/newsfirstlive-kannada/media/post_attachments/wp-content/uploads/2025/04/Akshaya-tritiya-festival.jpg)
ಮಂಗಳಕರವಾದ ದಿನ. ವೈಶಾಖ ಮಾಸದ ಶುಕ್ಲ ಪಕ್ಷ 3ನೇ ದಿನದಂದು ಅಕ್ಷಯ ತೃತೀಯಾವನ್ನು ಆಚರಿಸಲಾಗುತ್ತದೆ. ಈ ದಿನ ಖರೀದಿಸಿದ ಬಂಗಾರವು ಎಂದಿಗೂ ಅಕ್ಷಯವಾಗಿ ಉಳಿಯುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿ ಇದೆ.
ಇಷ್ಟೇ ಅಲ್ಲ ಶ್ರೇಷ್ಠವಾದ ಕೆಲಸಗಳನ್ನು ಈ ದಿನ ಕೈಗೊಂಡರೆ ಎಂದಿಗೂ ಮಂಗಳಕರವಾದ ಸಿದ್ಧಿಗಳು ಉಂಟಾಗುತ್ತದೆ ಅನ್ನೋ ನಂಬಿಕೆಯೂ ಇದೆ. 2025ರ ಅಕ್ಷಯ ತೃತೀಯ ಹಬ್ಬ ಬಂದೇ ಬಿಟ್ಟಿದೆ. ನಾಳೆ ದೇಶಾದ್ಯಂತ ಅಕ್ಷಯ ತೃತೀಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಅಕ್ಷಯ ತೃತೀಯ ಅಂದ್ರೆ ಚಿನ್ನವನ್ನು ಕೊಳ್ಳುವ ಶುಭ ದಿನ. ನಾಳೆ ಅನೇಕರು ಚಿನ್ನದ ಅಂಗಡಿಗೆ ತೆರಳಿ ಚಿನ್ನ ಕೊಳ್ಳಲು ಮುಂದಾಗಿದ್ದಾರೆ. ಚಿನ್ನಾಭರಣ ಪ್ರಿಯರಿಗೆ ಬಂಗಾರದ ಅಂಗಡಿಗಳು ಈಗಾಗಲೇ ಭರ್ಜರಿ ಆಫರ್ ಕೊಟ್ಟು ಸ್ವಾಗತ ಕೋರುತ್ತಿವೆ.
ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಚಿನ್ನಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಆದರೆ ಒಂದು ಸಮಾಧಾನಕರ ಸುದ್ದಿ ಏನಂದ್ರೆ 1 ಲಕ್ಷದ ಗಡಿ ದಾಟಿದ್ದ ಬಂಗಾರ ಮತ್ತೆ ವಾಪಸ್ ಲಕ್ಷದ ಒಳಗೆ ಬಂದಿದೆ.
ಏಪ್ರಿಲ್ 29ರಂದು ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡಿದೆ. ಅಂದ್ರೆ ಬೆಂಗಳೂರಲ್ಲಿ ಸದ್ಯ ಚಿನ್ನದ ದರ ಹೀಗಿದೆ.
1 ಗ್ರಾಂ 24K ಚಿನ್ನ - ₹9,797
1 ಗ್ರಾಂ 22K ಚಿನ್ನ - ₹8,980
1 ಗ್ರಾಂ 18K ಚಿನ್ನ - ₹7,348
24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ ಅಂದ್ರೆ ಏಪ್ರಿಲ್ 28ರಂದು ಒಂದು ಗ್ರಾಂಗೆ 9,753 ರೂಪಾಯಿ ಇತ್ತು. ನಿನ್ನೆಯಿಂದ ಇಂದಿಗೆ ಕೇವಲ 44 ರೂಪಾಯಿ ಏರಿಕೆಯಾಗಿದ್ದು, ಏಪ್ರಿಲ್ 29ಕ್ಕೆ ಒಂದು ಗ್ರಾಂ ಚಿನ್ನದ ಬೆಲೆ 9,797 ರೂಪಾಯಿ ನಿಗದಿಯಾಗಿದೆ.
ಇದನ್ನೂ ಓದಿ: Gold Rate Today: ಏರುತ್ತಿರುವ ಚಿನ್ನದ ಬೆಲೆಗೆ ಕೊಂಚ ಬ್ರೇಕ್.. ಬೆಂಗಳೂರಲ್ಲಿ ಚಿನ್ನ, ಬೆಳ್ಳಿಯ ರೇಟ್ ಎಷ್ಟಿದೆ..?
ದಿನದಿಂದ ದಿನಕ್ಕೆ ಬಂಗಾರದ ದರ ಏರಿಳಿತ ಆಗೋದು ಸಹಜ. ಆದರೆ ಖುಷಿಯ ಸುದ್ದಿ ಏನಂದ್ರೆ ಸದ್ಯ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂಪಾಯಿಗಿಂತ ಕೆಳಗೆ ಇಳಿದಿದೆ. ಈ ವರ್ಷದ ಅಕ್ಷಯ ತೃತೀಯಕ್ಕೆ 1 ಲಕ್ಷದ ಸನಿಹದಲ್ಲಿರುವ ಚಿನ್ನ 2026ಕ್ಕೆ ಶೇಕಡಾ 10ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ