/newsfirstlive-kannada/media/post_attachments/wp-content/uploads/2025/03/Ranya_Rao.jpg)
ಇವಳು ಬಂಗಾರದ ಜಿಂಕೆ. ದುಬೈನಿಂದ ಚಿನ್ನದ ಬಿಸ್ಕತ್ಗಳನ್ನು ಕದ್ದು ತಂದ ಚೋರಿ. ಸುಂದರಿಯ ಸಂಪರ್ಕ ಸಚಿವರಿಗೆ ಎಣ್ಣೆಯಲ್ಲಿ ಬಿದ್ದ ಬಿಸಿ ಬಿಸಿ ಜಿಲೇಬಿ. ಕೈಗೆಲ್ಲಾ ಒಗರೊಗರು. ಸದ್ಯ ಬಂಗಾರದ ಪಂಜರ ರಹಸ್ಯ ಕೆದಕುತ್ತಿರುವ ಡಿಆರ್‌ಐ ಅಧಿಕಾರಿಗಳಿಗೆ ಬಿಡುವಿಲ್ಲದ ಕೆಲಸ. ಚಿನ್ನದ ಮಲ್ಲಿಗೆ ರನ್ಯಾಯಣ ಇಲ್ಲಿದೆ.
ಇದು ಪ್ಯೂರ್ 24 ಕ್ಯಾರೆಕ್ಟ್ ಅಲ್ಲ, ಇವಳು ರೋಲ್ಡ್ ಗೋಲ್ಡ್. ಬೋಲ್ಡ್ ಬ್ಯೂಟಿ ಟಿಂವಕ್ಕಿ ಸೌಂಡ್ ಪ್ರದರ್ಶನವೇ ಈ ಹಕ್ಕಿಯ ಖಯಾಲಿ. ಓಲ್ಡ್ ಮಂಕ್ ಹೀರಿದ ಹಿರಿ ಜೀವಗಳಿಗೆ ಸಣ್ಣ ಸಂಪರ್ಕವೇ ಭರ್ತಿ ಕೋಲ್ಡು. ಶೀತ, ಜ್ವರದ ಅಂದರ್ಕೇ ಕಾಯಿಲೆ. ಯಾವಾಗ ಬೇಕಾದ್ರೂ ಬೆಲ್ ಬಾರಿಸುವ ಭಯ.
ಚಿನ್ನದ ‘ಚೋರಿ’.. ಡಿಆರ್‌ಐ ಅಧಿಕಾರಿಗಳ ಅತಿಥಿ!
ಬಣ್ಣದ ಬದುಕಿನ ಬಣವೆ ದಾಟಿದ ಚಂದನವನದ ಚೆಂದವಳ್ಳಿ ತೋಟದ ಚೆಂದುಳ್ಳಿಗೆ ದಂಡಿ ದಂಡಿ ದುಡ್ಡಿನ ಹಂಗು. ಚಿನ್ನದ ಹೊಂಬಣ್ಣಿನಲ್ಲಿ ಮಿಂದೇಳುವ ಬಯಕೆ. ಎಲ್ಡೊರಾಡೋದಲ್ಲಿ ಫಳಫಳ ಹೊಳೆಯುವ ಆತುರ, ಕಾತರಕ್ಕೆ ಕಬ್ಬಿಣದ ಸರಳಿನ ದರ್ಶನ ಆಗಿಸಿದೆ. ಅಂದ್ಹಾಗೆ ಅಕ್ರಮ ಚಿನ್ನದ ಚಕೋರಿ ರನ್ಯಾ ರಾವ್ ಕೇಸ್ನಲ್ಲಿ ಬಿಗ್ ಅಪ್ಡೇಟ್ ಸಿಕ್ಕಿದೆ.
ರನ್ಯಾರಾವ್ ಗ್ರೌಂಡ್ ಆಫ್ ಅರೆಸ್ಟ್ ತೋರಿಸಿರುವ ಡಿಆರ್‌ಐ ಅಧಿಕಾರಿಗಳು, ಅಕ್ರಮವಾಗಿ ಚಿನ್ನ ತಂದಿರೋದನ್ನ ಪ್ರಾಥಮಿಕವಾಗಿ ಪತ್ತೆ ಹಚ್ಚಿದ್ದಾರೆ. ರನ್ಯಾ ಯಾವುದೇ ಬ್ಯಾಗೇಜ್ಗಳ ಡಿಕ್ಲೇರೇಷನ್ ಮಾಡಿರಲಿಲ್ಲ. ಅಕೆಯ ಹೇಳಿಕೆ ಪ್ರಕಾರ ಉದ್ದೇಶ ಪೂರ್ವಕವಾಗಿ ಚಿನ್ನ ತಂದಿದ್ದಾಳೆ ಅಂತ ಒಟ್ಟು 11 ಅಂಶಗಳನ್ನ ಅಧಿಕಾರಿಗಳು ತೋರಿಸಿದ್ದಾರೆ.
ಬಂಗಾರದ ಬೇಟೆ ಸುತ್ತ!
- ಮಹಜರು ವೇಳೆ ಅಕೆಯ ಸ್ಟೇಟ್ಮೆಂಟ್ ರೆಕಾರ್ಡ್ ಆಗಿದೆ
- ಅಕ್ರಮವಾಗಿ ಚಿನ್ನ ಸಾಗಾಟ ಸಾಬೀತು ಎಂದ ಅಧಿಕಾರಿಗಳು
- ಕಸ್ಟಮ್ ಆ್ಯಕ್ಟ್ ವಿವಿಧ ಸೆಕ್ಷನ್ಗಳ ಅಡಿ ಸ್ಮಗ್ಲಿಂಗ್ ಸಾಬೀತು
- ರನ್ಯಾ ರಾವ್ ದುಬೈಗೆ ಸಾಕಷ್ಟು ಬಾರಿ ಓಡಾಟ ಮಾಡಿದ್ದಾಳೆ
- ಅಕ್ರಮ ಚಿನ್ನ ಸಾಗಾಟ ಕೃತ್ಯದ ಹಿಂದೆ ದೊಡ್ಡ ಸಿಂಡಿಕೇಟ್
- ಕೇಸ್ನ ತನಿಖೆ ನಡೆಯುವ ಅಗತ್ಯ, ಸಾಕ್ಷಿ ಕಲೆ ಹಾಕಬೇಕಿದೆ
- ತನಿಖೆಯಲ್ಲಿ ಅನೇಕ ಸತ್ಯಾಂಶಗಳನ್ನ ಆಕೆ ಬಾಯಿಬಿಟ್ಟಿಲ್ಲ
- ಸಾಕ್ಷಿನಾಶ ತಡೆಯೋದಕ್ಕೋಸ್ಕರ ಅಕೆಯ ಬಂಧನ ಅಗತ್ಯ
ಈ ಮಧ್ಯೆ ಜಾಮೀನು ಅರ್ಜಿ ವಿಚಾರಣೆ ಇಂದಿಗೆ ಮುಂದೂಡಿಕೆ ಆಗಿದೆ. ಜಾಮೀನು ಅರ್ಜಿಗೆ ಆಕ್ಷೇಪಣೆಯನ್ನ ಡಿಆರ್‌ಐ ಪರ ವಕೀಲರು ಸಲ್ಲಿಸಲಿದ್ದು, ರನ್ಯಾ ಬೇಲ್ ಭವಿಷ್ಯ ಹೊರ ಬೀಳಲಿದೆ.
ಇದನ್ನೂ ಓದಿ:20 ವರ್ಷಗಳ ಬಳಿಕ ಮತ್ತೆ ಜೀವ ಪಡೆದ ನಟಿ ಸೌಂದರ್ಯ ಕೇಸ್.. 6 ಎಕರೆ ಭೂಮಿಗಾಗಿ ದುರಂತ ನಡೆಸಿದ್ರಾ?
ಜತಿನ್ ಹುಕ್ಕೇರಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್!
ಇತ್ತ, ಬಂಧನ ಭೀತಿಯಲ್ಲಿದ್ದ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ಸೇಫ್ ಆಗಿದ್ದಾರೆ. ಹೈಕೋರ್ಟ್ ಮೆಟ್ಟಿಲೇರಿದ ಜತಿನ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ, ಪತ್ನಿಯ ಮೇಲಿನ ಆರೋಪಕ್ಕೂ ಜತಿನ್ಗೂ ಸಂಬಂಧವಿಲ್ಲ. ಡಿಆರ್‌ಐ ಸಮನ್ಸ್ ನೀಡಿದಾಗ ತನಿಖೆಗೆ ಸಹಕರಿಸಿದ್ದಾರೆ ಅಂತ ವಾದಿಸಿದರು. ಸದ್ಯ ಹೈಕೋರ್ಟ್, ಕಾನೂನಿನ ಪ್ರಕ್ರಿಯೆ ಪಾಲಿಸದೇ ಬಂಧಿಸದಂತೆ ಆದೇಶ ನೀಡಿದೆ.
ಸ್ಯಾಂಡಲ್ವುಡ್ ನಟಿ ರನ್ಯಾ ನಿವಾಸಕ್ಕೆ ಸಿಬಿಐ ಎಂಟ್ರಿ!
ಇನ್ನು, ಪ್ರಕರಣಕ್ಕೆ ಸಿಬಿಐ ಎಂಟ್ರಿ ಕೊಟ್ಟಿದೆ. ಲ್ಯಾವೆಲ್ಲೆ ರಸ್ತೆಯಲ್ಲಿರುವ ರನ್ಯಾ ರಾವ್ ನಿವಾಸದ ಮೇಲೆ ಸಿಬಿಐ ರೇಡ್ ಮಾಡಿದೆ. ನಿನ್ನೆ ಸಂಜೆ 4 ಗಂಟೆಗೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು, ಒಂದು ಗಂಟೆ ಕಾಲ ಪರಿಶೀಲನೆ ನಡೆಸಿದ್ದಾರೆ. ಬಂಗಾರದ ಕೋಳಿ ಬೇಟೆ ಆಡಿದ ಡಿಆರ್‌ಐ, ಬಂಗಾರದ ಬೆಟ್ಟ ಶೋಧನೆ ಸವಾಲು ಹೊತ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ