/newsfirstlive-kannada/media/post_attachments/wp-content/uploads/2024/10/Gold-Rate.jpg)
2025ರ ಹೊಸ ವರ್ಷ ಎಲ್ಲರ ಜೀವನದಲ್ಲೂ ಹರುಷ ತರಲಿ, ಬದುಕು ಬೆಳಗಿಸಲಿ. ನ್ಯೂ ಇಯರ್ದಂದೇ ಚಿನ್ನ, ಬೆಳ್ಳಿಯ ಆಭರಣಗಳನ್ನು ಖರೀದಿ ಮಾಡುವವರಿಗೆ ಶುಭಸುದ್ದಿ. ಈ ಮೌಲ್ಯಯುತ ವಸ್ತುಗಳಲ್ಲಿ ಬೆಲೆಗಳು ಏರಿಳಿತವಾಗುವುದು ಸಾಮಾನ್ಯ. ಯಾವಗಲೂ 10, 20 ರೂಪಾಯಿ ಇಳಿಕೆ ಕಾಣುತ್ತಿದ್ದ ಚಿನ್ನ, ಬೆಳ್ಳಿ ಹೊಸ ವರ್ಷದಂದು ಭಾರೀ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಖರೀದಿ ಮಾಡುವವರಿಗೆ ಇಂದು ಆರ್ಥಿಕ ಶುಭವಾಗುವುದು ಖಚಿತ.
ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹ 7,225 ಇದೆ. ಇದು ನಿನ್ನೆ ₹ 7,265 ಇತ್ತು. ಈ ಎರಡು ದಿನದ ಬೆಲೆ ಹೋಲಿಕೆ ಮಾಡಿದರೆ ದರದಲ್ಲಿ 40 ರೂಪಾಯಿ ಇಳಿಕೆ ಆಗಿದೆ.
22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 72,250 ಇದೆ. ಇದು ನಿನ್ನೆ ₹ 72,650 ಇತ್ತು. ಇಲ್ಲಿಯೂ ಬೆಲೆಯಲ್ಲಿ ಬದಲಾವಣೆ ಆಗಿದ್ದು ನಿನ್ನೆಗಿಂತ ಇಂದು 400 ರೂಪಾಯಿ ಕಡಿಮೆ ಆಗಿದೆ.
24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹ 7,586 ಆಗಿದೆ. ಇದು ನಿನ್ನೆ ₹ 7,628 ಇತ್ತು. 24 ಕ್ಯಾರೆಟ್ ಬೆಲೆಯಲ್ಲೂ ವ್ಯತ್ಯಾಸ ಆಗಿದ್ದು 42 ರೂಪಾಯಿ ಇಳಿಕೆ ಕಂಡಿದೆ.
24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ 75,860 ಇದೆ. ಇದು ನಿನ್ನೆ ₹ 76,280 ಇತ್ತು. ನಿನ್ನೆ ದರ, ಇವತ್ತಿನ ದರ ಈ ಎರಡರ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿದೆ. 420 ರೂಪಾಯಿ ದರ ಕಡಿಮೆ ಆಗಿದೆ.
ಇದನ್ನೂ ಓದಿ:BBK11; ವೀಲ್ಚೇರ್ ಮೇಲಿದ್ದ ತಮ್ಮನನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಮೋಕ್ಷಿತಾ.. ಅಕ್ಕನನ್ನೇ ಮರೆತನಾ ಸಹೋದರ?
ಈ ನಗರಗಳಲ್ಲಿ ಬಂಗಾರದ ಬೆಲೆ..!
- ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹ 72,100 ಇದ್ರೆ, 24 ಕ್ಯಾರೆಟ್ ಚಿನ್ನ ₹ 75,710 ಇದೆ.
- ಕೋಲ್ಕತ್ತದಲ್ಲಿ 22 ಕ್ಯಾರೆಟ್ ಚಿನ್ನ ₹ 72,900 ಇದ್ರೆ, 24 ಕ್ಯಾರೆಟ್ ಚಿನ್ನ ₹76,550 ಇದೆ.
- ಮುಂಬೈಯಲ್ಲಿ 22 ಕ್ಯಾರೆಟ್ ಚಿನ್ನದ ದರ ₹ 71,900 ಇದ್ರೆ, 24 ಕ್ಯಾರೆಟ್ ಚಿನ್ನ ₹ 75,500 ಇದೆ.
- ಮಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ದರ ₹ 72,250 ಇದ್ರೆ, 24 ಕ್ಯಾರೆಟ್ ಚಿನ್ನ ₹ 75,860 ಇದೆ.
ಬೆಳ್ಳಿಯ ಬೆಲೆ ಎಷ್ಟಿದೆ?
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 98 ಇದೆ. ಇದು ನಿನ್ನೆ ₹ 100 ರೂಪಾಯಿ ಇತ್ತು. ಇಂದು 2 ರೂಪಾಯಿ ಕಡಿಮೆ ಆಗಿದೆ.
ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 98,000 ಇದ್ದು ನಿನ್ನೆ ಇದರ ಬೆಲೆ ₹ 1,00,000 ರೂಪಾಯಿ ಇತ್ತು. ನಿನ್ನೆಗಿಂತ ಇಂದು ಬೆಳ್ಳಿ ಒಟ್ಟು ₹ 2,000 ಇಳಿಕೆ ಕಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ