ಆರ್​​ಸಿಬಿ ತೊರೆದ ಬೆನ್ನಲ್ಲೇ ಮ್ಯಾಕ್ಸಿಗೆ ಖುಲಾಯಿಸಿದ ಅದೃಷ್ಟ; ಪಂಜಾಬ್​​ ತಂಡಕ್ಕೆ ಸ್ಟಾರ್​ ಆಲ್​ರೌಂಡರ್​ ಕ್ಯಾಪ್ಟನ್​​​

author-image
Ganesh Nachikethu
Updated On
ಇವತ್ತು RCB ಗೆಲ್ಲಲು ಪಾಲಿಸಬೇಕು ಐದು ಸೂತ್ರಗಳು.. ರೆಡ್​ ಆರ್ಮಿಗೆ ಟಫ್ ಚಾಲೆಂಜ್..!
Advertisment
  • 2025ರ ಇಂಡಿಯನ್ ಪ್ರೀಮಿಯರ್ ಲೀಗ್​ ಮೆಗಾ ಹರಾಜು
  • ಆರ್​ಸಿಬಿ ಮಾಜಿ ಆಟಗಾರ ಮ್ಯಾಕ್ಸಿಗೆ ಪಂಜಾಬ್​ ಮಣೆ..!
  • ಸ್ಟಾರ್​ ಆಲ್​ರೌಂಡರ್​ ಎಷ್ಟು ಕೋಟಿ ಬಾಚಿಕೊಂಡ್ರು?

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು ಮುಗಿದಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ರಿಲೀಸ್​ ಮಾಡಿದ್ದ ಗ್ಲೆನ್​ ಮ್ಯಾಕ್ಸ್​ವೆಲ್​ ಅವರು ಪಂಜಾಬ್​ ತಂಡದ ಪಾಲಾಗಿದ್ದಾರೆ. ಪಂಜಾಬ್​ ಕಿಂಗ್ಸ್​, ಸನ್​ರೈಸರ್ಸ್​ ಹೈದರಾಬಾದ್​, ಚೆನ್ನೈ ಸೂಪರ್​ ಕಿಂಗ್ಸ್​ ಮಧ್ಯೆ ಮ್ಯಾಕ್ಸಿ ಖರೀದಿಗೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಪಂಜಾಬ್​ ಕಿಂಗ್ಸ್​ 4.20 ಕೋಟಿ ನೀಡಿ ಮ್ಯಾಕ್ಸಿ ಅವರನ್ನು ಖರೀದಿಸಿದೆ.

ಆರ್​​ಸಿಬಿಯಿಂದ ಕೊಕ್​

ಉತ್ತಮ ಪ್ರದರ್ಶನ ನೀಡದ ದುಬಾರಿ ಆಟಗಾರರನ್ನೇ ಆರ್​ಸಿಬಿ ಕೈ ಬಿಟ್ಟಿದೆ. ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರನ್ನು ಆರ್​​ಸಿಬಿ ರಿಲೀಸ್​ ಮಾಡಿತ್ತು. 2021ರ ಹರಾಜಿನಲ್ಲಿ ಮ್ಯಾಕ್ಸ್‌ವೆಲ್‌ ಅವರನ್ನು 14.25 ಕೋಟಿ ರೂಪಾಯಿ ನೀಡಿ ಆರ್​​ಸಿಬಿ ಖರೀದಿ ಮಾಡಿತ್ತು. 2023ರ ಐಪಿಎಲ್‌ನಲ್ಲಿ 400 ರನ್ ಗಳಿಸಿದ್ದ ಮ್ಯಾಕ್ಸಿ ಕಳೆದ ಸೀಸನ್​ 2024ರ ಐಪಿಎಲ್‌ನಲ್ಲಿ ಕೇವಲ 52 ರನ್​ ಗಳಸಿದರು. ಈ ಮೂಲಕ ಆರ್​ಸಿಬಿಗೆ ಮ್ಯಾಕ್ಸ್​ವೆಲ್​ ದೊಡ್ಡ ತಲೆನೋವಾಗಿ ಪರಿಣಮಿಸಿದ್ರು.

2021ರಿಂದ 2023ರವರೆಗೆ ಆರ್​ಸಿಬಿ ಪರ ಮ್ಯಾಕ್ಸಿ ಅದ್ಭುತ ಆಲ್​ರೌಂಡರ್ ಆಟವನ್ನಾಡಿದ್ದರು. 2021ರಲ್ಲಿ ಮ್ಯಾಕ್ಸ್​​ವೆಲ್ 513, 2022ರಲ್ಲಿ 301, 2023ರಕ್ಕು 400 ರನ್​​ ಬಾರಿಸಿದ್ದರು. 2024ರಲ್ಲಿ ಕೇವಲ 52 ರನ್​​ ಮಾತ್ರ ಬಾರಿಸಿದ್ದಾರೆ. ಆಡಿರುವ 10 ಪಂದ್ಯಗಳಲ್ಲೂ ಮ್ಯಾಕ್ಸ್​ವೆಲ್ ಕೆಟ್ಟ ಪ್ರದರ್ಶನ ನೀಡಿ ಆರ್​ಸಿಬಿ ಮ್ಯಾನೇಜ್ಮೆಂಟ್​​ನ ಕೆಂಗಣ್ಣಿಗೆ ಗುರಿಯಾಗಿದ್ರು.

ಪಂಜಾಬ್​​​ನಿಂದ ಬಿಗ್​ ಆಫರ್​​

ಇನ್ನು, 2025ರ ಮೊದಲಾರ್ಧ ಐಪಿಎಲ್​ ಸೀಸನ್​ಗೆ ಶ್ರೇಯಸ್​ ಅಯ್ಯರ್​​ ಲಭ್ಯರಿಲ್ಲ. ಹಾಗಾಗಿ ಅನುಭವಿ ಆಟಗಾರ ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​​ಗೆ ಪಂಜಾಬ್​ ಕಿಂಗ್ಸ್​ ತಂಡ ನಾಯಕತ್ವ ಪಟ್ಟ ಕಟ್ಟೋ ಸಾಧ್ಯತೆ ಇದೆ. ಮುಖ್ಯ ಕೋಚ್​​ ರಿಕಿ ಪಾಂಟಿಂಗ್​​​ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಇದೆ.

ಇದನ್ನೂ ಓದಿ:ಆರ್​​ಸಿಬಿಗೆ ಬಿಗ್​ ಶಾಕ್​​; ಐಪಿಎಲ್​ ಶುರುವಾಗೋ ಮುನ್ನವೇ ಕೈ ಕೊಟ್ಟ ಮೂವರು ಸ್ಟಾರ್​ ಆಟಗಾರರು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment