/newsfirstlive-kannada/media/post_attachments/wp-content/uploads/2025/07/GOLD_PRICE.jpg)
ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲಿ ಹೆಂಗಳೆಯರಿಗೆ ಚಿನ್ನ ಅಂದ್ರೆ ಅಚ್ಚುಮೆಚ್ಚು. ಇತ್ತೀಚೆಗೆ ಚಿನ್ನದ ಬೆಲೆ ಗಗನಕ್ಕೇರಿ 1 ಲಕ್ಷದವರೆಗೂ ಬಂದಿತ್ತು. 2025ರಲ್ಲಿ ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ 50% ಚಿನ್ನದ ಬೆಲೆ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಚಿನ್ನದ ಬೆಲೆ ಶೇ.100 ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಟಾಯ್ಲೆಟ್ ರೂಂನಿಂದಲೇ ವಿಚಾರಣೆಗೆ ಹಾಜರಾದ ವ್ಯಕ್ತಿ.. ₹1 ಲಕ್ಷ ದಂಡ ವಿಧಿಸಿದ ನ್ಯಾಯಾಲಯ
ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದೂ ಪರಿಗಣಿಸಲಾಗುತ್ತದೆ. ಹೀಗಾಗಿ ಸಾಮಾನ್ಯ ಜನರ ಜೊತೆಗೆ ಕೇಂದ್ರದ ಬ್ಯಾಂಕುಗಳು ಚಿನ್ನದ ಹೂಡಿಕೆ ಮಾಡುತ್ತವೆ. ಒಂದು ದೇಶದ ಮಟ್ಟಿಗೆ ಚಿನ್ನ ಆ ದೇಶದ ಆರ್ಥಿಕತೆ, ಆರ್ಥಿಕ ಸ್ಥಿರತೆಯ ಭಾಗ. ಹಣದುಬ್ಬರದ ವಿರುದ್ಧ ಪ್ರಮುಖ ಅಸ್ತ್ರ ಚಿನ್ನ. ಅಷ್ಟೇ ಅಲ್ಲ ಯುದ್ಧ, ಇತರ ವಿಪತ್ತಿನ ಸಂದರ್ಭದಲ್ಲಿ ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಚಿನ್ನ ಆಸರೆಯಾಗುತ್ತದೆ.
ಕಳೆದ ತಿಂಗಳು ನಮ್ಮ ದೇಶದ ರಿಸರ್ವ್ ಬ್ಯಾಂಕ್ ಮೊಟ್ಟ ಮೊದಲ ಬಾರಿಗೆ ಚಿನ್ನದ ಗಟ್ಟಿ ಸಾರ್ವಜನಿಕವಾಗಿ ಪ್ರದರ್ಶಿಸಿತ್ತು. ಜಗತ್ತಿನಲ್ಲಿ ಯಾವ ದೇಶ ಅತಿ ಹೆಚ್ಚು ಚಿನ್ನ ಹೊಂದಿದೆ, ಭಾರತದ ಸ್ಥಾನ ಏನು ಅಂತ ನೋಡೋಣ
ಅಮೆರಿಕ: ಅಮೆರಿಕವು ವಿಶ್ವದಲ್ಲೇ ಅತಿ ಹೆಚ್ಚು ಚಿನ್ನದ ಸಂಗ್ರಹ ಹೊಂದಿದೆ. ಇದು ಅಮೆರಿಕದ ಆರ್ಥಿಕ ಶಕ್ತಿ ತೋರಿಸುತ್ತದೆ. ದೀರ್ಘಕಾಲದಿಂದಲೂ ಜಾಗತಿಕ ಕರೆನ್ಸಿಯಾಗಿ ಡಾಲರ್ ಚಲಾವಣೆಯಲ್ಲಿದೆ. ಆದರೂ ಅಮೆರಿಕ ತನ್ನ ಆರ್ಥಿಕತೆಗೆ ಬೆನ್ನೆಲುಬಾಗಿ ಚಿನ್ನ ಸಂಗ್ರಹಿಸಿದೆ. ವಿಶ್ವ ಚಿನ್ನದ ಮಂಡಳಿಯ ಮಾಹಿತಿ ಪ್ರಕಾರ ಅಮೆರಿಕದ ಬಳಿ ಒಟ್ಟು 8,133.46 ಟನ್​ ಚಿನ್ನವಿದೆ. ಇದರ ನಿವ್ವಳ ಮೌಲ್ಯ $ 6.06 ಬಿಲಿಯನ್. ಅಮೆರಿಕದಲ್ಲಿರುವ ಚಿನ್ನ ಜರ್ಮನಿ, ಇಟಲಿ, ಫ್ರಾನ್ಸ್​​ ದೇಶಗಳಲ್ಲಿರುವ ಒಟ್ಟು ಚಿನ್ನಕ್ಕೆ ಸಮ.
ಜರ್ಮನಿ: ಜಾಗತಿಕವಾಗಿ ಹೆಚ್ಚು ಚಿನ್ನ ಹೊಂದಿರುವಲ್ಲಿ ಜರ್ಮನಿ 2ನೆ ಸ್ಥಾನದಲ್ಲಿದೆ. 2ನೇ ಮಹಾಯುದ್ಧದ ಬಳಿಕ ಜರ್ಮನಿ ಆರ್ಥಿಕ ಸಂಕಷ್ಟದಲ್ಲಿತ್ತು. ಅನಂತರ ಅದರ ಚಿನ್ನದ ಸಂಗ್ರಹ ಹೆಚ್ಚುತ್ತಲೇ ಹೋಯಿತು. ಈಗ ಜರ್ಮನಿಯಲ್ಲಿ 3,351.53 ಟನ್​ ಚಿನ್ನವಿದೆ. ಇದರ ನಿವ್ವಳ ಮೌಲ್ಯ $ 2.51 ಬಿಲಿಯನ್
ಇಟಲಿ: ಯೂರೋಪ್​ನ ವ್ಯಾಪಾರ ಕೇಂದ್ರ ಎನಿಸಿರುವ ಇಟಲಿ ಚಿನ್ನದ ಮಹತ್ವದ ಹಿಂದೆಯೇ ಅರಿತುಕೊಂಡಿದೆ. ಚಿನ್ನದ ನಿಕ್ಷೇಪಗಳಿಂದಾಗಿಯೇ ಇಟಲಿ ಆರ್ಥಿಕವಾಗಿ ಸ್ಥಿರವಾಗಿದೆ. ಇದರ ಚಿನ್ನ ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್​ ನಿಯಂತ್ರಣದಲ್ಲಿದೆ. ಇಟಲಿ ಬಳಿ 2,451.84 ಟನ್​ ಚಿನ್ನವಿದೆ. ಇದರ ಮೌಲ್ಯ : $1.82 ಬಿಲಿಯನ್. ಬ್ಯಾಂಕ್ ಆಫ್ ಇಟಲಿಯಲ್ಲಿ ಇದರ ಸಂಗ್ರಹವಿದೆ.
ಇದನ್ನೂ ಓದಿ:ಸಚಿವ ಜಮೀರ್​​ಗೆ ಸಂಕಷ್ಟ.. ರಾಜ್ಯಪಾಲರ ನಿರ್ಧಾರದ ಮೇಲೆ ಭಾರೀ ಕುತೂಹಲ
ಫ್ರಾನ್ಸ್​: ಫ್ರಾನ್ಸ್ ದೇಶ ಯೂರೋಪಿನ ಆರ್ಥಿಕ ಶಕ್ತಿಯೂ ಹೌದು. ಇದು 2,436.97 ಟನ್​ಗಳಷ್ಟು ಚಿನ್ನ ಹೊಂದಿದೆ. ಇದರ ಮೌಲ್ಯ $ 1.83 ಬಿಲಿಯನ್
ರಷ್ಯಾ: ಚಿನ್ನ ಸಂಗ್ರಹದಲ್ಲಿ ರಷ್ಯಾ 5ನೇ ಸ್ಥಾನದಲ್ಲಿದೆ. ಉಕ್ರೇನ್​ ಜೊತೆಗಿನ ವರ್ಷಾನುಗಟ್ಟಲೆ ಯುದ್ಧ ಬಳಿಕವೂ ರಷ್ಯಾ ಆರ್ಥಿಕವಾಗಿ ಗಟ್ಟಿಯಾಗಿಯೇ ಇದೆ. ಯುದ್ಧದ ನಡುವೆ ರಷ್ಯಾ ದೊಡ್ಡ ಪ್ರಮಾಣದ ಚಿನ್ನ ಸಂಗ್ರಹಿಸಿದೆ. ರಷ್ಯಾ ಬಳಿ 2,335.85 ಟನ್ ಚಿನ್ನವಿದೆ. ಇದರ ಮೌಲ್ಯ $1.83 ಬಿಲಿಯನ್
ಚೀನಾ: ಅಮೆರಿಕದ ಬಳಿಕ ಚೀನಾವೇ 2ನೇ ಅತಿದೊಡ್ಡ ಆರ್ಥಿಕತೆ. ಚಿನ್ನದ ಸಂಗ್ರಹದಲ್ಲಿ ಚೀನಾ ಜಾಗತಿಕವಾಗಿ 6ನೇ ಸ್ಥಾನದಲ್ಲಿದೆ. ಚೀನಾ ಬಳಿ 2,264.32 ಟನ್​ ಚಿನ್ನವಿದೆ. ಇದರ ಮೌಲ್ಯ $1.69 ಬಿಲಿಯನ್
ಇದನ್ನೂ ಓದಿ: ವಿಜಯ್ ದೇವರಕೊಂಡ ದಿಢೀರ್ ಆಸ್ಪತ್ರೆಗೆ ದಾಖಲು, ಏನಾಯ್ತು..?
ಜಪಾನ್: ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಿರುವ ಜಪಾನ್ ಚಿನ್ನ ಸಂಗ್ರಹದಲ್ಲಿ 7ನೇ ಸ್ಥಾನದಲ್ಲಿದೆ. ಜಪಾನ್ ಬಳಿ 845.97 ಟನ್ ಚಿನ್ನವಿದೆ. ಇದರ ಮೌಲ್ಯ $ 633 ಮಿಲಿಯನ್
ಭಾರತ: ಚಿನ್ನದ ಸಂಗ್ರಹದಲ್ಲಿ ಭಾರತ 8ನೇ ಸ್ಥಾನದಲ್ಲಿದೆ. ಭಾರತದ ಬಳಿ 84.76 ಟನ್ ಚಿನ್ನವಿದೆ. ಇದರ ಮೌಲ್ಯ $630 ಮಿಲಿಯನ್. ಇದು ಭಾರತೀಯ ರಿಸರ್ವ್​ ಬ್ಯಾಂಕ್ ನಿಯಂತ್ರಣದಲ್ಲಿದೆ.
ನೆದರ್​ಲ್ಯಾಂಡ್: ನೆದರ್​ಲ್ಯಾಂಡ್ ವಿಶ್ವದ 18ನೇ ಅತಿದೊಡ್ಡ ಆರ್ಥಿಕತೆ ಹೊಂದಿದೆ. ಇದು ಯೂರೋಪ್​ನಲ್ಲಿ 5ನೇ ಅತಿ ದೊಡ್ಡ ಆರ್ಥಿಕತೆ ಎನಿಸಿದೆ. ನೆದರ್​ಲ್ಯಾಂಡ್ ಬಳಿ 612.45 ಟನ್​ ಚಿನ್ನವಿದೆ. ಇದರ ಮೌಲ್ಯ $ 458 ಮಿಲಿಯನ್
ಜಾಗತಿಕವಾಗಿ ಚಿನ್ನ ಸಂಗ್ರಹದಲ್ಲಿ ಟರ್ಕಿ 10ನೇ ಸ್ಥಾನದಲ್ಲಿದೆ. ಟರ್ಕಿ ಬಳಿ 584.93 ಟನ್ ಚಿನ್ನವಿದ್ದು ಇದರ ಮೌಲ್ಯ $438 ಮಿಲಿಯನ್. ಇದು ಟರ್ಕಿಯ ಸೆಂಟ್ರಲ್ ಬ್ಯಾಂಕ್​ನಲ್ಲಿದೆ.
ವಿಶೇಷ ವರದಿ: ವಿಶ್ವನಾಥ್ ಜಿ, ಹಿರಿಯ ಕಾಪಿ ಎಡಿಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ