/newsfirstlive-kannada/media/post_attachments/wp-content/uploads/2025/02/GOLD-INVESTMENT.jpg)
ಕಳೆದ 2 ದಿನಗಳಿಂದ ಭಾರತಕ್ಕೆ ಬ್ಯಾಕ್ ಟು ಬ್ಯಾಕ್ ಖುಷಿ ಸುದ್ದಿ ಸಿಗುತ್ತಿದೆ. ಒಡಿಶಾದಲ್ಲಿ ನಡೆಯುತ್ತಿರುವ ಭಾರತದ ಭೂವೈಜ್ಞಾನಿಕ ಸಮೀಕ್ಷೆಯ ಉತ್ಖನನ ಬಂಗಾರದ ಆ ದಿನಗಳನ್ನು ನೆನಪಿಸುತ್ತಿದೆ. ಭಾರತ ಮತ್ತೊಮ್ಮೆ ಸುವರ್ಣಯುಗಕ್ಕೆ ಮರಳುವ ಮುನ್ಸೂಚನೆ ನೀಡುತ್ತಿದೆ.
ಒಡಿಶಾದಲ್ಲಿ ಭಾರತದ ಭೂವೈಜ್ಞಾನಿಕ ಸಮೀಕ್ಷೆ (GSI) ಅಧಿಕಾರಿಗಳು, ರಾಜ್ಯ ಭೂವೈಜ್ಞಾನಿಕ ವಿಭಾಗದ ಅಧಿಕಾರಿಗಳ ತಂಡ ಜಂಟಿಯಾಗಿ ಸರ್ವೇ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಒಡಿಶಾದ ಹಲವೆಡೆ ಒಟ್ಟು 18 ಜಾಗಗಳಲ್ಲಿ ಚಿನ್ನದ ನಿಕ್ಷೇಪ ಇರುವ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.
ಭಾರತದ ಭೂವೈಜ್ಞಾನಿಕ ಅಧಿಕಾರಿಗಳ ತಂಡ ಚಿನ್ನ ಸೇರಿದಂತೆ ಅಪಾರ ಸಂಪನ್ಮೂಲ ಇರುವ ಭೂಪ್ರದೇಶದ ನಕ್ಷೆಗಳನ್ನು ಸಿದ್ಧಪಡಿಸಿದ್ದಾರೆ. ಇದರ ಬಗ್ಗೆ ಉನ್ನತ ಅಧ್ಯಯನ ನಡೆಸಲಾಗುತ್ತಿದೆ. ಪ್ರಮುಖವಾಗಿ ಕಿಯೋಂಜರ್ ಜಿಲ್ಲೆಯಲ್ಲಿ ಅತ್ಯುನ್ನತ ಗ್ರೇಡ್ ಪ್ಲಾಟಿನಂ ಖನಿಜಗಳು ಇರೋದು ಸಂತಸ ತಂದಿದೆ.
ಇದನ್ನೂ ಓದಿ: ಕೈಯಲ್ಲಿ ಲಾಂಗ್ ಹಿಡಿದು ಪೋಸ್ ಕೊಟ್ಟಿದ್ದ ವಿನಯ್ ಗೌಡಗೆ ಸಂಕಷ್ಟ; FIR ಬಳಿಕ ಹೇಳಿದ್ದೇನು?
ಇದರ ಜೊತೆಗೆ ಭೂವೈಜ್ಞಾನಿಕ ಸಮೀಕ್ಷೆಯಲ್ಲಿ ಒಡಿಶಾದ ಹಲವು ಜಿಲ್ಲೆಯ 18 ಜಾಗದಲ್ಲಿ ಚಿನ್ನದ ನಿಕ್ಷೇಪ ಇರೋದು ಖಚಿತವಾಗಿದೆ. ಅದರಲ್ಲಿ ಬಹುತೇಕ ಪ್ರದೇಶಗಳು ಬುಡಕಟ್ಟು ಜನಾಂಗದವರು ವಾಸಿಸುವ ಜಾಗವಾಗಿದೆ. ಈ ಭೂಪ್ರದೇಶಗಳು ಆರ್ಥಿಕವಾಗಿ ಬಹಳಷ್ಟು ಹಿಂದುಳಿದಿದ್ದು, ಇಲ್ಲಿನ ಹಲವೆಡೆ ಚಿನ್ನದ ನಿಕ್ಷೇಪ ಪತ್ತೆಯಾಗಿರೋದು ಖುಷಿಗೆ ಕಾರಣವಾಗಿದೆ.
18 ಕಡೆ ಚಿನ್ನದ ನಿಕ್ಷೇಪ ಪತ್ತೆ!
1. ಕಿಯೋಂಜರ್, 2. ಮಯೂರ್‌ಭಂಜ್, 3. ಸುಂದರ್‌ಗಡ್, 4. ಕೊರಾಪುಟ್, 5. ಮಲ್ಕಾನ್‌ಗಿರಿ, 6. ನಬರಂಗಪುರ, 6. ಬೌಧ್, 7. ಅಂಗುಲ್, 8. ಅರಾದಂಗಿ, 9. ದಿಮಿರ್ಮುಡಾ, 10. ಟೆಲ್ಕೊಯ್, 11. ಗೋಪುರ, 12. ಗಜೈಪುರ್, 13. ಸಲೇಕಾನಾ, 14. ಸಿಂಗ್ಪುರ್, 15. ಸುಲೇಪತ್, 16. ಸುರುಡಾ, 17. ಜಶಿಪುರ್ 18. ಸುರಿಯಾಗುಡ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ