/newsfirstlive-kannada/media/post_attachments/wp-content/uploads/2024/07/GOLD.jpg)
ಇಂದು ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಮೊದಲ ಬಜೆಟನ್ನು ಮಂಡಿಸುತ್ತಿದೆ. ನಿರ್ಮಲಾ ಸೀತಾರಾಮನ್​ರವರು ಬಜೆಟ್​ ಮಂಡಿಸಲಿದ್ದಾರೆ. ಅನೇಕರು ಇಂದಿನ ಬಜೆಟ್​ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಬಜೆಟ್​ಗೂ ಮುನ್ನವೇ ಚಿನ್ನದ ಬೆಲೆಯಲ್ಲಿನ ಇಳಿಕೆ ಕಂಡು ಅಚ್ಚರಿಗೊಂಡಿದ್ದಾರೆ.
ಹೌದು. ನಿನ್ನೆಗೆ ಹೋಲಿಸಿದರೆ ಬಜೆಟ್​ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಸಿಲಿಕಾನ್​​ ಸಿಟಿ ಬೆಂಗಳೂರಿನಲ್ಲೂ ಚಿನ್ನದ ರೇಟ್​​ನಲ್ಲಿ ವ್ಯತ್ಯಾಸ ಕಂಡಿದೆ. ಇಂದು10 ಗ್ರಾಂ ಚಿನ್ನದ ದರ 67,690 ರೂಪಾಯಿಯಾಗಿದೆ.
ನಿನ್ನೆ ಭಾರತದಲ್ಲಿ 22 ಕ್ಯಾರೆಟ್​​ 10 ಗ್ರಾಂ ಚಿನ್ನದ ಬೆಲೆ 67,700 ಇತ್ತು. 24 ಕ್ಯಾರೆಟ್​​ನ 10 ಗ್ರಾಂ ಚಿನ್ನದ ದರ 73,850 ರೂಪಾಯಿಯಷ್ಟಿತ್ತು. ಆದರೆ ಇಂದು ಕೊಂಚ ಇಳಿಕೆ ಕಂಡಿದೆ. ನಿನ್ನೆಗೆ ಹೋಲಿಸಿದರೆ ಇಂದು 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ 67,690 ರೂಪಾಯಿಯಾಗಿದೆ. 22 ಕ್ಯಾರೆಟ್​​ ಬಂಗಾರದ ಬೆಲೆ 73,840 ರೂಪಾಯಿಯಾಗಿದೆ.
ಇನ್ನು 8 ಗ್ರಾಂ ಬಂಗಾರದ ಬೆಲೆಯನ್ನು ನೋಡುವುದಾದರೆ, 2 ಕ್ಯಾರೆಟ್​ ಚಿನ್ನದ ಬೆಲೆ 54,152 ರೂಪಾಯಿಯಾಗಿದೆ. 24 ಕ್ಯಾರೆಟ್​​ ಚಿನ್ನದ ಬೆಲೆ 59,072 ರೂಪಾಯಿಯಾಗಿದೆ. ಸಿಲಿಕಾನ್​​ ಸಿಟಿಯಲ್ಲಿ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರಿನಲ್ಲಿ 1 ಕೆ.ಜಿ ಬೆಳ್ಳಿ ಬೆಲೆ 91,400 ರೂಪಾಯಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ