/newsfirstlive-kannada/media/post_attachments/wp-content/uploads/2025/03/dold.jpg)
ಚಿತ್ರದುರ್ಗ: ಕಾಂತಾರ ಸಿನಿಮಾ ಕಥೆಯನ್ನೇ ಹೋಲುವ ದೈವದ ಆಭರಣಗಳು ಪತ್ತೆಯಾಗಿವೆ. 60 ವರ್ಷಗಳ ಹಿಂದೆ ಜಮೀನಿನಲ್ಲಿ ಹೂತುಹೋಗಿದ್ದ ದೇವರ ಆಭರಣ ಚಳ್ಳಕೆರೆ ತಾಲೂಕಿನ ಬಂಗಾರ ದೇವರಹಟ್ಟಿ ಗ್ರಾಮದಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: SSLC, ITI, BE ಮುಗಿಸಿದವ್ರಿಗೆ ಗುಡ್ನ್ಯೂಸ್.. 9,970 ಹುದ್ದೆಗಳಿಗೆ ಅರ್ಜಿ ಆಹ್ವಾನ
ದೇವಸ್ಥಾನದ ಬುನಾದಿ ಹಾಕುವ ವೇಳೆ ದೇವರ ಚಿನ್ನದ ಆಭರಣ ಇರುವ ಪೆಟ್ಟಿಗೆ ಪತ್ತೆಯಾಗಿದೆ. ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿಗೆ ಸೇರಿದ ದೇವರ ಆಭರಣ ಇದಾಗಿದೆ. ಪೂಜಾರಿಯೊಬ್ಬ 60 ವರ್ಷಗಳ ಹಿಂದೆ ಜಾತ್ರೆ ನಂತರ ಆಭರಣದ ಪೆಟ್ಟಿಗೆಯನ್ನು ಹೂತಿಟ್ಟಿದ್ದ. ಪ್ರತಿ ವರ್ಷ ಜಾತ್ರೆಯಲ್ಲಿ ಮಾತ್ರ ಆ ದೇವರ ಆಭರಣ ಹೊರತೆಗೆಯುತ್ತಿದ್ದ ಪೂಜಾರಿ.
ಆದ್ರೆ, ಆಭರಣದ ಪೆಟ್ಟಿಗೆ ಎಲ್ಲಿದೆ ಅಂತಾ ಯಾರಿಗೂ ಹೇಳದೇ ಪೂಜಾರಿ ಮೃತ ಪಟ್ಟ. ಇದೇ ವಿಚಾರವಾಗಿ ಪೂಜಾರಿ ಕುಟುಂಬಸ್ಥ ಜೊತೆಗೆ ಗ್ರಾಮಸ್ಥರಿಗೆ ಜಗಳ ಆಡುತ್ತಿದ್ದರು. ಹೀಗಾಗಿ ದೇವರ ಆಭರಣ ಕಳುವು ಹಿನ್ನೆಲೆಯಲ್ಲಿ ಪೂಜಾರಿ ಕುಟುಂಬ ಗ್ರಾಮ ತೊರೆದಿದ್ದರು.
ದೇವಸ್ಥಾನ ನಿರ್ಮಾಣಕ್ಕೆ ಬುನಾದಿ ಅಗೆಯುವ ವೇಳೆ ಪೆಟ್ಟಿಗೆಯೊಂದು ಪತ್ತೆಯಾಗಿದೆ. ಆಗ ಖಾಲಿ ಪೆಟ್ಟಿಗೆ ಅಂತಾ ಗುಜರಿಗೆ ಹಾಕಲು ಗ್ರಾಮಸ್ಥರು ಮುಂದಾಗಿದ್ದರು. ಆದರೆ ಪೆಟ್ಟಿಗೆ ತೆರೆದು ನೋಡಿದರೆ ದೇವರ ಬಂಗಾರದ ಆಭರಣ ಕಂಡು ಗ್ರಾಮಸ್ಥರು ಶಾಕ್ ಆಗಿದ್ದಾರೆ. ಸದ್ಯ ಬಂಗಾರದ ಆಭರಣಗಳಿಗೆ ಪಾಲಿಶ್ ಮಾಡಲು ಗ್ರಾಮಸ್ಥರು ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ