಿಟ್ಟಿಂಗ್​​​​​​​​ನಿಂದ ಗೆಲ್ಲಿಸಿದ ಪಂದ್ಯಗಳಿಗೆ ಲೆಕ್ಕವಿಲ್ಲ. 2021 ರಿಂದ ರೆಡ್​ ಆರ್ಮಿಯಲ್ಲಿ ಇನ್ನಿಲ್ಲದ ಹವಾ ಸೃಷ್ಟಿಸಿದ್ರು. ಗೇಮ್ ಚೇಂಜರ್​ ಆಗಿ, ಆಪತ್ಬಾಂಧವನಾಗಿ ಗುರುತಿಸಿಕೊಂಡಿದ್ರು. 4 ವರ್ಷಗಳ ಕಾಲ ಭರ್ಜರಿ ಮನರಂಜನೆ ಉಣಬಡಿಸಿದ್ದ ಆಸಿಸ್ ಬ್ಯಾಟರ್ ಮುಂದಿನ ಐಪಿಎಲ್​ನಲ್ಲಿ ಆರ್​ಸಿಬಿಗೆ ಗುಡ್​​​ಬೈ ಹೇಳಲು ಸಜ್ಜಾಗಿದ್ದಾರೆ.

ಮ್ಯಾಕ್ಸ್​ವೆಲ್​​​ನಿಂದ RCB ಅನ್​​ಫಾಲೋ..!
ಸೋಷಿಯಲ್ ಮೀಡಿಯಾದ ಈ ಒಂದು ನಡೆಯಿಂದ ಮ್ಯಾಕ್ಸ್​​​ವೆಲ್, ಆರ್​ಸಿಬಿ ತಂಡವನ್ನ ತೊರೆಯುತ್ತಾರೆ ಅನ್ನೋ ಸುದ್ದಿ ಹಬ್ಬಿದೆ. ಮೆಗಾ ಆಕ್ಷನ್​​​ ಸಮೀಪಿಸ್ತಿದ್ದಂತೆ ಮ್ಯಾಕ್ಸಿ ಇನ್​ಸ್ಟಾಗ್ರಾಮ್​​ನಲ್ಲಿ ಆರ್​ಸಿಬಿಯನ್ನ ಅನ್​ಫಾಲೋ ಮಾಡಿದ್ದಾರೆ. ಬಿಗ್​​ ಹಿಟ್ಟರ್​​​​​​​​ ಇನ್​ಸ್ಟಾಗ್ರಾಮ್​ನಲ್ಲಿ ರೆಡ್​ ಆರ್ಮಿಯನ್ನ ಅನ್​ಫಾಲೋ ಮಾಡಿದ್ದೇ ತಡ, ಆರ್​ಸಿಬಿಗೆ ಗುಡ್​ಬೈ ಹೇಳಲಿದ್ದಾರೆ ಎಂಬ ಚರ್ಚೆ ಕ್ರಿಕೆಟ್​ ವಲಯದಲ್ಲಿ ಜೋರಾಗಿ ನಡೀತಿದೆ.

ಇದನ್ನೂ ಓದಿ:ಕೇರಳ ಗುಡ್ಡ ಕುಸಿತದಲ್ಲಿ ಕರ್ನಾಟಕದ ಅಜ್ಜಿ, ಮೊಮ್ಮಗ ನಾಪತ್ತೆ.. ಇದೇ ಕುಟುಂಬದ ಮೂವರ ರೋಚಕ ರಕ್ಷಣೆ

ಫ್ರಾಂಚೈಸಿ ಕೆಂಗಣ್ಣಿಗೆ ಗುರಿ..!
ಆನ್​ಫೀಲ್ಡ್​ನಲ್ಲಿ ವೀರಾ ಸೇನಾನಿಯಂತೆ ಹೋರಾಡುವ ಮ್ಯಾಕ್ಸ್​ವೆಲ್​​​​​​ ಅದ್ಯಾಕೋ ಕಳೆದ ವರ್ಷ ಅಟ್ಟರ್ ಫ್ಲಾಪ್​​​ ಶೋ ನೀಡಿದ್ದರು. ಇದು ಬರೀ ಒಂದು ಪಂದ್ಯ ಕಥೆ ಅಲ್ಲ. ಟೂರ್ನಿಪೂರ್ತಿ ದಯನೀಯ ವೈಫಲ್ಯ ಕಂಡ್ರು. ಅದ್ಯಾವ ಮಟ್ಟಕ್ಕೆ ಅಂದ್ರೆ 12 ವರ್ಷಗಳ ಐಪಿಎಲ್​ ಕರಿಯರ್​​ನಲ್ಲಿ ಅತಿ ಕೆಟ್ಟ ಪ್ರದರ್ಶನ ನೀಡಿ ಫ್ರಾಂಚೈಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮ್ಯಾಕ್ಸ್​​​ವೆಲ್ ಪ್ರದರ್ಶನ
2024ನೇ ಐಪಿಎಲ್​​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ 10 ಪಂದ್ಯ ಆಡಿದ್ರು. ಆ ಪೈಕಿ 5.78 ರ ಎವರೇಜ್​​ನಲ್ಲಿ ಬರೀ 52 ರನ್ ಅಷ್ಟೇ ಬಾರಿಸಿದ್ರು. 28 ರನ್​ ಬ್ಯಾಟ್​​​ನಿಂದ ಮೂಡಿ ಬಂದ ಬೆಸ್ಟ್​ ಸ್ಕೋರ್​​​ ಆಗಿತ್ತು.

ಕಳೆದ ವರ್ಷ ಮ್ಯಾಕ್ಸ್​ವೆಲ್​​​​​ ಅಟ್ಟರ್​ ಫ್ಲಾಪ್​ ಶೋ ಕಂಡಿದ್ದರಿಂದ ಆರ್​ಸಿಬಿ ಫ್ರಾಂಚೈಸಿ ರೋಸಿ ಹೋಗಿತ್ತು. ಸಾಕಷ್ಟು ಬೇಸರಗೊಂಡಿತ್ತು ಕೂಡ. ಹೀಗಾಗಿ ಮೆಗಾ ಆಕ್ಷನ್​​ಗೂ ಮುನ್ನ ಮ್ಯಾಕ್ಸಿಯನ್ನ ತಂಡದಿಂದ ರಿಲೀಸ್​ ಮಾಡಲು ಪ್ಲಾನ್ ಮಾಡಿತ್ತು. ಕೇವಲ ಕಿಂಗ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಹಾಗೂ ವಿಲ್​ ಜಾಕ್ಸ್ ಉಳಿಸಿಕೊಂಡು ಉಳಿದವರನ್ನ ಕೈಬಿಡುವ ಯೋಚನೆಯಲ್ಲಿತ್ತು. ಈ ಸುದ್ದಿ ಗೊತ್ತಾಗ್ತಿದ್ದಂತೆ ಮ್ಯಾಕ್ಸ್​​​ವೆಲ್​, ಇನ್​ಸ್ಟಾದಲ್ಲಿ ಆರ್​ಸಿಬಿಯನ್ನ ಅನ್​ಫಾಲೋ ಮಾಡಿದ್ದಾರೆ. ಆ ಮೂಲಕ ತಂಡದಿಂದ ದೂರ ಸರಿಯು, ಹೊಸ ತಂಡದ ಪರ ಆಡುವ ಹಿಂಟ್​​ ಕೊಟ್ಟಿದ್ದಾರೆ.

ಇದನ್ನೂ ಓದಿ:ಸೀರೆಗೆ ಅವಮಾನ..!! ಭಾರತೀಯರ ಕಣ್ಣು ಕೆಂಪಾಗಿಸಿದ ನಾರಿ ಸ್ಯಾರಿ ಗಲಾಟೆ..

ಈ ಬಗ್ಗೆ ಅರ್​ಸಿಬಿ ಫ್ರಾಂಚೈಸಿ ಆಗಲಿ ಅಥವಾ ಗ್ಲೆನ್ ಮ್ಯಾಕ್ಸ್​ವೆಲ್​​ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಆರ್​ಸಿಬಿ ಬಿಡುವ ಬಗ್ಗೆ ರೂಮರ್ಸ್​ ಅಂತೂ ಹಬ್ಬಿದೆ. ಈ ಗಾಳಿ ಸುದ್ದಿ ನಿಜವಾಗುತ್ತಾ ಇಲ್ವಾ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​ಸಿಬಿಗೆ ದೊಡ್ಡ ಲಾಸ್​; ತಂಡ ತೊರೆಯಲು ನಿರ್ಧರಿಸಿದ ಬಿಗ್​ ಪ್ಲೇಯರ್..!

https://newsfirstlive.com/wp-content/uploads/2024/07/MAXI.jpg

Load More