newsfirstkannada.com

ಟಿಕೆಟ್​​ಗಾಗಿ ಬಿಜೆಪಿ ಪಾಳಯದಲ್ಲಿ​​ ಭಿನ್ನಮತ ಸ್ಫೋಟ; ಜಗದೀಶ್​​​ ಶೆಟ್ಟರ್​​​​ ವಿರುದ್ಧ ಗೋ ಬ್ಯಾಕ್​​ ಅಭಿಯಾನ

Share :

Published March 21, 2024 at 6:18am

Update March 21, 2024 at 6:37am

  ರೇಣುಕಾಚಾರ್ಯಗೆ ಬಿಎಸ್​ವೈ ​ಚಾರ್ಜ್​, ಉಚ್ಚಾಟನೆಯ ಎಚ್ಚರಿಕೆ!

  ‘ಯಾರೋ ನೋಡಿದ ಹೆಣ್ಣನ್ನು ನಾನು ಮದುವೆಯಾಗಲ್ಲ’

  ವಿ.ಸೋಮಣ್ಣಗೆ ಟಿಕೆಟ್​​ ನೀಡಿದಕ್ಕೆ ಮಾಧುಸ್ವಾಮಿ ಬೇಸರ!

ಲೋಕಸಭೆ ಟಿಕೆಟ್​ಗಾಗಿ ಬಿಜೆಪಿ ಒಡೆದ ಮನೆಯಾದಂತಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಕುಂದಾ ಸಿಹಿ ಕಹಿಯಾಗುವಂತೆ ಕಾಣಿಸ್ತಾ ಇದೆ. ಬೆಣ್ಣೆನಗರಿಯಲ್ಲಿ ​ ರೆಬೆಲ್ ಆಗಿರುವ​ ರೇಣುಕಾಚಾರ್ಯಗೆ ಪಕ್ಷದಿಂದ ಹೊರ ಹಾಕುವ ಎಚ್ಚರಿಕೆ ಶಾಕ್ ಕೊಟ್ಟಿದೆ. ಇತ್ತ ತುಮಕೂರಿನಲ್ಲಿ ಯಾರೋ ನೋಡಿದ ಹೆಣ್ಣನ್ನು ನಾನು ಮದುವೆಯಾಗಲ್ಲ ಅಂತ ಮಾಧುಸ್ವಾಮಿ ಕಾಂಗ್ರೆಸ್ ಸೇರುವ ವದಂತಿಗೆ ತೆರೆ ಎಳೆದಿದ್ದಾರೆ.

ಬೆಳಗಾವಿಯಲ್ಲಿ ಶೆಟ್ಟರ್​ ಸ್ಪರ್ಧೆಗೆ ಮುಂದುವರಿದ ವಿರೋಧ

ವಿಧಾನಸಭೆ ಚುನಾವಣೆಯಲ್ಲಿ ಹಸ್ತಾಕ್ಷರ ಬರೆದಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೋಕಸಭೆ ಚುನಾವಣೆ ಹೊತ್ತಿಗೆ ಕೈ ಕೊಟ್ಟು ಮತ್ತೆ ಕಮಲ ಮುಡಿದಿದ್ದರು. ಧಾರವಾಡದ ಪೇಡಾ ಬಯಸಿದ್ದ ಶೆಟ್ಟರ್​ಗೆ ಬಿಜೆಪಿ ಹೈಕಮಾಂಡ್​​ಗೆ ಬೆಳಗಾವಿ ಕುಂದಾ ಸಿಹಿ ನೀಡೋದಾಗಿ ಹೇಳಿತ್ತು. ಮೊದಲು ಬೆಳಗಾವಿ ಬೇಡ ಅಂತಿದ್ದ ಶೆಟ್ಟರ್ ಬಳಿಕ ಸ್ಪರ್ಧೆಗೆ ಒಪ್ಪಿದ್ದರು. ಆದ್ರೆ ಬೆಳಗಾವಿಯಲ್ಲಿ ಶೆಟ್ಟರ್ ಸ್ಪರ್ಧೆಗೆ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಜಾಲತಾಣದಲ್ಲೂ ಗೋ ಬ್ಯಾಕ್ ಶೆಟ್ಟರ್ ಅಭಿಯಾನ ಜೋರಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾಗೆ ಟ್ಯಾಗ್ ಮಾಡಿರೋ ನೆಟ್ಟಿಗರು ಶೆಟ್ಟರ್ ಸ್ಪರ್ಧೆಯನ್ನ ವಿರೋಧಿಸಿದ್ದಾರೆ. ಒಂದ್ಕಡೆ ಧಾರವಾಡದಲ್ಲಿ ಟಿಕೆಟ್ ಸಿಕ್ಕಿಲ್ಲ. ಇದೀಗ ಬೆಳಗಾವಿ ಸ್ಪರ್ಧೆಗೆ ವಿರೋಧ ವ್ಯಕ್ತವಾಗ್ತಿರೋದು ಮಾಜಿ ಸಿಎಂ ಶೆಟ್ಟರ್​ಗೆ ಟೆನ್ಷನ್ ತಂದಿದೆ.

ಎಲ್ಲವನ್ನು ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಚುನಾವಣಾ ಸಮಿತಿಯವರು ಬೈಟೆಕ್ ಮಾಡಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಣೆ ಮಾಡುತ್ತಾರೆ. ಬೆಳಗಾವಿಯಿಂದ ಟಿಕೆಟ್ ಸಿಗುತ್ತೆ. ಅಲ್ಲಿಂದ ಸ್ಪರ್ಧೆ ಮಾಡುತ್ತೇನೆ.

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ರೇಣುಕಾಗೆ ಬಿಎಸ್​​ವೈ ಲೆಫ್ಟ್​ ರೈಟ್.. ಪಕ್ಷದಿಂದ ಹೊರಹಾಕುವ ಎಚ್ಚರಿಕೆ

ಬೆಣ್ಣೆನಗರಿ ದಾವಣಗೆರೆಯಲ್ಲಿ ಈ ಬಾರಿ ಸಿದ್ದೇಶ್ವರ್ ಬದಲು ಪತ್ನಿ ಗಾಯತ್ರಿ ಸಿದ್ದೇಶ್ವರ್​​ಗೆ ಟಿಕೆಟ್ ನೀಡಿರೋದು ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಭ್ಯರ್ಥಿ ಬದಲಿಸುವಂತೆ ಮಾಜಿ ಸಚಿವ ರೇಣುಕಾಚಾರ್ಯ ಅಂಡ್ ಟೀಂ ಆಗ್ರಹಿಸಿದ್ದು, ಕಳೆದೊಂದು ವಾರದಿಂದ ಅತೃಪ್ತರ ತಂಡ ಕಟ್ಟಿಕೊಂಡು ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಆದ್ರೆ ರೇಣುಕಾಚಾರ್ಯ ಸಿಟ್ಟಾಗಿರುವ ಹೈಕಮಾಂಡ್ ನಾಯಕರು ಅವರನ್ನ ಪಕ್ಷದಿಂದ ಹೊರ ಹಾಕುವಂತೆ ಸೂಚಿಸಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ, ರೇಣುಕಾಚಾರ್ಯಗೆ ಚಾರ್ಜ್ ಮಾಡಿದ್ದಾರೆ. ಪಕ್ಷದಲ್ಲಿ ಇದ್ದು ಕೆಲಸ ಮಾಡುವಂತಿದ್ದರೆ ಮಾಡು, ಇಲ್ಲ ಬೇರೆ ಯಾವುದಾದರೂ ಪಕ್ಷಕ್ಕೆ ಹೋಗು ಅಂತ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ರಾಜಿ ಸಂಧಾನ ಮಾಡಿಸುವಂತೆ ದಾವಣಗೆರೆ ಬಿಜೆಪಿ ನಾಯಕರು ಕೇಳಿಕೊಂಡಿದ್ದು, ಏನಾದ್ರೂ ಮಾಡಿಕೊಳ್ಳಿ, ನಾನು ಬರೋದಿಲ್ಲ. ನೀವು ಚುನಾವಣೆ ಕೆಲಸ ಮಾಡಿ ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಅಂತ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಯಾರೋ ನೋಡಿದ ಹೆಣ್ಣನ್ನು ಮದುವೆಯಾಗಲ್ಲ ಎಂದ ಮಾಧುಸ್ವಾಮಿ

ಕಲ್ಪತರುನಾಡು ತುಮಕೂರಿನಲ್ಲಿ ವಿ.ಸೋಮಣ್ಣಗೆ ಟಿಕೆಟ್ ನೀಡಿದ್ದಕ್ಕೆ ಮಾಜಿ ಸಚಿವ ಮಾಧುಸ್ವಾಮಿ ಬೇಸರಗೊಂಡಿದ್ದಾರೆ. ಮಾಧುಸ್ವಾಮಿ ಮನವೊಲಿಕೆಗೆ ಬಿಜೆಪಿ ಯತ್ನಿಸಿದ್ರೆ ಮತ್ತೊಂದೆಡೆ ಕಾಂಗ್ರೆಸ್ ಕೂಡ ಗಾಳ ಹಾಕಿದೆ. ಈ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಮಾಧುಸ್ವಾಮಿ ಬಿ ಫಾರಂ ಚೇಂಜ್ ಮಾಡಿ ಕಾಂಗ್ರೆಸ್​​ನವರೂ ಕರೆದ್ರೂ ನಿಲ್ಲಲ್ಲ. ಬಿಜೆಪಿಯವರು ಕರೆದ್ರೋ ನಿಲ್ಲಲ್ಲ. ಯಾರೋ ನೋಡಿ ಬಂದ ಹೆಣ್ಣನ್ನ ನಾನು ಮದುವೆಯಾಗಲ್ಲ. ನಾನು ಯಾರ ಬಳಿ ಕಾಂಗ್ರೆಸ್​​​ಗೆ​​ ಬಂದೇ ಬರ್ತೀನಿ ಅಂತ ಹೇಳಿಲ್ಲ ಎಂದಿದ್ದಾರೆ.

ನಾನು ಅಂತಹ ಸಣ್ಣ ಲೇವಲ್​ಗೆ ಇಳಿದು ರಾಜಕಾರಣ ಮಾಡಲ್ಲ

ಸಿದ್ದರಾಮಯ್ಯ, ಶಿವಕುಮಾರ್, ಪರಮೇಶ್ವರ್ ಮಾತಾಡಿದ್ದಾರೆಂದು ಹೇಳುತ್ತಿದ್ದೀರಿ ಅಲ್ಲ, ಅದು ಯಾವುದು ಆಗಿಲ್ಲ. ಸುಮ್ಮನೇ ನೀವೆ ಹೇಳಿಕೊಂಡು ಹೋಗುತ್ತಿದ್ದೀರಿ. ಬಿ ಫಾರಂ ಚೇಂಜ್ ಮಾಡಿ ಕಾಂಗ್ರೆಸ್​​ನವರೂ ಕರೆದ್ರೂ ನಿಲ್ಲಲ್ಲ. ಬಿಜೆಪಿಯವರು ಕರೆದ್ರೋ ನಿಲ್ಲಲ್ಲ. ನಾನು ಅಂತಹ ಸಣ್ಣ ಲೇವಲ್​ಗೆ ಇಳಿದು ರಾಜಕಾರಣ ಮಾಡಲ್ಲ. ಸೋಮಣ್ಣ ಬದಲು ನೀನು ನಿಲ್ಲು ಅಂದರೂ ಈಗ ನಿಲ್ಲಲ್ಲ. ಯಾರೋ ನೋಡಿಕೊಂಡು ಬಂದ ಹೆಣ್ಣನ್ನು ನಾನು ಮದುವೆ ಆಗಲು ತಯಾರಿಲ್ಲ.

ಮಾಧುಸ್ವಾಮಿ, ಮಾಜಿ ಸಚಿವ

ಬಿಜೆಪಿಯೊಳಗಿನ ಭಿನ್ನಮತ ಚುನಾವಣೆಯ ಫಲಿತಾಂಶದ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. 28ಕ್ಕೆ 28 ಸೀಟು ಗೆಲ್ಲುತ್ತೇವೆ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ಭಿನ್ನಮತ ಕಂಟಕವಾಗುವ ಲಕ್ಷಣ ಕಾಣಿಸ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿಕೆಟ್​​ಗಾಗಿ ಬಿಜೆಪಿ ಪಾಳಯದಲ್ಲಿ​​ ಭಿನ್ನಮತ ಸ್ಫೋಟ; ಜಗದೀಶ್​​​ ಶೆಟ್ಟರ್​​​​ ವಿರುದ್ಧ ಗೋ ಬ್ಯಾಕ್​​ ಅಭಿಯಾನ

https://newsfirstlive.com/wp-content/uploads/2023/09/Jagadish-Shettar.jpg

Load More