/newsfirstlive-kannada/media/post_attachments/wp-content/uploads/2023/06/gold-rate-1.jpg)
ಚಿನ್ನ ಆಪತ್ಕಾಲದ ಬಂದು. ಬಹುತೇಕರು ಚಿನ್ನದ ಖರೀದಿ ಮಾಡಲು ಬಯಸುತ್ತಾರೆ. ಬೆಲೆ ಏರಿಕೆಯ ನಡುವೆಯೂ ನಾ ಮುಂದು ತಾ ಮುಂದು ಎಂದು ಮಳಿಗೆಗೆ ತೆರಳುತ್ತಾ ಚಿನ್ನ ಖರೀದಿಸುತ್ತಾರೆ. ಅಂದಹಾಗೆಯೇ ಸಾಕಷ್ಟು ಜನರು ಚಿನ್ನದ ಬೆಲೆ ಏರಿಳಿತಗಳ ಬಗ್ಗೆ ಗಮನ ಹರಿಸುತ್ತಲೇ ಇರುತ್ತಾರೆ. ಅದರಂತೆಯೇ ಇಂದಿನ ಚಿನ್ನ, ಬೆಳ್ಳಿಯ ಬೆಲೆ ಎಷ್ಟು? ಮಾರುಕಟ್ಟೆಯಲ್ಲಿ ಹೇಗಿದೆ..? ಇಲ್ಲಿದೆ ಮಾಹಿತಿ
- ಬೆಂಗಳೂರಿನಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ದರ 1 ರೂಪಾಯಿ ಇಳಿಕೆ ಕಂಡಿದೆ. ಇವತ್ತು 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ ₹ 6,274 ಇದೆ.
- 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹62740 ಇದೆ.
24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
- ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ ₹ 6,844 ಆಗಿದೆ.
- 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹ ₹ 68,440 ಇದೆ.
ಇದನ್ನೂ ಓದಿ: ನನ್ನ ಗೆಲ್ಲಿಸಿದ್ರೆ ಸಬ್ಸಿಡಿ ಮೂಲಕ ವಿಸ್ಕಿ, ಬಿಯರ್ ಸಿಗುತ್ತೆ! ವಿಚಿತ್ರ ಆಶ್ವಾಸನೆ ನೀಡಿದ ಲೋಕಸಭಾ ಚುನಾವಣಾ ಅಭ್ಯರ್ಥಿ
ಬೆಳ್ಳಿಯ ಬೆಲೆ ಎಷ್ಟಿದೆ?
- ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 76.90 ಇದೆ.
- ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 76,900 ಇದೆ.