ಚಿನ್ನದ ನಾಣ್ಯಗಳು, 1.5 ಕೋಟಿ ಗರಿ ಗರಿ ನೋಟುಗಳು.. ಅರಣ್ಯಾಧಿಕಾರಿ ನಿವಾಸದಲ್ಲಿ ಕಂತೆ ಕಂತೆ ಕಟ್ಟುಗಳು..

author-image
Ganesh
Updated On
ಚಿನ್ನದ ನಾಣ್ಯಗಳು, 1.5 ಕೋಟಿ ಗರಿ ಗರಿ ನೋಟುಗಳು.. ಅರಣ್ಯಾಧಿಕಾರಿ ನಿವಾಸದಲ್ಲಿ ಕಂತೆ ಕಂತೆ ಕಟ್ಟುಗಳು..
Advertisment
  • ಅರಣ್ಯಾಧಿಕಾರಿ ನಿವಾಸದ ಮೇಲೆ ದಾಳಿ ಮಾಡಿದ ಅಧಿಕಾರಿಗಳು
  • 4 ಚಿನ್ನದ ಬಿಸ್ಕತ್​​ಗಳು, 16 ಬಂಗಾರದ ನಾಣ್ಯಗಳು
  • ಆದಾಯಕ್ಕೂ ಮೀರಿ ಈತ ಹಣ ಸಂಪಾದಿಸಿದ್ದು ಹೇಗೆ..?

ಒಡಿಶಾ ವಿಜಿಲೆನ್ಸ್​ ವಿಭಾಗವು (Odisha Vigilance Department) ಅರಣ್ಯ ಅಧಿಕಾರಿ ಒಬ್ಬರಿಗೆ ಸಂಬಂಧಿಸಿದ 6 ಸ್ಥಳಗಳ ಮೇಲೆ ದಾಳಿ ಮಾಡಿತ್ತು. ಈ ವೇಳೆ ಪತ್ತೆಯಾದ ಹಣ ಮತ್ತು ಆದಾಯಕ್ಕಿಂತ ಮೀರಿ ಇರುವ ಆಸ್ತಿಯನ್ನು ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಡೆಪ್ಯುಟಿ ರೇಂಜರ್ ರಾಮ ಚಂದ್ರ ನೇಪಕ್​ಗೆ ( Rama Chandra Nepak)ಗೆ ಸಂಬಂಧಿಸಿದ 6 ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನೇಪಕ್ ಜೈಪುರ ವಲಯ ಅರಣ್ಯ ಅಧಿಕಾರಿ ಆಗಿದ್ದಾರೆ. ಈ ವೇಳೆ 4 ಚಿನ್ನದ ಬಿಸ್ಕಟ್​​ಗಳು, ಒಂದೊಂದು 10 ಗ್ರಾಮಂ ತೂಕ ಇರುವ 16 ಬಂಗಾರದ ನಾಣ್ಯಗಳು ಪತ್ತೆಯಾಗಿವೆ.

ಇದನ್ನೂ ಓದಿ: ಕಾರು ಡ್ರೈವರ್​​ ಮೇಲೆ MBA ವಿದ್ಯಾರ್ಥಿನಿಗೆ ಲವ್.. ಮದ್ವೆಯಾದ ಒಂದೇ ವರ್ಷದಲ್ಲಿ ಘೋರ ದುರಂತ..!

publive-image

ಹಿರಿಯ ಅಧಿಕಾರಿಗಳನ್ನು ಒಳಗೊಂಡ ಹಲವು ಅಧಿಕಾರಿಗಳ ತಂಡ ನೇಪಕ್​ ನಿವಾಸದ ಮೇಲೆ ದಾಳಿ ಮಾಡಿದೆ. ಇನ್ನು ದಾಳಿಯನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ. ದಾಳಿ ವೇಳೆ ಬಂಗಾರದ ವಸ್ತುಗಳು ಮಾತ್ರವಲ್ಲದೇ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಜೈಪುರದ ಅಪಾರ್ಟ್​​ಮೆಂಟ್ ಒಂದರಲ್ಲಿ ಬಚ್ಚಿಟ್ಟಿದ್ದ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಹಣವನ್ನು ನೋಡಿದ ಅಧಿಕಾರಿಗಳು ಅದನ್ನು ಎಣಿಸಲು ಮಷಿನ್ ಸಹಾಯ ಪಡೆದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, 1.5 ಕೋಟಿ ಹಣ ಸಿಕ್ಕಿದೆ. ಎರಡು ಕಾರಗಳು, ನಾಲ್ಕು ಬೈಕ್​ ಕೂಡ ಸೀಜ್ ಮಾಡಿದ್ದಾರೆ. ಓರ್ವ ಸರ್ಕಾರಿ ಅಧಿಕಾರಿ ಆದಾಯಕ್ಕೂ ಮೀರಿ ಹಣ, ಆಸ್ತಿ ಸಂಪಾದನೆ ಮಾಡಿ ಈಗ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: Ullu, ALTT, Desiflix ಸೇರಿ 25 ಒಟಿಟಿ ಬ್ಯಾನ್! ಕೇಂದ್ರದ ಈ ನಿರ್ಧಾರಕ್ಕೆ ಕಾರಣ ಏನು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment