newsfirstkannada.com

×

ಈ ಆಟಗಾರ ಬೇಡವೇ ಬೇಡ ಎಂದ ಫ್ಯಾನ್ಸ್​.. ಮೆಗಾ ಹರಾಜಿಗೂ ಮುನ್ನ RCB ಇವರನ್ನು ಉಳಿಸಿಕೊಳ್ಳೋದು ಡೌಟ್..!

Share :

Published May 24, 2024 at 11:16am

Update May 25, 2024 at 7:34am

    ಮಹತ್ವದ ಪಂದ್ಯದಲ್ಲಿ ಬೇಜವಾಬ್ದಾರಿಯುತ ಆಟ

    ಸೀಸನ್​​-17ರಲ್ಲಿ ಮಕಾಡೆ ಮಲಗಿದ ಮ್ಯಾಕ್ಸ್​ವೆಲ್

    11ರ ಗಡಿ ದಾಟದ 11 ಕೋಟಿ ವೀರನ ಸರಾಸರಿ

ಈ ಸೀಸನ್​ ಐಪಿಎಲ್​ನಲ್ಲಿ ಆರ್​​ಸಿಬಿ ಕಪ್​ ಗೆಲ್ಲಲಿಲ್ಲ. ಆದ್ರೂ ಫ್ಯಾನ್ಸ್​ ತಂಡದ ಬಗ್ಗೆ ಫ್ರೌಡ್​ ಫೀಲ್​​​ ಮಾಡ್ತಿದ್ದಾರೆ. ಇದಕ್ಕೆ ಕಾರಣ ತಂಡ ರಣರೋಚಕ ರೀತಿಯಲ್ಲಿ ಕಮ್​​ಬ್ಯಾಕ್​​​ ಮಾಡಿದ್ದು. ಈ ಹೆಮ್ಮೆಯ ಹೊರತಾಗಿಯೂ ಒಂದು ಬೇಸರ ಅಭಿಮಾನಿಗಳನ್ನ ಕಾಡ್ತಿದೆ. ಅದೇ ಮ್ಯಾಕ್ಸ್​ವೆಲ್​ ಮಹಾಶಯನ ಆಟ. ಈ 11 ಕೋಟಿಯ ಆಟಗಾರ, ಕನಿಷ್ಟ 11ರ ಸರಾಸರಿಯನ್ನೂ ಮೆಂಟೇನ್​ ಮಾಡಲಿಲ್ಲ. ಆರ್​​ಸಿಬಿಯ ಹಿನ್ನಡೆ ಅನುಭವಿಸಿದ್ದು ಈತನಿಂದಲೇ.

ಇಂಡಿಯನ್​ ಪ್ರೀಮಿಯರ್​ ಸೀಸನ್​ 17ರಲ್ಲೂ ಕಪ್​ ನಮ್ದಾಗಲಿಲ್ಲ. ಮೊದಲ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದ ಆರ್​​ಸಿಬಿ ಸೆಕೆಂಡ್​ ಹಾಫ್​ನಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿತ್ತು. ಅಬ್ಬರದ ಬ್ಯಾಟಿಂಗ್​, ಬಿರುಗಾಳಿಯಂತಾ ಬೌಲಿಂಗ್​, ಅಲ್ಟಿಮೇಟ್​ ಫೀಲ್ಡಿಂಗ್​.. ಲೀಗ್​ ಸ್ಟೇಜ್​ನ ಫಸ್ಟ್​ ಹಾಫ್​ನಲ್ಲಿ ಹಳಿತಪ್ಪಿದ್ದ ಆರ್​​ಸಿಬಿ, ಸೆಕೆಂಡ್​ ಹಾಫ್​​​ನಲ್ಲಿ ರೈಟ್​​​ ಟ್ರ್ಯಾಕ್​ಗೆ ಬಂದಿತ್ತು. ಸತತ 6 ಪಂದ್ಯ ಗೆದ್ದು ಗೆಲುವಿನ ಹಳಿಗೂ ಮರಳಿತ್ತು.

ಚೆನ್ನೈ ಎದುರಿನ ಕೊನೆಯ ಪಂದ್ಯದಲ್ಲಿ ಆರ್ಭಟಿಸಿದ್ದ ಬೆಂಗಳೂರು ತಂಡ ಪ್ಲೇ ಆಫ್​ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಎಂಟ್ರಿ ಕೊಟ್ಟಿತ್ತು. ಕಪ್​ ಆಸೆಯನ್ನ ಕೈ ಬಿಟ್ಟಿದ್ದ ಫ್ಯಾನ್ಸ್​ ಮತ್ತೆ ಕಪ್​ ನಮ್ದೇ ಅನ್ನೋಕೆ ಶುರು ಮಾಡಿದ್ರು. ಆದ್ರೆ, ಎಲಿಮಿನೇಟರ್​ ಫೈಟ್​ನಲ್ಲಿ ಎದುರಾಗಿದ್ದು ಮತ್ತದೇ ನಿರಾಸೆ, ಹತಾಶೆ, ಸೋಲಿನ ನೋವು. ಆರ್​​​ಸಿಬಿಯ ಸೋಲಿಗೆ ಕಾರಣ ಹಲವಿವೆ. ಅದ್ರಲ್ಲಿ ಪ್ರಮುಖ ಕಾರಣ ಯಾವುದಪ್ಪಾ ಅಂದ್ರೆ ಅದಕ್ಕೆ ಉತ್ತರ ಗ್ಲೆನ್​ ಮ್ಯಾಕ್ಸ್​ವೆಲ್​​.

ಇದನ್ನೂ ಓದಿ:ಕೆಆರ್​ಎಸ್​ ಡ್ಯಾಂ ನೀರಿನ ಮಟ್ಟದಲ್ಲಿ ಏರಿಕೆ.. ರೈತರಲ್ಲಿ ಮೂಡಿದ ಮಂದಹಾಸ

ಎಲಿಮಿನೇಟರ್​​ನಲ್ಲಿ ಮಕಾಡೆ ಮಲಗಿದ ಮ್ಯಾಕ್ಸ್​ವೆಲ್​
ಎಲಿಮಿನೇಟರ್​​ ಪಂದ್ಯದಲ್ಲಿ ಗೆದ್ದು ಆರ್​​ಸಿಬಿ ಕ್ವಾಲಿಫೈಯರ್​​​ 2ಗೆ ಎಂಟ್ರಿ ಕೊಡಲಿ ಅನ್ನೋದು ಕೋಟ್ಯಾನುಕೋಟಿ ಅಭಿಮಾನಿಗಳ ಕನಸಾಗಿತ್ತು. ಆರ್​​ಸಿಬಿ ಗೆಲುವಿಗಾಗಿ ಪ್ರಾರ್ಥನೆ ಮುಗಿಲುಮುಟ್ಟಿತ್ತು. ಅಭಿಮಾನಿಗಳ ಈ ಎಮೋಶನ್​, ಆಸಿಸ್​​ ಬ್ಯಾಟರ್​​ ಗ್ಲೇನ್​ ಮ್ಯಾಕ್ಸ್​ವೆಲ್​ಗೆ ಕಿಂಚಿತ್ತೂ ಅರ್ಥವೇ ಆಗ್ಲಿಲ್ಲ ಅನ್ಸುತ್ತೆ. ಎಲಿಮಿನೇಟರ್​ನಂತಾ ಮಹತ್ವದ ಪಂದ್ಯದಲ್ಲಿ ಈ ಸೀನಿಯರ್​ ಬ್ಯಾಟರ್​ ಅಷ್ಟು ಹೀನಾಯವಾಗಿ​ ಔಟಾದ್ರು.

ಮಹತ್ವದ ಪಂದ್ಯದಲ್ಲಿ ಬೇಜವಾಬ್ದಾರಿಯುತ ಆಟ
12 ಓವರ್​​ಗಳಾಗಿತ್ತು, ಪ್ರಮುಖ ವಿಕೆಟ್​ಗಳು ಉರುಳಿದ್ವು. ರಾಜಸ್ಥಾನದ ಬೌಲರ್​​ಗಳ ಅದಾಗಲೇ ಮೇಲುಗೈ ಸಾಧಿಸಿದ್ರು. ಪಿಚ್​ ಕೂಡ ಬೌಲರ್​​ಗಳಿಗೆ ಹೆಚ್ಚು ಸಹಾಯ ಮಾಡ್ತಿತ್ತು. ಇಂತh ಸಂದರ್ಭದಲ್ಲಿ ಒಬ್ಬ ಸೀನಿಯರ್ ಆಟಗಾರ ಎಷ್ಟು ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಬೇಕಿತ್ತೋ, ಅದ್ರ ತದ್ವಿರುದ್ಧ ನಡೆ ಅನುಸರಿಸಿದ್ರು ಮ್ಯಾಕ್ಸ್​ವೆಲ್​​. ಮೊದಲ ಎಸೆತದಲ್ಲೇ ಬಿಗ್​ ಶಾಟ್​ ಹೊಡೆಯಲು ಮುಂದಾಗಿ ನಿರ್ಗಮಿಸಿದ್ರು. ಮ್ಯಾಕ್ಸಿ ಸ್ವಲ್ಪ ಎಚ್ಚರಿಕೆಯ ಆಟವಾಡಿ 20 ರನ್​ ಹೆಚ್ಚುವರಿಯಾಗಿ ಸೇರಿದ್ರೂ ಆರ್​​ಸಿಬಿಗೆ ಕ್ವಾಲಿಫೈಯರ್​2ಗೆ ಕ್ವಾಲಿಫೈ ಆಗೋ ಅವಕಾಶ ಹೆಚ್ಚಿತ್ತು.

ಇದನ್ನೂ ಓದಿ:ಆರ್​ಸಿಬಿಯಲ್ಲಿ ಕಾರ್ತಿಕ್​​ಗೆ ಮಹತ್ವದ ಜವಾಬ್ದಾರಿ..? ಕುತೂಹಲ ಮೂಡಿಸಿದ RCB ಮುಖ್ಯ ಕೋಚ್ ನೀಡಿದ ಹೇಳಿಕೆ

17ನೇ ಸೀಸನ್​ನಲ್ಲಿ 11 ಕೋಟಿ ವೀರ ಠುಸ್​ ಪಟಾಕಿ
ಈ ಇಡೀ ಸೀಸನ್​ನಲ್ಲೇ ಮ್ಯಾಕ್ಸ್​ವೆಲ್​ದು ಅಟ್ಟರ್​ಫ್ಲಾಫ್​ ಶೋ. ಈ ಸೀಸನ್​ನ ಆರಂಭದಲ್ಲೀ ಆರ್​​ಸಿಬಿಯನ್ನ ಸಂಕಷ್ಟಕ್ಕೆ ಸಿಲುಕಿಸಿದ್ದು ಈತನ ಆಟವೇ.. ಸೀಸನ್​​ವೊಂದಕ್ಕೆ ಬರೋಬ್ಬರಿ 11 ಕೋಟಿ ಪಡೆಯೋ ಈ ಮ್ಯಾಕ್ಸ್​​ವಲ್ ಮಹಾಶಯನ,​​ ರನ್​ಗಳಿಕೆಯ ಸರಾಸರಿ ಕನಿಷ್ಟ ಹನ್ನೊಂದೂ ಇಲ್ಲ. ಹೇಳಿಕೊಳ್ಳೋಕೆ ವಿಶ್ವ ಶ್ರೇಷ್ಟ ಆಟಗಾರ, ಆಡಿದ ಆಟ ಮಾತ್ರ ಡೊಮೆಸ್ಟಿಕ್​​ ಕ್ರಿಕೆಟರ್ಸ್​ಗಿಂತ ಕಡೆ.

ಈ ಸೀಸನ್​ನಲ್ಲಿ ಮ್ಯಾಕ್ಸ್​ವೆಲ್​​ ಪರ್ಫಾಮೆನ್ಸ್​
ಈ ಸೀಸನ್​ ಐಪಿಎಲ್​ನಲ್ಲಿ 10 ಪಂದ್ಯಗಳನ್ನಾಡಿದ ಗ್ಲೇನ್​ ಮ್ಯಾಕ್ಸ್​ವೆಲ್​ 5.78ರ ಹೀನಾಯ ಸರಾಸರಿಯಲ್ಲಿ ಕೇವಲ 52 ರನ್​ಗಳಿಸಿದ್ರು. ಬ್ಯಾಟಿಂಗ್​ನಲ್ಲಿ ಅಟ್ಟರ್​ ಫ್ಲಾಫ್​ ಆದ ಮ್ಯಾಕ್ಸ್​ವೆಲ್​ ಬೌಲಿಂಗ್​ನಲ್ಲಿ 6 ವಿಕೆಟ್​ ಕಬಳಿಸಿದ್ರು. ಇದೇ ಸೀಸನ್​ನ ದೊಡ್ಡ ಸಾಧನೆ. ಈ ಸೀಸನ್​ನ ಅಧ್ಯಾಯ ಮುಗೀತು. ಇದೀಗ ಮುಂದಿನ ಸೀಸನ್​​ಗೆ ಸಿದ್ಧತೆಗಳು ತೆರೆ ಮರೆಯಲ್ಲಿ ಜೋರಾಗಿವೆ. ವರ್ಷಾಂತ್ಯದಲ್ಲಿ ಮೆಗಾ ಆಕ್ಷನ್​ ನಡೆಯೋದ್ರಿಂದ ರಿಟೈನ್​, ರಿಲೀಸ್​ನ ಲೆಕ್ಕಾಚಾರ ಜೋರಾಗಿವೆ. ಈಗಲೇ ಅಲ್ಲದಿದ್ರೂ, ಇನ್ನು ಕೆಲವೇ ದಿನಗಳಲ್ಲಿ ಆರ್​​ಸಿಬಿ ಕ್ಯಾಂಪ್​ನಲ್ಲೂ ಈ ಚಟುವಟಿಕೆ ಆರಂಭವಾಗಲಿದೆ. ಈ ಸೀಸನ್​ನ ಪರ್ಫಾಮೆನ್ಸ್ ನೋಡಿದ್ರೆ, ಮ್ಯಾಕ್ಸ್​ವೆಲ್ ಅಗತ್ಯತೆ ತಂಡಕ್ಕೆ 1%ನಷ್ಟು ಇಲ್ಲ. ಈ ಸೀಸನ್​ನಲ್ಲಿ ಮ್ಯಾಕ್ಸ್​ವೆಲ್ ಆಡಿದ್ದಾರಲ್ವಾ, ಅದಕ್ಕಿಂತ ಚೆನ್ನಾಗಿ ಆಡೋ ಆಟಗಾರರು ಭಾರತದಲ್ಲೇ ಇದ್ದಾರೆ. ಇನ್ನೂ ಕಡಿಮೆ ಮೊತ್ತಕ್ಕೆ ಸಿಗ್ತಾರೆ.

ಇದನ್ನೂ ಓದಿ‘ಸೋಲಿನಲ್ಲಿ ನೋವು ಇರುತ್ತದೆ, ಆದರೆ..’ RCB ಸೋತ ಬಗ್ಗೆ ಎಬಿಡಿ ಹೇಳಿದ್ದೇನು..?

ಫ್ಲಾಪ್​​ ಶೋ ನೀಡಿದ್ರೂ, ಸ್ಟಾರ್​​ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ನ ಕೈ ಬಿಡುವ ನಿರ್ಧಾರವನ್ನ ಆರ್​​ಸಿಬಿ ಮಾಡುತ್ತಾ ಅನ್ನೋದು ಸದ್ಯ ದೊಡ್ಡ ಪ್ರಶ್ನೆಯಾಗಿದೆ. ಪರ್ಫಾಮೆನ್ಸ್​ಗಿಂತ ಕರ್ಮರ್ಷಿಯಲ್​ ಲೆಕ್ಕಾಚಾರವೇ ಆರ್​​ಸಿಬಿ ಫ್ರಾಂಚೈಸಿಗೆ ಹೆಚ್ಚು. ಹೀಗಾಗಿ ಬಿಗ್​ ಪ್ಲೇಯರ್​ ಅನ್ನೋ ಕಾರಣಕ್ಕೆ ಗ್ಲೇನ್​ ಮ್ಯಾಕ್ಸ್​ವೆಲ್​​​​ನ ಉಳಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಈ ಆಟಗಾರ ಬೇಡವೇ ಬೇಡ ಎಂದ ಫ್ಯಾನ್ಸ್​.. ಮೆಗಾ ಹರಾಜಿಗೂ ಮುನ್ನ RCB ಇವರನ್ನು ಉಳಿಸಿಕೊಳ್ಳೋದು ಡೌಟ್..!

https://newsfirstlive.com/wp-content/uploads/2024/05/MAXWELL-4.jpg

Load More