ಗೋವಾಗಿಂತ ಆ ‘ಥೈಲ್ಯಾಂಡ್‌’ ವಾಸಿ.. ವಿದೇಶಿಗರು ಬ್ಯಾಂಕಾಂಕ್‌ ಇಷ್ಟ ಪಡೋಕಿದೆ 5 ಕಾರಣ!

author-image
Gopal Kulkarni
Updated On
ಗೋವಾಗಿಂತ ಆ ‘ಥೈಲ್ಯಾಂಡ್‌’ ವಾಸಿ.. ವಿದೇಶಿಗರು ಬ್ಯಾಂಕಾಂಕ್‌ ಇಷ್ಟ ಪಡೋಕಿದೆ 5 ಕಾರಣ!
Advertisment
  • ಗೋವಾಗಿಂತ ಬ್ಯಾಂಕಾಕ್ ಹೆಚ್ಚು ಇಷ್ಟಪಡುತ್ತಿರುವುದೇಕೆ ವಿದೇಶಿ ಪ್ರವಾಸಿಗರು
  • ಈ ಬಾರಿ ಹೊಸ ವರ್ಷದ ಸಂಭ್ರಮ ಗೋವಾಗಿಂತ ಬ್ಯಾಂಕಾಕ್​ನಲ್ಲಿ ಕಳೆಗಟ್ಟಿದ್ದೇಕೆ?
  • ಯಾವ ಕಾರಣಗಳಿಂದ ಗೋವಾ ಪ್ರವಾಸದಿಂದ ವಿಮುಖರಾಗುತ್ತಿದ್ದಾರೆ ವಿದೇಶಿಗರು?

ಹೊಸ ವರ್ಷಕ್ಕೆ ಜಗತ್ತು ಕಾಲಿಟ್ಟು ಕೆಲವೇ ದಿನಗಳ ಕಳೆದಿವೆ. ಇಂದಿಗೂ ಕೂಡ ಹೊಸ ವರ್ಷವನ್ನು ಬರಮಾಡಿಕೊಂಡ ರೀತಿ ಎಲ್ಲರಿಗೂ ಕೂಡ ನೆನಪಿದೆ. ಹೊಸ ವರ್ಷ ಸಂಭ್ರಮ ಅಂದ್ರೆ ಅದಕ್ಕೆ ವಿಶ್ವದ ಹಲವು ನಗರಗಳು ಹಲವು ರಾಜ್ಯಗಳು ಪ್ರಮುಖವಾಗಿ ಸ್ಮರಣೆಗೆ ಬರುತ್ತವೆ. ಭಾರತದಲ್ಲಿ ಅತಿ ಅದ್ಧೂರಿಯಿಂದ ಹೊಸ ವರ್ಷದ ಸಂಭ್ರಮಾಚರಣೆ ನಡೆಯುವುದು ಗೋವಾ, ಹಿಮಾಚಲ ಪ್ರದೇಶ ಹಾಗೂ ಹಲವು ಈಶಾನ್ಯ ರಾಜ್ಯಗಳಲ್ಲಿ. ಆದ್ರೆ ಇತ್ತೀಚೆಗೆ ಗೋವಾ ವಿಷಯ ಬಂದಾಗ ಹಲವು ವಿದೇಶಗಿರು ಬಿಗ್ ನೋ ಹೇಳುತ್ತಿದ್ದಾರೆ ಅದಕ್ಕೆ ಕಾರಣಗಳು ಕೂಡ ಇವೆ. ಈ ಮೊದಲು ಹೊಸ ವರ್ಷದ ಸಂಭ್ರಮಾಚರಣೆಗೆ ಟೂರಿಸ್ಟ್​ಗಳ ಅತಿ ನೆಚ್ಚಿನ ತಾಣವಾಗಿದ್ದ ಗೋವಾ ಈಗ ಬೇಡದ ಕೂಸಾಗಿ ಪರಿಣಮಿಸುತ್ತಿದೆ.

ಇದನ್ನೂ ಓದಿ:ಕಾಲೇಜ್ ಹುಡುಗಿಯ ಕೂದಲು ಕಟ್ ಮಾಡಿ ಓಡಿ ಹೋದ ಕಿಡಿಗೇಡಿ; ಪೊಲೀಸರಿಂದ ತನಿಖೆ!

ಗೋವಾವನ್ನು ವಿದೇಶಿ ಪ್ರವಾಸಿಗರು ದೂರ ಇಡಲು ಕಾರಣ ಅನೇಕ. ಅವುಗಳನ್ನು ನೋಡುವ ಮೊದಲು ಗೋವಾಗೆ ಪರ್ಯಾಯವಾಗಿ ಈಗ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತಿರೋದು ಬ್ಯಾಂಕಾಕ್​, ಥೈಲ್ಯಾಂಡ್​ನ ರಾಜಧಾನಿ ಗೋವಾಗಿಂತ ಈಗ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದೆ. ಅದರಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಮತ್ತೊಂದು ಮಟ್ಟಕ್ಕೆ ಪ್ರವಾಸಿಗರನ್ನು ಸೆಳೆಯುವಲ್ಲಿ ಥೈಲ್ಯಾಂಡ್​ನ ರಾಜಧಾನಿ ಯಶಸ್ವಿಯಾಗಿದೆ. ಗೋವಾ ಹಾಗೂ ಬ್ಯಾಂಕಾಕ್​ ಹೋಲಿಸಿ ನೋಡುವ ಪ್ರವಾಸಿಗರಲ್ಲಿ ಹೆಚ್ಚಿನವರು ಬ್ಯಾಂಕಾಕ್​ನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪ್ರಮಖ ಐದು ಕಾರಣಗಳು ಹೀಗಿವೆ.

1. ಮುಕ್ತತೆ
ಮುಕ್ತತೆ ಅನ್ನೋದು ಪ್ರವಾಸಿ ತಾಣಗಳಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಗೋವಾಗಿಂತ ಹೆಚ್ಚು ಓಪನೆಸ್​ನ್ನು ವಿದೇಶಿಗರು ಬ್ಯಾಂಕಾಕ್​ನಲ್ಲಿ ಕಾಣುತ್ತಿದ್ದಾರೆ. ಗೋವಾಗಿಂತ ಅತ್ಯಂತ ಕೈಗೆಟುಕುವ ದರದಲ್ಲಿ ಅವರಿಗೆ ಮೂಲಸೌಕರ್ಯಗಳು ದೊರೆಯುತ್ತಿವೆ. ಅದು ಮಾತ್ರವಲ್ಲ ಕೆಲವೊಂದು ಮನರಂಜನೆಗಳು ಗೋವಾದಲ್ಲಿ ಕಾನೂನು ಬಾಹಿರ ತುಂಬಾ ಕದ್ದು ಮುಚ್ಚಿ ಅಂತಹ ಮನರಂಜನೆಗಳನ್ನು ತಮ್ಮದಾಗಿಸಿಕೊಳ್ಳಬೇಕಾಗುತ್ತದೆ. ಆದ್ರೆ ಬ್ಯಾಂಕಾಕ್​ನಲ್ಲಿ ಅತ್ಯದ್ಬುತ ಮನರಂಜನೆಗಳನ್ನು ಕಾನೂನಾತ್ಮಕವಾಗಿ ಅತ್ಯಂತ ಮುಕ್ತವಾಗಿ ನಡೆಸಲಾಗುತ್ತದೆ. ಇದು ಬ್ಯಾಂಕಾಕ್​ನ್ನು ಹೆಚ್ಚು ಆಕರ್ಷಿತವನ್ನಾಗಿ ಮಾಡುತ್ತಿದೆ.

2. ಗೌರವಕ್ಕಿಂತ ಅಶ್ಲೀಲತೆ ಜಾಸ್ತಿ
ಗೋವಾದಲ್ಲಿ ಇತ್ತೀಚೆಗೆ ವಿದೇಶಿ ಪ್ರವಾಸಿಗರು ಅನೇಕ ರೀತಿಯ ಕೆಟ್ಟ ಅನುಭವಗಳನ್ನು ಪಡೆದಿದ್ದಾರೆ. ವಿದೇಶಿ ಪ್ರವಾಸಿಗರನ್ನು ಸರಿಯಾಗಿ ನಡೆಸಿಕೊಳ್ಳುವಲ್ಲಿ ಸ್ಥಳೀಯರು ವಿಫಲರಾಗಿದ್ದಾರೆ. ಅತ್ಯಂತ ಕೀಳಾಗಿ ಅವರನ್ನು ಕಾಣಲಾಗುತ್ತದೆ. ಅವರಿಗೆ ಗೌರವ ನೀಡುವುದಕ್ಕಿಂತ ಅಶ್ಲೀಲವಾಗಿ ನೋಡಿದ್ದು ಜಾಸ್ತಿ ಎನ್ನುತ್ತಿವೆ ಕೆಲವು ವರದಿಗಳು. ಅದಕ್ಕಿಂತಲೂ ಹೀಗೆ ಸಮಸ್ಯೆ ಎದುರಾದಾಗ ಅವರಿಗೆ ಯಾವ ರೀತಿಯ ಬೆಂಬಲವೂ ಕೂಡ ಸಿಗುವುದಿಲ್ಲ. ಯಾರು ಕೂಡ ಅವರ ಪರವಾಗಿ ಧ್ವನಿಯೆತ್ತುವುದಿಲ್ಲ.

ಇದನ್ನೂ ಓದಿ:ಅಯೋಧ್ಯೆಯಲ್ಲಿ ಭಾರೀ ಭದ್ರತಾ ಲೋಪ; ಅಧಿಕಾರಿಗಳನ್ನ ಬೆಚ್ಚಿಬೀಳಿಸಿದ ಆರೋಪಿಯ ಕನ್ನಡಕ..!

3. ಸುರಕ್ಷತೆಯ ವಾತಾವರಣ
ಗೋವಾಗೆ ಹೋಲಿಸಿ ನೋಡಿದಲ್ಲಿ ಬ್ಯಾಂಕಾಕ್​ನಲ್ಲಿ ಪ್ರವಾಸಿಗರು ಹೆಚ್ಚು ಸುರಕ್ಷತೆಯ ಅನುಭವನ್ನು ಪಡೆಯುತ್ತಾರೆ. ಅಲ್ಲಿ ಮುಕ್ತ ಹಾಗೂ ಸುರಕ್ಷಿತ ವಾತಾವರಣವಿದೆ. ಕ್ಯಾಸಿನೋದಿಂದ ಹಿಡಿದು ಬೀಚ್​​ಗಳವರೆಗೂ ಅಲ್ಲಿ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಹೆಚ್ಚು ಗಮನವನ್ನು ಕೊಡಲಾಗುತ್ತದೆ. ಅಲ್ಲಿಯ ಜನರು ಕೂಡ ತುಂಬಾ ಸ್ನೇಹದಿಂದ ವಿದೇಶಿಗರೊಂದಿಗೆ ವರ್ತಿಸುತ್ತಾರೆ. ಆದ್ರೆ ಗೋವಾದಲ್ಲಿ ಈ ರೀತಿಯ ಸನ್ನಡತೆಯನ್ನು ವಿದೇಶಿ ಪ್ರವಾಸಿಗರು ಕಾಣುವುದಿಲ್ಲ. ಹೀಗಾಗಿ ಗೋವಾಗೆ ಹೋಲಿಸಿದಲ್ಲಿ ಬ್ಯಾಂಕಾಕ್​ ಟೂರಿಸ್ಟ್​​ಗಳ ಮೊದಲ ಆಯ್ಕೆಯಾಗುತ್ತಿದೆ.

4. ಬ್ಯಾಂಕಾಕ್​ ಗೋವಾಗಿಂತ ಅಗ್ಗ
ಈಗಾಗಲೇ ಹೇಳಿದಂತೆ ಮುಕ್ತತೆ, ಸುರಕ್ಷಿತ ವಾತಾವರಣ ಹಾಗೂ ಬೆಲೆಗಳ ವಿಚಾರದಲ್ಲಿ ಬ್ಯಾಂಕಾಕ್ ಗೋವಾಗಿಂತ ಭಿನ್ನವಾಗಿದೆ. ನಿಮಗೆ ಆಶ್ಚರ್ಯವಾದರೂ ಕೂಡ ಇದು ನಿಜ. ಗೋವಾ ಪ್ರವಾಸಕ್ಕಿಂತ ಬ್ಯಾಂಕಾಕ್ ಪ್ರವಾಸ ಅತ್ಯಂತ ಅಗ್ಗದ ದರದಲ್ಲಿ ಮಾಡಿ ಮುಗಿಸಬಹುದು. ಹೋಟೆಲ್ ರೂಮ್​, ಆಹಾರ ಹಾಗೂ ಪಾನೀಯಗಳ ವಿಚಾರದಲ್ಲಿ ಗೋವಾಗೆ ಹೋಲಿಸಿದರೆ ಬ್ಯಾಂಕಾಕ್​ ಅಗ್ಗ ಹೀಗಾಗಿ ಪ್ರವಾಸಿಗರು ಹೆಚ್ಚು ಬ್ಯಾಂಕಾಕ್​ನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

5. ವೀಸಾ ರಹಿತ ಎಂಟ್ರಿ
ಥೈಲ್ಯಾಂಡ್ ಸರ್ಕಾರ ತನ್ನ ದೇಶಕ್ಕೆ ಬರುವ ಪ್ರವಾಸಿಗರಿಗೆ ವಿಸಾ ಫ್ರೀ ಎಂಟ್ರಿ ಕೊಡುತ್ತಿದೆ. ಹೀಗಾಗಿ ನೀವು ಗೋವಾಗೆ ಟಿಕೆಟ್​ ಬುಕ್ ಮಾಡುವ ಮೊದಲೇ ಥೈಲ್ಯಾಂಡ್​ ಲ್ಲಿ ಸರಳವಾಗಿ ಇಳಿದುಬಿಡಬಹುದು. ಅಲ್ಲಿ ಕೇವಲ ನಿಮ್ಮ ಪಾಸ್​ಪೋರ್ಟ್​ಗೆ ಒಂದು ಸ್ಟ್ಯಾಂಪ್ ಹೊಡೆದು ಪ್ರವೇಶವನ್ನು ನೀಡುತ್ತಾರೆ. ಈ ಎಲ್ಲಾ ಪ್ರಮುಖ ಕಾರಣಗಳಿಂದ ವಿದೇಶಿ ಪ್ರವಾಸಿಗರ ನೆಚ್ಚಿನ ತಾಣವಾಗಿ ಬ್ಯಾಂಕಾಕ್ ಈಗ ಗೋವಾವನ್ನು ಹಿಂದಿಕ್ಕಿದೆ.

ಕೆಲವು ದಿನಗಳ ಹಿಂದಷ್ಟೇ ಗೋವಾಗಿ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಕುಸಿಯುತ್ತಿರುವ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಅದು ಹೊಸ ವರ್ಷದ ಸಂಭ್ರಮಾಚರಣೆಯಲ್ಲೂ ಕೂಡ ನಿಜವಾಗಿದೆ. ಹೀಗಾಗಿ ಗೋವಾ ಸರ್ಕಾರ ವಿದೇಶಿ ಪ್ರವಾಸಿಗರನ್ನು ಸೆಳೆಯಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಗೋವಾ ವಿದೇಶಿ ಪ್ರವಾಸಿಗರ ಪಟ್ಟಿಯಿಂದಲೇ ಕಾಣೆಯಾದರೂ ಆಶ್ಚರ್ಯಪಡಬೇಕಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment