/newsfirstlive-kannada/media/post_attachments/wp-content/uploads/2025/01/TRUMP-5.jpg)
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರತಿಜ್ಞಾವಿಧಿ ಸ್ವೀಕರಿಸುವ ಮುನ್ನವೇ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಆಗಿದೆ. ಜನವರಿ 20 ರಂದು ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 78,950 ರೂಪಾಯಿ ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 72,371 ರೂಪಾಯಿ ಆಗಿದೆ. ಉತ್ತರ ಅಮೆರಿಕದಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ.
ಚಿನ್ನ ಏಕೆ ಅಗ್ಗ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು.. ಇಂಡಿಯನ್ ಕರೆನ್ಸಿ ಮತ್ತು US ಡಾಲರ್ ನಡುವಿನ ವಿನಿಮಯ ದರ ಮತ್ತು ಸ್ಥಳೀಯ ಬೇಡಿಕೆಗಳ ಆಧಾರ ಮೇಲೆ ಪ್ರಭಾವಿತವಾಗಿವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಇಂದಿನಿಂದ ಅಮೆರಿಕದಲ್ಲಿ ಟ್ರಂಪ್ ಸರ್ಕಾರ ಇರಲಿದೆ. ಇದೇ ಕಾರಣಕ್ಕೆ ಚಿನ್ನದ ಬೆಲೆಯಲ್ಲಿ ದೇಶಿಯ ಮಾರುಕಟ್ಟೆಗಳು ಚಿನ್ನದ ಬೆಲೆಯಲ್ಲಿ ಇಳಿಕೆ ಮಾಡಿವೆ.
ಇದನ್ನೂ ಓದಿ: ಟ್ರಂಪ್ ಅಧಿಕಾರಕ್ಕೂ ಮುನ್ನವೇ ದೊಡ್ಡ ಬೆಳವಣಿಗೆ; ಹೆದರಿದ ಹಮಾಸ್, 15 ತಿಂಗಳದ ಯುದ್ಧಕ್ಕೆ ಫುಲ್ಸ್ಟಾಪ್
ಕಾರಣ ಇಷ್ಟೇ, ಟ್ರಂಪ್ ಸರ್ಕಾರ ಬಂದ ಮೇಲೆ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣ ಹಾಗೂ ಹೂಡಿಕೆದಾರರು ಹೊಸ ಸರ್ಕಾರದ ನೀತಿಗಳ ಬಗ್ಗೆ ಸ್ಪಷ್ಟತೆಗಾಗಿ ಕಾಯುತ್ತಿದ್ದಾರೆ. ಟ್ರಂಪ್ ಆಡಳಿತಕ್ಕೆ ಬಂದ ಮೇಲೆ ವ್ಯಾಪಾರ ನೀತಿಗಳು ಮತ್ತಷ್ಟು ವಿಸ್ತರಣೆಯಾಗುವ ಸಾಧ್ಯತೆ ಇದೆ. ಇದರಿಂದ ಹೆಚ್ಚಿನ ಹಣದುಬ್ಬರ ಉಂಟಾಗುವ ನಿರೀಕ್ಷೆ ಹೊಂದಲಾಗಿದೆ. ಅದೇ ಕಾರಣಕ್ಕೆ ಟ್ರಂಪ್ ಸರ್ಕಾರ ರಚನೆಗೂ ಮುನ್ನವೇ ಚಿನ್ನದ ಬೆಲೆಯ ಬಗ್ಗೆ ತಜ್ಞರು ಜಾಗರೂಕರಾಗುತ್ತಿದ್ದಾರೆ.
ನಿಮ್ಮ ನಗರದಲ್ಲಿ ಎಷ್ಟಿದೆ..?
ಭಾರತದ ವಿವಿಧ ನಗರಗಳಲ್ಲಿನ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ. ಸ್ಥಳೀಯ ಆರ್ಥಿಕತೆ, ಸಾಂಸ್ಕೃತಿಕ ಆದ್ಯತೆಗಳು ಮತ್ತು ಬೇಡಿಕೆಯ ಆಧಾರದ ಮೇಲೆ ಚಿನ್ನದ ಬೆಲೆ ಅವಲಂಬಿತವಾಗಿರುತ್ತದೆ.
18 ಕ್ಯಾರೆಟ್ ಚಿನ್ನದ ಬೆಲೆ
- ಅಹ್ಮದಾಬಾದ್: 59,393 ರೂಪಾಯಿ
- ಬೆಂಗಳೂರು: 59,355 ರೂಪಾಯಿ
- ಚೆನ್ನೈ: 59,483 ರೂಪಾಯಿ
- ದೆಹಲಿ: 59,213 ರೂಪಾಯಿ
- ಹೈದರಾಬಾದ್: 59,408 ರೂಪಾಯಿ
- ಕೋಲ್ಕತ್ತಾ: 59,235 ರೂಪಾಯಿ
- ಮುಂಬೈ: 59,310 ರೂಪಾಯಿ
- ಪುಣೆ: 59,310 ರೂಪಾಯಿ
- ಸೂರತ್: 59,393 ರೂಪಾಯಿ
22 ಕ್ಯಾರೆಟ್ ಚಿನ್ನದ ಬೆಲೆ
- ಅಹಮದಾಬಾದ್: 72,591 ರೂಪಾಯಿ
- ಬೆಂಗಳೂರು: 72,545 ರೂಪಾಯಿ
- ಚೆನ್ನೈ: 72,701 ರೂಪಾಯಿ
- ದೆಹಲಿ: 72,371 ರೂಪಾಯಿ
- ಹೈದರಾಬಾದ್: 72,609 ರೂಪಾಯಿ
- ಕೋಲ್ಕತ್ತಾ: 72,398 ರೂಪಾಯಿ
- ಮುಂಬೈ: 72,490 ರೂಪಾಯಿ
- ಪುಣೆ: 72,490 ರೂಪಾಯಿ
- ಸೂರತ್: 72,591 ರೂಪಾಯಿ
24 ಕ್ಯಾರೆಟ್ ಚಿನ್ನದ ಬೆಲೆಗಳು
- ಅಹ್ಮದಾಬಾದ್: 79,190 ರೂಪಾಯಿ
- ಬೆಂಗಳೂರು: 79,140 ರೂಪಾಯಿ
- ಚೆನ್ನೈ: 79,310 ರೂಪಾಯಿ
- ದೆಹಲಿ: 78,950 ರೂಪಾಯಿ
- ಹೈದರಾಬಾದ್: 79,210 ರೂಪಾಯಿ
- ಕೋಲ್ಕತ್ತಾ: 78,980 ರೂಪಾಯಿ
- ಮುಂಬೈ: 79,080 ರೂಪಾಯಿ
- ಪುಣೆ: 79,080 ರೂಪಾಯಿ
- ಸೂರತ್: 79,190 ರೂಪಾಯಿ
ಚಿನ್ನದ ಸಾಂಸ್ಕೃತಿಕ ಮಹತ್ವ
ಭಾರತದಲ್ಲಿ ಚಿನ್ನವು ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ಅವಿಭಾಜ್ಯ ಅಂಗ. ಹಬ್ಬಗಳು, ಮದುವೆಗಳು ಮತ್ತು ಇತರೆ ಶುಭ ಸಮಾರಂಭಗಳಲ್ಲಿ ಚಿನ್ನ ಖರೀದಿಸೋದು ಮಂಗಳಕರ ಎಂದು ನಂಬಲಾಗುತ್ತದೆ. ಇದೇ ಕಾರಣಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಹೆಚ್ಚು ಬೇಡಿಕೆ ಇದೆ.
ಟ್ರಂಪ್ ಅಧಿಕಾರ ಸ್ವೀಕಾರ ಯಾವಾಗ..?
ಡೊನಾಲ್ಡ್ ಟ್ರಂಪ್ ಇಂದು ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭವು ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ ಸಮಾರಂಭ ಆರಂಭವಾಗಲಿದೆ. US ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರಮಾಣ ವಚನ ಬೋಧಿಸಲಿದ್ದಾರೆ.
ಇದನ್ನೂ ಓದಿ: ವಿಶ್ವದ ಕಣ್ಣು ಡೊನಾಲ್ಡ್ ಟ್ರಂಪ್ ಮೇಲೆ.. ಅಧಿಕಾರ ಸ್ವೀಕರಿಸ್ತಿದ್ದಂತೆ ಮೊದಲ ಅಜೆಂಡಾ ಏನು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ