ದೇಶದ್ರೋಹ.. ಚಿನ್ನದ ಪದಕ ಕೈ ತಪ್ಪಿದ್ದು ಹೇಗೆ? ವಿನೇಶ್ ಫೋಗಟ್ ಮೇಲೆ ಬ್ರಿಜ್ ಭೂಷಣ್ ಗಂಭೀರ ಆರೋಪ

author-image
Gopal Kulkarni
Updated On
ದೇಶದ್ರೋಹ.. ಚಿನ್ನದ ಪದಕ ಕೈ ತಪ್ಪಿದ್ದು ಹೇಗೆ? ವಿನೇಶ್ ಫೋಗಟ್ ಮೇಲೆ ಬ್ರಿಜ್ ಭೂಷಣ್ ಗಂಭೀರ ಆರೋಪ
Advertisment
  • ಕಾಂಗ್ರೆಸ್ ಸೇರಿದ ವಿನೇಶ್ ಪೋಗಟ್ ಮೇಲೆ ಶುರು ಬ್ರಿಜ್ ಭೂಷಣ್ ಸಮರ
  • ದೇವರು ಸರಿಯಾದ ಶಿಕ್ಷೆ ನೀಡಿದ್ದಾನೆ ಎಂದ WFI ಮಾಜಿ ಮುಖ್ಯಸ್ಥನ ಆರೋಪವೇನು?
  • ಈ ಕುಸ್ತಿಪಟುವಿಂದಾಗಿ ದೇಶ 6 ಚಿನ್ನದ ಪದಕ ಕಳೆದುಕೊಂಡಿದೆ; ಸಂಜಯ್ ಸಿಂಗ್​

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಬಂಗಾರ ಪದಕ ಗೆಲ್ಲುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ಕಳೆದುಕೊಂಡಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ವಿರುದ್ಧ, ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಮುಖ್ಯಸ್ಥ ಬ್ರಿಜ್​ ಭೂಷಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿ ಹರಿಯಾಣದ ಜಲೂನಾ ಕ್ಷೇತ್ರದಿಂದ ಟಿಕೆಟ್ ಪಡೆದಿರುವ ವಿನೇಶ್ ಪೋಗಟ್​ ಈಗ ಪರ ವಿರೋಧದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವಿನೇಶ್ ಪೋಗಟ್​ಗೆ ದೇವರು ಸರಿಯಾದ ಶಿಕ್ಷೆ ನೀಡಿದ್ದಾನೆ ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ. ನನ್ನ ವಿರುದ್ಧ ನಡೆದ ಪ್ರತಿಭಟನೆ ವ್ಯವಸ್ಥಿತ ರಾಜಕೀಯ ಪಿತೂರಿ ಅನ್ನೊದಕ್ಕೆ ಈಗ ವಿನೇಶ್ ಹಾಗೂ ಭಜರಂಗ ಪೂನಿಯಾ ಕಾಂಗ್ರೆಸ್​ ಸೇರಿದ್ದೇ ಸಾಕ್ಷಿ ಎಂದಿದ್ದಾರೆ.

publive-image


">September 7, 2024


ಇದನ್ನೂ ಓದಿ:ಜಯ್ ಶಾ ಸ್ಥಾನದ ಮೇಲೆ ಕಣ್ಣಿಟ್ಟ ಮೂವರು; ಆ ಪಟ್ಟಿಯಲ್ಲಿ ಓರ್ವ 3 ಪಂದ್ಯಗಳನ್ನು ಆಡಿದ ಕ್ರಿಕೆಟಿಗ

ಭಜರಂಗ ಪೂನಿಯಾ ಆಗಲಿ ವಿನೇಶ್ ಪೋಗಟ್ ಆಗಿ ಇನ್ನೊಬ್ಬರ ಸ್ಥಾನವನ್ನು ಕಿತ್ತುಕೊಂಡು ಕುಸ್ತಿ ಅಂಗಳಕ್ಕೆ ಇಳಿದಿದ್ರು. ಭಜರಂಗ ಪೂನಿಯಾ ಕಳೆದ ಏಷಿಯನ್ ಗೇಮ್ಸ್​ನಲ್ಲಿ ಟ್ರಯಲ್ಸ್ ನೀಡದೇ ಭಾಗವಹಿಸಿದ್ದು ಸತ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಒಬ್ಬ ಆಟಗಾರ ಒಂದೇ ದಿನ ಎರಡು ತೂಕಗಳ ವಿಭಾಗದಲ್ಲಿ ಟ್ರಯಲ್ಸ್ ನೀಡಬಹುದೇ? ತೂಕದ ಬಳಿಕ ಐದು ಗಂಟೆಗಳ ಕಾಲ ಟ್ರಯಲ್ಸ್ ತಡೆ ಹಿಡಿಯಬಹುದೇ ಅನ್ನೋದನ್ನ ನಾನು ವಿನೇಶ್​ಗೆ ಕೇಳ ಬಯಸುತ್ತೇನೆ. ನೀವು ವಂಚನೆಯಿಂದ ಒಲಿಂಪಿಕ್ಸ್ ಅಂಗಳಕ್ಕೆ ಇಳಿದ್ರಿ. ಟ್ರಯಲ್ಸ್​ನಲ್ಲಿ ನಿಮ್ಮನ್ನು ಸೋಲಿಸಿದ ಹುಡುಗಿಯ ಸ್ಥಾನವನ್ನು ಕಿತ್ತುಕೊಂಡು ಪ್ಯಾರಿಸ್ ಒಲಿಂಪಿಕ್ಸ್​​ಗೆ ಹೋಗಿದ್ರಿ. ಹೀಗಾಗಿ ವಿನೇಶ್​ಗೆ ದೇವರು ಸರಿಯಾದ ಶಿಕ್ಷೆ ಕೊಟ್ಟಿದ್ದಾನೆ ಎಂದು ಬ್ರಿಜ್ ಭೂಷಣ್ ಕಿಡಿಕಾರಿದ್ದಾರೆ.

ಇದನ್ನೂ ಓದಿ:ರಾಜಕೀಯಕ್ಕೆ ಮಹಿಳಾ ಕುಸ್ತಿಪಟು; ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ವಿನೇಶ್​​ ಪೋಗಟ್​ ಕಣಕ್ಕೆ

publive-image

‘ರಾಜಕಾರಣದ ದಾಹಕ್ಕೆ ಕುಸ್ತಿಪಟುಗಳಿಂದ ದೇಶದ್ರೋಹ’
ವಿನೇಶ್ ಪೋಗಟ್ ಹಾಗೂ ಬಜರಂಗ್ ಪೂನಿಯಾ ಕಾಂಗ್ರೆಸ್​ ಸೇರ್ಪಡೆ ವಿಚಾರವಾಗಿ ಮಾತನಾಡಿದ ಭಾರತೀಯ ಕುಸ್ತಿಪಟುಗಳ ಸಂಸ್ಥೆಯ ಮುಖ್ಯಸ್ಥ ಸಂಜಯ್​ ಸಿಂಗ್ ಕೂಡ ಕಿಡಿಕಾರಿದ್ದಾರೆ. ಈ ಇಬ್ಬರೂ ಕ್ರೀಡಾಪಟುಗಳ ರಾಜಕೀಯ ದಾಹಕ್ಕೆ ದೇಶದ ಕ್ರೀಡಾ ವ್ಯವಸ್ಥೆಗೆ ದೊಡ್ಡ ಧಕ್ಕೆಯಾಗಿದೆ. ರಾಜಕೀಯ ಆಸೆಗೋಸ್ಕರ ಇವರು ದೇಶದ್ರೋಹದ ಕೆಲಸ ಮಾಡಿದ್ದಾರೆ. ಇವರಿಂದಾಗಿ ದೇಶ ಒಟ್ಟು 6 ಬಂಗಾರದ ಪದಕಗಳನ್ನು ಕಳೆದುಕೊಂಡಿದೆ ಎಂದು ಸಂಜಯ್ ಸಿಂಗ್​ ಗುಡುಗಿದ್ದಾರೆ.

ವಿನೇಶ್ ಪೋಗಟ್ ಹಾಗೂ ಬಜರಂಗ ಪೂನಿಯಾ ಇಂದಿಗೂ ಕೂಡ ಕುಸ್ತಿಪಟುಗಳು ಎಂಬ ಶ್ಲಾಘನೆಗೆ ಒಳಪಟ್ಟಿದ್ದರು. ಆದ್ರೆ ಅವರು ಕಾಂಗ್ರೆಸ್​ ಸೇರುವ ಮೂಲಕ ದೆಹಲಿಯ ಜಂತರ್ ಮಂತರ್​ನಲ್ಲಿ ನಡೆದ ಪ್ರತಿಭಟನೆಗೆ ಯಾರೂ ಇಂಧನಶಕ್ತಿಯಾಗಿ ನಿಂತಿದ್ದರೂ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment