/newsfirstlive-kannada/media/post_attachments/wp-content/uploads/2024/12/Iswarya_2.jpg)
ಬಣ್ಣಬಣ್ಣದ ಮಾತನಾಡಿ ಬಂಗಾರದ ಪಂಜರ ಕಟ್ಟಿದ್ದ ಸುಂದರಿ ಐಶ್ವರ್ಯ ಇದೀಗ ಪರಪ್ಪನ ಅಗ್ರಹಾರದ ಕಬ್ಬಿಣದ ಪಂಜರದೊಳಗೆ ಲಾಕ್ ಆಗಿದ್ದಾಳೆ. ಚಿನ್ನ ವಂಚನೆ ಕೇಸ್ನಲ್ಲಿ ಐಶ್ವರ್ಯ ದಂಪತಿಗೆ 14 ದಿನಗಳ ನ್ಯಾಯಾಂಗ ಬಂಧನವಾಗಿದ್ದು, ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಬಿಟ್ಟು ಬಂದಿದ್ದಾರೆ.
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಿಗೆ 14 ಕೆಜಿ ಚಿನ್ನ ವಂಚಿಸಿದ ಪ್ರಕರಣದಲ್ಲಿ ಎ1 ಐಶ್ವರ್ಯ ಗೌಡ, ಎ2 ಹರೀಶ್ ಗೌಡರನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದರು. ಡಿ.ಕೆ ಸುರೇಶ್ ತಂಗಿ ಅಂತ ಹೇಳಿಕೊಂಡು ಬಣ್ಣ ಬಣ್ಣದ ಮಾತನಾಡಿ, ನಾಮ ಹಾಕಿದ್ದ ಐಶ್ವರ್ಯ ಮತ್ತು ಆಕೆಯ ಪತಿ ವಿಚಾರಣೆಗಾಗಿ ಚಂದ್ರಲೇಔಟ್ ಠಾಣೆಗೆ ಹಾಜರಾಗಿದ್ದರು. ಸುಮಾರು 3 ಗಂಟೆಗಳ ಪೊಲೀಸರ ವಿಚಾರಣೆ ಬಳಿಕ ಪೊಲೀಸರು ದಂಪತಿಯನ್ನು ಅರೆಸ್ಟ್ ಮಾಡಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ಈ ವೇಳೆ ಐಶ್ವರ್ಯ ಮತ್ತು ಆಕೆಯ ಪತಿ ಹರೀಶ್ ಇಬ್ಬರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶಿಸಿದರು. ಬಳಿಕ ಪೊಲೀಸರು ಇಬ್ಬರನ್ನೂ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿದರು.
ಚಿನ್ನದ ವಂಚನೆ ಕೇಸ್ನಲ್ಲಿ ಜೈಲು ಸೇರಿರುವ ವಂಚಕಿ ಐಶ್ವರ್ಯಗೆ ಇವತ್ತು ವಿಚಾರಣಾಧೀನ ಕೈದಿ ಸಂಖ್ಯೆಯನ್ನು ಕೊಡಲಿದ್ದಾರೆ. ಇನ್ನು ಹೆಚ್ಚಿನ ತನಿಖಾಗಿ ಪೊಲೀಸರು ಡಿಸೆಂಬರ್ 30 ಅಂದರೆ ಸೋಮವಾರ ಮತ್ತೆ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
ನಾಪತ್ತೆ ಆಗಿರುವ ನಟ ಧರ್ಮೇಂದ್ರಗಾಗಿ ಪೊಲೀಸರ ಶೋಧ
ವಾರಾಹಿ ಗೋಲ್ಡ್‌ನ ಕೋಟಿ, ಕೋಟಿ ವಂಚನೆ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದ್ದಂತೆ ಪ್ರಕರಣದ ಮೂವರು ಆರೋಪಿಗಳು ನಾಪತ್ತೆಯಾಗಿದ್ದರು. ಅದರಲ್ಲಿ ಐಶ್ವರ್ಯ ಗೌಡ, ಪತಿ ಹರೀಶ್ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಆದ್ರೆ ಡಿ.ಕೆ ಸುರೇಶ್ ಧ್ವನಿಯಲ್ಲಿ ಮಾತನಾಡಿ ಟೋಪಿ ಹಾಕಿದ್ದ ನಟ ಧರ್ಮೇಂದ್ರ ನಾಪತ್ತೆ ಆಗಿದ್ದಾನೆ. ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸದ್ಯ ನಟ ಧರ್ಮೇಂದ್ರಗೆ ಪೊಲೀಸರು ನೋಟಿಸ್ ನೀಡಿದ್ದು ಶೋಧಕಾರ್ಯ ಮುಂದುವರೆಸಿದ್ದಾರೆ.
ಈ ಮಧ್ಯೆ 14 ಕೆ.ಜಿ ‘ಚಿನ್ನ’ ದೋಖಾ ಕೇಸ್ನಲ್ಲಿ ತಮ್ಮ ಹೆಸರು ಬಂದಿರುವ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಡಿ.ಕೆ ಸುರೇಶ್, ನನ್ನ ಹೆಸರನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಕ್ರಮ ಕೈಗೊಳ್ಳುವಂತೆ ದೂರು ಕೊಡುತ್ತೇನೆ. ಕಮಿಷನರ್ಗೂ ಪತ್ರ ಬರೆಯುತ್ತೇನೆ ಅಂತ ಎಚ್ಚರಿಸಿದ್ದಾರೆ.
ಇದನ್ನೂ ಓದಿ: BBK11: ಈ ವಾರ 6ರಲ್ಲಿ ಉಳಿಯೋರು ಯಾರು.. ಬಿಗ್ಬಾಸ್ ಮನೆಯಿಂದ ಔಟ್ ಆಗೋದು ಇವರೇನಾ?
ಪೊಲೀಸರು ತನಿಖೆ ಮಾಡಲಿ. ಯಾರೇ ಆಗಲಿ ನನ್ನ ಹೆಸರು ಬಳಕೆ ಮಾಡಿಕೊಂಡರು ಅದು ಅಪರಾಧ. ನಾನು ಅದನ್ನು ಪರಿಶೀಲನೆ ಮಾಡಿ ಸಂಬಂಧ ಪಟ್ಟ ಪೊಲೀಸರ ಬಳಿ ವಿಚಾರಣೆ ಮಾಡಿ ಏನಾಗಿದೆ ಎಂದು ತಿಳಿದುಕೊಳ್ಳುತ್ತೇನೆ. ಕಮಿಷನರ್ಗೂ ಕೂಡ ದೂರು ಕೊಡುತ್ತೇನೆ.
ಡಿ.ಕೆ.ಸುರೇಶ್, ಮಾಜಿ ಸಂಸದ
ಕಳೆದೊಂದು ವಾರದಿಂದ ಸದ್ದು ಮಾಡಿದ್ದ ಸುವರ್ಣ ಸುಂದರಿ ಐಶ್ವರ್ಯಾಗೌಡಳನ್ನ ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರಕ್ಕೆ ತಳ್ಳಿದ್ದಾರೆ. ಇನ್ನು ಸಂಪೂರ್ಣ ತನಿಖೆ ಬಳಿಕವಷ್ಟೇ ವಂಚನೆಯ ಹಿಂದಿನ ಅಸಲಿ ರಹಸ್ಯ ಬಯಲಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ