/newsfirstlive-kannada/media/post_attachments/wp-content/uploads/2025/07/GOA-CM-ABOUT-KARNATAKA-MAHADAYI-PROJECT.jpg)
ಕರ್ನಾಟಕಕ್ಕೆ ನೆಲ.. ಜಲ.. ಗಡಿ ವಿಚಾರದಲ್ಲಿ ಅಕ್ಕಪಕ್ಕದ ರಾಜ್ಯಗಳೇ ಮುಳುವಾಗಿವೆ.. ನೆರೆಯ ರಾಜ್ಯಗಳು ನೀರಿಗೆ ಅಡ್ಡಗಾಲು ಹಾಕೋದೇ ಕಾಯವಾಗಿದೆ. ಇದೀಗ ಮಹದಾಯಿ ಯೋಜನೆಯಲ್ಲಿ ಗೋವಾ ಸಿಎಂ ಕ್ಯಾತೆ ತೆಗೆದಿದ್ದಾರೆ. ಕೇಂದ್ರ ಸರ್ಕಾರದ ಹೆಸರು ಹೇಳುತ್ತಾ ಕಳಸಾ-ಬಂಡೂರಿ ನಾಲಾ ಯೋಜನೆಗೆ ತಕರಾರು ತೆಗೆದಿದ್ದಾರೆ. ಪ್ರಮೋದ್ ಸಾವಂತ್ ಮಾತನ್ನ ಕರ್ನಾಟಕ ಸಿಎಂ ಸಿದ್ದರಾಮಯ್ಯ ತೀಕ್ಷ್ಮವಾಗಿ ಖಂಡಿಸಿದ್ದಾರೆ.
ಮಹದಾಯಿ ಯೋಜನೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ. ಮಹದಾಯಿ ನದಿಯ ನೀರನ್ನ ಕಳಸಾ-ಬಂಡೂರಿ ನಾಲೆ ಮೂಲಕ ಬೆಳಗಾವಿ.. ಗದಗ, ಧಾರವಾಡ, ಬಾಗಲಕೋಟೆಗೆ ಹರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಆದ್ರೀಗ ಮತ್ತೆ ಗೋವಾ ಮಹದಾಯಿ ವಿಚಾರದಲ್ಲಿ ಕ್ಯಾತೆ ತೆಗೆದಿದೆ.
ಇದನ್ನೂ ಓದಿ: 8 ತಿಂಗಳ ಮಗಳ ಜೊತೆ 3 ದೇಶ ಸುತ್ತಿದ ಸ್ಯಾಂಡಲ್ವುಡ್ ದಂಪತಿ.. ಯಾರು ಈ ಕ್ಯೂಟ್ ಬೇಬಿ?
ಮಹದಾಯಿ ಯೋಜನೆ ಬಗ್ಗೆ ಮತ್ತೆ ಗೋವಾ ಸಿಎಂ ಕ್ಯಾತೆ!
ಮಹದಾಯಿ ವಿಚಾರದಲ್ಲಿ ಗೋವಾ ಮತ್ತೆ ಕ್ಯಾತೆ ತೆಗೆದಿದೆ. ಮಹದಾಯಿ ನದಿ ನೀರನ್ನ ಕುಡಿಯುವ ನೀರಿಗಾಗಿ ತಿರುಗಿಸಲು ಕಳಸಾ-ಬಂಡೂರಿ ಯೋಜನೆ ಆರಂಭಿಸಲು ಮುಂದಾಗಿದೆ. ಈ ಯೋಜನೆ ಕೈಗೊಳ್ಳುತ್ತಿರೋ ಕರ್ನಾಟಕಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಅಡ್ಡಗಾಲು ಹಾಕಲು ಮುಂದಾಗಿದ್ದಾರೆ. ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡುವುದಿಲ್ಲ ಅಂತ ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ. ನನಗೆ ವೈಯಕ್ತಿಕವಾಗಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಭರವಸೆ ಕೊಟ್ಟಿದ್ದಾರೆ ಅಂತ ಗೋವಾ ವಿಧಾನಸಭೆಯಲ್ಲೇ ಕಿರಿಕ್ ಹೇಳಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: ರಾಧಾ, ಕೃಷ್ಣನ ಗೆಟಪ್ನಲ್ಲಿ ಭವ್ಯಾ ಗೌಡ, ಕಿರಣ್ ರಾಜ್… ಕರ್ಣನ ಒಂದೊಂದು ಸೀನ್ಗೂ ವೀಕ್ಷಕರು ಫಿದಾ!
ಗೋವಾ ಸಿಎಂ ಹೇಳಿಕೆಗೆ ಕರ್ನಾಟಕ ಸಿಎಂ ಕಿಡಿ
ಗೋವಾ ವಿಧಾನಸಭೆಯಲ್ಲೇ ಸಿಎಂ ಪ್ರಮೋದ್ ಸಾವಂತ್ ಕೊಟ್ಟ ಹೇಳಿಕೆ ಕರ್ನಾಟಕದ ಕೆಂಗಣ್ಣಿಗೆ ಗುರಿಯಾಗಿದೆ. ಕರುನಾಡಿನ ಜನರ ಕುಡಿಯುವ ನೀರಿಗೆ ಕಲ್ಲು ಹಾಕ್ತಿರೋ ಸಾವಂತ್ ಹೇಳಿಕೆ ಸಿಎಂ ಸಿದ್ದರಾಮಯ್ಯರ ಆಕ್ರೋಶಕ್ಕೆ ಗುರಿಯಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧವೂ ಸಿಎಂ ಕಿಡಿಕಾರಿದ್ದಾರೆ.
ಕರುನಾಡ ಜನತೆಗೆ ಕೇಂದ್ರ ದ್ರೋಹ
ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹ. ಇದನ್ನು ಕರ್ನಾಟಕ ಸರ್ಕಾರ ಅತ್ಯುಗ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲ ಈ ಅನ್ಯಾಯದ ವಿರುದ್ಧ ಸಮಸ್ತ ಕನ್ನಡಿಗರೊಂದಿಗೆ ಹೋರಾಟ ನಡೆಸಲಿದೆ. ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ಅವರೇ ನನಗೆ ತಿಳಿಸಿದ್ದಾರೆ ಎಂದು ಸಾವಂತ್ ಗೋವಾ ವಿಧಾನಸಭೆಯಲ್ಲಿ ಹೇಳಿದ್ದಾರೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ ಪ್ರದೇಶದ ಜನತೆಯ ಕುಡಿಯುವ ನೀರಿಗಾಗಿ 40 ಟಿಎಂಸಿ ನೀರನ್ನು ಬಳಸಿಕೊಳ್ಳುವ ಕಳಸಾ-ಬಂಡೂರಿ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಸಿದ್ದಗೊಂಡಿದ್ದು, ಗೋವಾದ ಬಿಜೆಪಿ ಸರ್ಕಾರದ ಜೊತೆ ಶಾಮೀಲಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಅಡ್ಡಗಾಲು ಹಾಕುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ ಕರ್ನಾಟಕದ ಜನತೆಯ ವಿರುದ್ಧ ಸೇಡು ತೀರಿಸಿಕೊಳ್ಳುವ ದುರುದ್ದೇಶದಿಂದಲೇ ಮಹದಾಯಿ ಯೋಜನೆಗೆ ಪರಿಸರ ಖಾತೆಯ ಅನುಮತಿಯನ್ನು ನಿರಾಕರಿಸಿರುವುದು ಸ್ಪಷ್ಟವಾಗಿದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಾನೂನು ಸಚಿವ ಹೆಚ್‌ಕೆ ಪಾಟೀಲ್ ಕೂಡಾ ಗೋವಾ ಸಿಎಂ ಹೇಳಿಕೆ ಬಗ್ಗೆ ತೀವ್ರ ಆಕ್ರೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಜನರ ಕುಡಿಯುವ ನೀರಿಗೆ ಕಲ್ಲು ಹಾಕುವ ಕೆಲಸಕ್ಕೆ ಗೋವಾ ಮುಂದಾಗಿದೆ. ಇದರ ವಿರುದ್ಧ ಕರ್ನಾಟಕ ಸರ್ಕಾರ ಯಾವ ರೀತಿ ಹೋರಾಟ ಮಾಡುತ್ತೆ ಅನ್ನೋದೆ ಮುಂದಿರೋ ಪ್ರಶ್ನೆ.
ಇದನ್ನೂ ಓದಿ: ಪಂತ್ಗೆ ಗಾಯ, ಮೈದಾನದಲ್ಲೇ ಬಂತು ರಕ್ತ.. ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ