/newsfirstlive-kannada/media/post_attachments/wp-content/uploads/2025/04/gt.jpg)
ಲಖೌನ್ನಲ್ಲಿ ಇವತ್ತು ಎಲ್ಎಸ್ಜಿ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ಹೈವೋಲ್ಟೇಜ್ ಕಾಳಗ ನಡೆಯಲಿದೆ. ಈ ಮಧ್ಯೆ ಗುಜರಾತ್ ತಂಡಕ್ಕೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಫಿಲಿಪ್ಸ್ ಐಪಿಎಲ್-2025 ನಿಂದ ಹೊರ ಬಿದ್ದಿದ್ದಾರೆ.
ಫಿಲಿಪ್ಸ್ ಅವರ ತೊಡೆ ಭಾಗಕ್ಕೆ ಗಾಯವಾಗಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಗುಜರಾತ್ ಫ್ರಾಂಚೈಸಿ 2 ಕೋಟಿ ನೀಡಿ ಫಿಲಿಪ್ಸ್ ಅವರನ್ನು ಖರೀದಿಸಿತ್ತು. ಎಪ್ರಿಲ್ 6 ರಂದು ಗುಜರಾತ್ ಟೈಟನ್ಸ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯವನ್ನಾಡಿತ್ತು. ಈ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರು. ಗಾಯವು ಗಂಭೀರ ಸ್ವರೂಪದ್ದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಸ್ಟ್ರಾಂಗ್ ಕಂಬ್ಯಾಕ್ಗೆ ಮತ್ತೊಂದು ಅವಕಾಶ.. RCB ಮುಂದಿನ ಪಂದ್ಯ ಯಾವಾಗ..?
ಗ್ಲೆನ್ ಫಿಲಿಪ್ಸ್ ಮುಂಬರುವ ಐಪಿಎಲ್ ಪಂದ್ಯಗಳನ್ನು ಆಡುವ ಯಾವುದೇ ಖಚಿತತೆ ಇಲ್ಲ. ಫ್ರಾಂಚೈಸಿ ಅವರ ಬದಲಿಗೆ ಬೇರೆ ಯಾವ ಆಟಗಾರನನ್ನು ಖರೀದಿಸುತ್ತೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಮಾಹಿತಿ ಪ್ರಕಾರ, ಫಿಲಿಪ್ಸ್ ಈಗಾಗಲೇ ನ್ಯೂಜಿಲೆಂಡ್ಗೆ ವಾಪಸ್ ಆಗಿದ್ದಾರೆ ಎಂದು ವರದಿಯಾಗಿದೆ.
28 ವರ್ಷದ ಈ ಸ್ಟಾರ್ ಆಲ್ರೌಂಡರ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ಪರ ಆಡುತ್ತಾರೆ. ಕಳೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಆಟವಾಡಿದ್ದರು. ನ್ಯೂಜಿಲೆಂಡ್ ರನ್ನರ್ ಅಪ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು.. ಕೊನೆಗೂ ಕಾರಣ ರಿವೀಲ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್