ಆಭರಣ ಪ್ರಿಯರಿಗೆ ಬಿಗ್ ಶಾಕ್; ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿದ ಬಂಗಾರದ ಬೆಲೆ!

author-image
Veena Gangani
Updated On
₹1 ಲಕ್ಷ ದಾಟಿದ ಚಿನ್ನದ ಬೆಲೆ.. ಅಕ್ಷಯ ತೃತೀಯಗೆ ಬಂಗಾರ ಮತ್ತಷ್ಟು ದುಬಾರಿ; ಕಾರಣವೇನು?
Advertisment
  • ಆಭರಣ ಪ್ರಿಯರಿಗೆ ಮತ್ತೆ ಶಾಕಿಂಗ್​ ಸುದ್ದಿ ಇದು
  • ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ
  • 10 ಗ್ರಾಂ ಚಿನ್ನದ ಬೆಲೆ ಎಷ್ಟಕ್ಕೆ ಏರಿಕೆ ಗೊತ್ತಾ?

ಸಾಮಾನ್ಯವಾಗಿ ಚಿನ್ನ ಎಂದರೆ ಹೆಣ್ಣು ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ಹಬ್ಬ ಹರಿದಿನ, ಮದುವೆ ಹೀಗೆ ಯಾವುದೇ ಶುಭ ಸಮಾರಂಭವಿದ್ದರೂ ಮನೆಯಲ್ಲಿ ಚಿನ್ನದ ಖರೀದಿ ಜೋರಾಗಿ ನಡೆಯುತ್ತದೆ. ಹೀಗಾಗಿಯೇ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಿದೆ. ಆದ್ರೆ, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ. ಹೌದು, 99.9% ಶುದ್ಧತೆಯ ಚಿನ್ನವು 10 ಗ್ರಾಂಗೆ 90,750 ರೂ. ತಲುಪಿದ್ದರೆ, ಬೆಳ್ಳಿ ಕೆಜಿಗೆ 1,02,500 ರೂ.ಗೆ ಏರಿಕೆ ಕಂಡಿದೆ.

publive-image

ಇದನ್ನೂ ಓದಿ: RCB Unbox event: ಯಾರೆಲ್ಲ ಬರ್ತಿದ್ದಾರೆ? ಮನೆಯಲ್ಲೇ ಕೂತು ನೇರ ಪ್ರಸಾರ ವೀಕ್ಷಿಸಬಹುದು..!

ಸೋಮವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೊಸ ದಾಖಲೆಯ ಮಟ್ಟವನ್ನು ತಲುಪಿದ್ದು, ತಲಾ 1,300 ರೂಪಾಯಿಗಳಷ್ಟು ಏರಿಕೆಯಾಗಿದೆ. ಸದ್ಯ ಚಿನ್ನದ ಬೆಲೆಯೂ ತಲಾ 1,300 ರೂ.ಗಳಷ್ಟು ಏರಿಕೆಯಾಗಿವೆ. ಒಟ್ಟಾಗಿ 10 ಗ್ರಾಂ ಚಿನ್ನದ ಬೆಲೆ 91 ಸಾವಿರ ರೂಪಾಯಿ ಆಗಿದ್ದು, ಚಿನ್ನದ ಬೆಲೆ ಮಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ನಾಸಿಕ್ ಹಾಗೂ ಜಲಗಾಂವ್ ಚಿನ್ನದ ವ್ಯಾಪಾರಿಗಳು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment