Gold Price: ₹1 ಲಕ್ಷಕ್ಕೆ ಇನ್ನೊಂದೇ ಹೆಜ್ಜೆ ಬಾಕಿ.. ಭಾರತದಲ್ಲಿ ಚಿನ್ನದ ದರ ಮತ್ತೆ ಭಾರೀ ಏರಿಕೆ!

author-image
Bheemappa
Updated On
800 ಗ್ರಾಂ ಚಿನ್ನ, ವೋಲ್ವೋ ಕಾರು ಕೊಟ್ರೂ ಸಾಕಾಗಲಿಲ್ಲ.. ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಬಲಿ!
Advertisment
  • ಬಂಗಾರದ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳ ಆಗುತ್ತಿರೋದು ಯಾಕೆ?
  • ಸ್ಥಳೀಯ ಮಾರುಕಟ್ಟೆಗಳಲ್ಲಿ ಬಂಗಾರದ ಬೆಲೆ ಏನಿದೆ, ಮಾಹಿತಿ ಇಲ್ಲಿದೆ
  • ಇನ್ನು ಎಷ್ಟು ನೂರು ಹೆಚ್ಚಳವಾದರೆ ಚಿನ್ನ ಒಂದು ಲಕ್ಷ ರೂ ಆಗುತ್ತದೆ?

ನವದೆಹಲಿ: ಬಂಗಾರ ದಿನದಿಂದ ದಿನಕ್ಕೆ ಗ್ರಾಹಕರ ಕೈ ಸುಡುತ್ತಿದೆ. ಹಳದಿ ಲೋಹವನ್ನು ಮುಟ್ಟುವುದೇ ಬೇಡ ಎನ್ನುವಷ್ಟು ದರ ಹೆಚ್ಚಳವಾಗಿದೆ. ಸದ್ಯ ಇದೀಗ ದೆಹಲಿಯಲ್ಲಿ ಚಿನ್ನದ ಬೆಲೆಯೂ 1,650 ರೂಪಾಯಿ ಏರಿಕೆಯಾಗಿದ್ದು 1 ಲಕ್ಷ ರೂಪಾಯಿಗೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ.

ಅಖಿಲ ಭಾರತ ಸರಾಫಾ ಸಂಘದ (ಎಐಎಸ್​ಐ) ನಂತೆ ದೆಹಲಿಯಲ್ಲಿ ಶೇಕಡಾ 99.9 ರಷ್ಟು ಶುದ್ಧತೆಯ ಚಿನ್ನವು 10 ಗ್ರಾಂಗೆ 99,800 ರೂಪಾಯಿ ಆಗಿದೆ. ಕಳೆದ ಶುಕ್ರವಾರ ಇದರ ಬೆಲೆಯಲ್ಲಿ 20 ರೂಪಾಯಿ ಕಡಿಮೆಯಾಗಿ 10 ಗ್ರಾಂ ಚಿನ್ನಕ್ಕೆ 98,150 ರೂಪಾಯಿ ಇತ್ತು. ಆದರೆ ಇದೀಗ ಏಕಾಏಕಿ 1,650 ರೂಪಾಯಿ ಏರಿಕೆ ಆಗಿದ್ದರಿಂದ ಬಂಗಾರವೂ 1 ಲಕ್ಷ ರೂಪಾಯಿ ತಲುಪಲು ಕೇವಲ 200 ರೂಪಾಯಿ ಮಾತ್ರ ಬೇಕಿದೆ ಅಷ್ಟೇ.

publive-image

ಬಂಗಾರವು ಸ್ಥಳೀಯ ಮಾರುಕಟ್ಟೆಗಳಲ್ಲಿ 1,600 ರೂಪಾಯಿ ಏರಿಕೆ ಆಗಿದ್ದು 10 ಗ್ರಾಂಗೆ 99,300 ರೂಪಾಯಿಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲೂ ಭಾರೀ ಏರಿಕೆ ಆಗಿರುವುದು ಗ್ರಾಹಕರಿಗೆ ಇನ್ನಷ್ಟು ಬೇಸರದ ಸಂಗತಿ ಎನ್ನಬಹುದು. ಪ್ರತಿ ಕೆಜಿ ಸಿಲ್ವರ್​ಗೆ 500 ರೂಪಾಯಿ ಏರಿಕೆಯಾಗಿದ್ದು ಈಗ 98,500 ರೂಪಾಯಿಗೆ ತಲುಪಿದೆ. ಏಪ್ರಿಲ್ 18 ರಂದು ಬೆಳ್ಳಿ ಬೆಲೆ ಕೆಜಿಗೆ 98,000 ರೂಪಾಯಿ ಇತ್ತು. ಆದರೆ ಇದರಲ್ಲೂ ದರ ಏರಿಕೆ ಆಗಿದೆ ಎಂದು ಹೇಳಲಾಗಿದೆ.

ವಿಶ್ವದ ರಾಷ್ಟ್ರಗಳ ಮೇಲೆ ಅಮೆರಿಕದ ಅಧ್ಯಕ್ಷ ಸೊನಾಲ್ಡ್ ಟ್ರಂಪ್ ಅವರು ಅಧಿಕ ಸುಂಕ ವಿಧಿಸಿದ್ದರಿಂದ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತ ಹೋಗುತ್ತಿದೆ. ಚೀನಾ ಹಾಗೂ ಅಮೆರಿಕದ ನಡುವೆ ಈಗಲೂ ತೆರಿಗೆ ಯುದ್ಧ ನಡೆಯುತ್ತಿದೆ. ಇದರಿಂದ ಡಾಲರ್ ಬೆಲೆ ಕುಸಿಯತೊಡಗಿದೆ. ಬಂಡವಾಳಗಾರರು ಹೆಚ್ಚು ಹೆಚ್ಚು ಬಂಗಾರದ ಮೇಲೆ ಇನ್ವೆಸ್ಟ್​ ಮಾಡುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಭಾರತಲ್ಲಿ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಬಳಿಗೆ ಬಂದು ನಿಂತಿದೆ. ಇನ್ನೂ ಕೇವಲ 200 ರೂಪಾಯಿ ಏರಿಕೆ ಆದರೆ ಗೋಲ್ಡ್​, 1 ಲಕ್ಷ ರೂಪಾಯಿ ಆಗಿ ಗ್ರಾಹಕರಿಗೆ ಫುಲ್ ಬಿಲ್ಡಪ್​ ಕೊಡಲಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment