newsfirstkannada.com

ದುಡ್ಡು ಮಾಡೋ ದುರಾಸೆ; ಗೋವಾದಲ್ಲಿ 25 ಲಕ್ಷ ಗೆದ್ದವನಿಗೆ ಕಾದಿತ್ತು ಬಿಗ್​ ಶಾಕ್​!​

Share :

Published August 11, 2023 at 4:42pm

    ದುಡ್ಡು ಮಾಡಲೇಬೇಕು ಎಂದು ಜಿದ್ದಿಗೆ ಬಿದ್ದಿದ್ದ

    ಬೆಂಗಳೂರಿನಿಂದ ಗೋವಾಗೆ ಹೋಗಿದ್ದ ಭೂಪ!

    ಲಕ್ಷಗಟ್ಟಲೇ ಹಣ ಮಾಡಿ ಬಂದವನಿಗೆ ಆಗಿದ್ದೇನು?

ಬೆಂಗಳೂರು: ಸಖತ್‌ ಮಜಾ ಮಾಡಬೇಕು ಅಂದ್ರೆ ನೆನಪಾಗೋದೇ ಗೋವಾ ಅನ್ನೋ ವಿಸ್ಮಯ ನಗರಿ. ಕುಡಿದು, ಕುಪ್ಪಳಿಸಿ, ಎಂಜಾಯ್ ಮಾಡೋದರ ಜೊತೆಗೆ ಕ್ಯಾಸಿನೋಗಳಿಗೆ ಹೋಗಿ, ದುಡ್ಡು ಮಾಡಬಹುದು ಅನ್ನೋದು ಕೆಲವರ ಲೆಕ್ಕಾಚಾರ. ಹೀಗೆ ಕನಸು ಕಂಡ ನಗರದ ವ್ಯಾಪಾರಿಯೊಬ್ಬ ಗೋವಾ ಕ್ಯಾಸಿನೋಗೆ ಹೋಗಿ ದುಡ್ಡು ಮಾಡ್ತಾನೆ. ಆದ್ರೆ, ಆಮೇಲೆ ನಡಿಯೋದೆ ಬೇರೆ.

ಹನುಮಂತನಗರ ನಿವಾಸಿ ತಿಲಕ್‌ ರಸ್ತೆ ಬದಿಯಲ್ಲಿ ಟೀ ವ್ಯಾಪಾರ ಮಾಡಿ ಕೊಂಡಿದ್ದ. ತಿಲಕ್​ಗೆ​ ಗೋವಾಗೆ ಹೋಗಿ ದುಡ್ಡು ಮಾಡ್ಬೇಕು ಅನ್ನೋ ಆಸೆ ಚಿಗುರುತ್ತೆ. ಅದರಂತೆ 30ನೇ ತಾರೀಖು, ನಾಲ್ಕು ಲಕ್ಷ ರೂಪಾಯಿ ಎತ್ಕೊಂಡು ಗೋವಾಗೆ ಹೋಗ್ತಾರೆ. ನಾಲ್ಕು ಲಕ್ಷ ರೂಪಾಯಿಯಿಂದ ಬರೋಬ್ಬರಿ 25 ಲಕ್ಷ ರೂಪಾಯಿ ಕ್ಯಾಸಿನೋದಲ್ಲಿ ಸಂಪಾದನೆಯನ್ನೂ ಮಾಡ್ತಾರೆ.

ಬಳಿಕ 25 ಲಕ್ಷದೊಂದಿಗೆ ಇದೇ ತಿಂಗಳ ನಾಲ್ಕನೇ ತಾರೀಖು ಗೋವಾದಿಂದ ತಿಲಕ್​ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ.  ಆದ್ರೆ, ನಗರಕ್ಕೆ ಬಂದ ಇವರು ಹತ್ತಿರದಲ್ಲಿಯೇ ಇದ್ದ ಬೇಕರಿಗೆ ಹೋಗಿ ಧಮ್ ಹೊಡೆಯುತ್ತಿದ್ದರು. ಆಗ ಕ್ವಿಡ್‌ ಕಾರೊಂದು ಎಂಟ್ರಿ ಕೊಟ್ಟಿತು. ಪರಿಚಯವಿರೋ ಕಾರ್ತಿಕ್, ಪಾಂಡು ಮತ್ತು ಈಶ್ವರ್ ಅನ್ನೋರು ಬಲವಂತವಾಗಿ ತಿಲಕ್‌ನ ಕಾರು ಹತ್ತಿಸಿಕೊಂಡು ಹೋಗೇ ಬಿಡ್ತಾರೆ.

ನೋಡ್‌ ನೋಡ್ತಿದ್ದಂತೆ ಆರೋಪಿಗಳು ಬೆಂಗಳೂರು ವಿಶ್ವವಿದ್ಯಾಲಯದ ನಿರ್ಜನ ಪ್ರದೇಶ ತಲುಪಿ ಬಿಡ್ತಾರೆ. ತಿಲಕ್‌ಗೆ ಏನ್ ಮಾಡ್ಬೇಕು ಅನ್ನೋದೇ ಗೊತ್ತಾಗಲ್ಲ. ಈ ವೇಳೆ ತಿಲಕ್​ ಮೇಲೆ ಹಲ್ಲೆ ಮಾಡ್ತಾರೆ. ಬಳಿಕ ಕ್ಯಾಸಿನೋದಲ್ಲಿ ಗೆದ್ದಿರೋ 10 ಲಕ್ಷ ರೂಪಾಯಿ ಕೊಡು ಅಂತಾ ಬೆದರಿಸುತ್ತಾರೆ. ನಂತ್ರ ತಿಲಕ್‌ನ ಮೊಬೈಲ್‌ ಪಡೆದು 10 ಲಕ್ಷ ರೂಪಾಯಿ ಟ್ರಾನ್ಸ್‌ಫರ್ ಮಾಡಿಸಿಕೊಳ್ತಾರೆ.

ಆ ನಂತರ ನೆಲಮಂಗಲದ ಬಳಿಯ ರೆಸಾರ್ಟ್‌ಗೆ ಹೋಗಿ, ಅಲ್ಲಿ ಸ್ಟೇ ಮಾಡ್ತಾರೆ. ಈ ನಡುವೆ, ನಾವು ಕ್ಯಾಸಿನೋದಲ್ಲಿ ಮೋಸ ಮಾಡಿ ಗೆದ್ದಿದ್ದೇನೆ. ಅದಕ್ಕಾಗಿ ಹಣ ವಾಪಸ್ ಕೊಡುತ್ತಿದ್ದೇನೆ ಎಂದು ಬಲವಂತವಾಗಿ ವಿಡಿಯೋ ಮಾಡಿಸಿಕೊಳ್ತಾರೆ. 8ನೇ ತಾರೀಖು, ಬೆಂಗಳೂರು ಸಮೀಪ ಬಿಟ್ಟು, ಮೊಬೈಲ್‌ ವಾಪಸ್ ಕೊಟ್ಟು ಆರೋಪಿಗಳು ಎಸ್ಕೇಪ್ ಆಗುತ್ತಾರೆ.

ತಿಲಕ್‌ಗೆ ಕಾದಿತ್ತು ಮತ್ತೊಂದು ಶಾಕ್​​

ಅಬ್ಬಾ ಹೇಗೋ ಬಿಟ್ಟರಲ್ಲಾ ಅಂತಾ ನಿಟ್ಟುಸಿರು ಬಿಟ್ಟ ತಿಲಕ್‌ಗೆ ಮತ್ತೊಂದು ಶಾಕಿಂಗ್ ಕಾದಿತ್ತು. ಅದೇನಂದ್ರೆ, ಮೊಬೈಲ್‌ನಲ್ಲಿನ ಬ್ಯಾಂಕ್‌ ಆ್ಯಪ್‌ ಚೆಕ್ ಮಾಡಿದಾಗ ಆರೋಪಿಗಳು ಒಟ್ಟು 15 ಲಕ್ಷ ರೂಪಾಯಿ ಟ್ರಾನ್ಸ್‌ಫರ್ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಸದ್ಯ ತಿಲಕ್​ ಆರೋಪಿಗಳ ವಿರುದ್ಧ ಹನುಮಂತರನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಕೇಸ್​​ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಡ್ಡು ಮಾಡೋ ದುರಾಸೆ; ಗೋವಾದಲ್ಲಿ 25 ಲಕ್ಷ ಗೆದ್ದವನಿಗೆ ಕಾದಿತ್ತು ಬಿಗ್​ ಶಾಕ್​!​

https://newsfirstlive.com/wp-content/uploads/2023/06/Indian-Money.jpg

Load More