/newsfirstlive-kannada/media/post_attachments/wp-content/uploads/2024/05/MAXWELL-3.jpg)
ಆರ್​ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್​ಮನ್ ಈ ಬಾರಿಯ ಐಪಿಎಲ್​ನಲ್ಲಿ ಭಾರೀ ಹೀನಾಯ ಪ್ರದರ್ಶನ ಮಾಡಿದ್ದಾರೆ. ಅವರ ಬ್ಯಾಟಿಂಗ್​ ಆರ್ಭಟಿಸದೇ ಇರೋದು ಅಭಿಮಾನಿಗಳಿಗೆ ಚಿಂತೆಗೀಡು ಮಾಡಿದ್ದರೆ, ಕೆಲವು ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೂ ಕಾರಣರಾಗಿದ್ದಾರೆ.
ಒಟ್ಟು 7 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್​ವೆಲ್ ಕೇವಲ 36 ರನ್​ಗಳಿಸಿದ್ದಾರೆ. ಮೊದಲ ಪಂದ್ಯ ಸಿಎಸ್​​ಕೆ ವಿರುದ್ಧ ಸೊನ್ನೆ, ಎರಡನೇ ಪಂದ್ಯದಲ್ಲಿ 3, ಮೂರನೇ ಪಂದ್ಯದಲ್ಲಿ 28 ರನ್ ಗಳಿಸಿರೋದು ಅವರ ಅತ್ಯಧಿಕ ಸ್ಕೋರ್ ಆಗಿದೆ. ಒಟ್ಟು ಮೂರು ಬಾರಿ ಸೊನ್ನೆ ಸುತ್ತಿರುವ ಮ್ಯಾಕ್ಸಿಯ ಸ್ಕೋರ್ ಕಾರ್ಡ್​ 0, 3, 28, 0, 1, 0, 4 ರನ್​​ ಆಗಿದೆ.
ಇದೇ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಟೀಂ ಇಂಡಿಯಾದ ಮಾಜಿ ಹಾಗೂ ಆರ್​ಸಿಬಿ ಮಾಜಿ ಬ್ಯಾಟ್ಸ್​ಮನ್ ಪಾರ್ಥಿವ್ ಪಟೇಲ್.. ಮಾಕ್ಸಿ ಐಪಿಎಲ್​ನ ಅತ್ಯಂತ ದುಬಾರಿ ಆಟಗಾರ. ಆದರೆ ಅವರ ಪ್ರದರ್ಶನ ಮಾತ್ರ ಝೀರೋ ಎಂದು ಕಿಡಿಕಾರಿದ್ದಾರೆ. ಜೊತೆಗೆ ಟ್ವಿಟರ್​ನಲ್ಲಿ ಸಮೀಕ್ಷೆ ಶುರುಮಾಡಿದ್ದಾರೆ. ಪೋಲ್ ಹಾಕಿರುವ ಪಟೇಲ್, ಮ್ಯಾಕ್ಸ್​ವೆಲ್ ನಿಜವಾಗಿಯೂ ಐಪಿಎಲ್​ಗೆ ಉತ್ತಮ ಆಟಗಾರನೋ ಅಥವಾ ಆಸ್ಟ್ರೇಲಿಯಾ ತಂಡಕ್ಕೋ ಎಂದು ಪ್ರಶ್ನೆ ಮಾಡಿದ್ದಾರೆ. ಪಾರ್ಥಿವ್ ಪಟೇಲ್ ಪ್ರಶ್ನೆಗೆ 20, 770 ಮಂದಿ ವೋಟ್ ಮಾಡಿದ್ದಾರೆ. ಅವರಲ್ಲಿ ಶೇಕಡಾ 80.7 ರಷ್ಟು ಆಸ್ಟ್ರೇಲಿಯಾ ಪರ ಎಂದು ವೋಟ್ ಮಾಡಿದ್ರೆ, ಐಪಿಎಲ್ ಪರ ಶೇಕಡಾ 19.3 ರಷ್ಟು ಮಂದಿ ವೋಟ್ ಮಾಡಿದ್ದಾರೆ.
Reading your comments, I thought I’d just ask you what you think about Glenn Maxwell. #IPL2024
— parthiv patel (@parthiv9) May 4, 2024
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us