Advertisment

ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ.. ಭಾರತದಲ್ಲಿ ಬಂಗಾರ ದಿಢೀರ್‌ ದುಬಾರಿ ಆಗಲು 5 ಕಾರಣಗಳು ಇಲ್ಲಿದೆ!

author-image
admin
Updated On
ನೋಡೋಕೆ ಬೆಳ್ಳಿ ರೀತಿ; ಇದು ಚಿನ್ನಕ್ಕಿಂತಲೂ ಹೆಚ್ಚು ದುಬಾರಿ; ಹೂಡಿಕೆ ಮಾಡಿದ್ರೆ ಡಬಲ್​​ ಆದಾಯ!
Advertisment
  • ದೆಹಲಿಯಲ್ಲಿ ಈಗ 10 ಗ್ರಾಂ ಚಿನ್ನದ ಬೆಲೆ 2,430 ರೂಪಾಯಿ ಏರಿಕೆ
  • ದೇಶದ ಇತಿಹಾಸದಲ್ಲೇ ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ
  • ಡೊನಾಲ್ಡ್ ಟ್ರಂಪ್ ಘೋಷಣೆಯ ಬಳಿಕ ಭಾರತದಲ್ಲಿ ಸಂಚಲನ

ಭಾರತದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಮುಖಿ ಆಗುತ್ತಲೇ ಇದೆ. ಒಂದೇ ಸಮನೆ ಏರುತ್ತಿರುವ ಬಂಗಾರದ ದರ ಆಭರಣ ಪ್ರಿಯರಿಗೆ ಗಗನ ಕುಸುಮವೇ ಆಗುತ್ತಿದೆ. ಚಿನ್ನದ ಬೆಲೆ ಏರಿಕೆಯ ಮಧ್ಯೆ ಇಂದು ಹೊಸ ದಾಖಲೆ ಬರೆದಿದೆ. ಅಂದ್ರೆ ಇವತ್ತು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದೆ.

Advertisment

ದೆಹಲಿಯಲ್ಲಿ ಈಗ 10 ಗ್ರಾಂ ಚಿನ್ನದ ಬೆಲೆ 88,500 ರೂಪಾಯಿ. ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,430 ರೂಪಾಯಿ ಏರಿಕೆ ಕಂಡಿದೆ. ದೇಶದಲ್ಲಿ ಈಗ ಚಿನ್ನದ ದರ ಮತ್ತಷ್ಟು ದುಬಾರಿಯಾಗುವತ್ತ ದಾಪುಗಾಲು ಹಾಕುತ್ತಿದೆ.

publive-image

ಚಿನ್ನದ ಬೆಲೆ ಭಾರೀ ಏರಿಕೆ ಕಾಣಲು ಪ್ರಮುಖವಾಗಿ 5 ಕಾರಣಗಳಿವೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ವಿಶ್ಲೇಷಣೆ ಮಾಡಿದೆ.

ಇದನ್ನೂ ಓದಿ: ಹಾವೇರಿಯಲ್ಲಿ ಸತ್ತಿದ್ದಾನೆ ಎಂದು ಊರಿಗೆ ತೆಗೆದುಕೊಂಡು ಹೋಗುವಾಗ ಪುನರ್ಜನ್ಮ; ಇದು ಬಂಕಾಪುರದ ಪವಾಡ! 

Advertisment

ಚಿನ್ನದ ಸಮಯ! 
1. ತಜ್ಞರ ಪ್ರಕಾರ ಚಿನ್ನದ ಬೆಲೆ ದಾಖಲೆಯ ಏರಿಕೆ ಕಾಣಲು ಜಾಗತಿಕ ಬೆಳವಣಿಗೆಗಳೇ ಮುಖ್ಯ ಕಾರಣ. ಜಾಗತಿಕ ಟ್ರೆಂಡ್ ಬದಲಾದ ಹಿನ್ನೆಲೆಯಲ್ಲಿ ಚಿನ್ನದ ವ್ಯಾಪಾರಿಗಳಿಗೆ ಗೋಲ್ಡನ್ ಟೈಮ್ ಶುರುವಾಗಿದೆ.
2. ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ದುರ್ಬಲ ಆಗುತ್ತಿದೆ. ರೂಪಾಯಿ ಮೌಲ್ಯ ಕುಸಿತ ಕಂಡಿರುವುದು ಚಿನ್ನದ ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದೆ.
3. ಸದ್ಯದ ಮಾರುಕಟ್ಟೆಯಲ್ಲಿ ಚಿಲ್ಲರೆ ಖರೀದಿ, ಜ್ಯುವೆಲ್ಲರಿ ಮಾಲೀಕರಿಂದ ಚಿನ್ನಕ್ಕೆ ಭಾರಿ ಬೇಡಿಕೆಯಿದೆ. ಬೇಡಿಕೆ ಹೆಚ್ಚಾದಂತೆ ಚಿನ್ನದ ಬೆಲೆ ಏರಿಕೆ ಆಗಿದೆ.
4. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾಕ್ಕೆ ಸ್ಟೀಲ್, ಅಲ್ಯುಮಿನಿಯಂ ಆಮದಿನ ಮೇಲೆ ಶೇ.25 ರಷ್ಟು ಸುಂಕ ಘೋಷಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಈ ಘೋಷಣೆಯ ಬಳಿಕ ಚಿನ್ನದ ಬೆಲೆ ಏರಿಕೆ ಕಂಡಿದೆ.
5. ಹೂಡಿಕೆದಾರರು ಜಾಗತಿಕ ಆರ್ಥಿಕ ಅಸ್ಥಿರತೆಯ ಹಿನ್ನೆಲೆಯಲ್ಲಿ ಷೇರುಗಳ ಮೇಲೆ ಹೂಡಿಕೆ ಮಾಡುವ ಬದಲು ಚಿನ್ನ ಕೊಳ್ಳುವತ್ತ ಹೆಚ್ಚು ಆಸಕ್ತಿ ಹೊಂದುತ್ತಿದ್ದಾರೆ. ಚಿನ್ನದ ಮೇಲೆ ಬಂಡಾವಳ ಹೂಡಿಕೆಯಿಂದ ಲಾಭಗಳಿಸಬಹುದು ಅನ್ನೋದು ವ್ಯಾಪಾರಸ್ಥರ ನಂಬಿಕೆಯಾಗಿದೆ.

ಕಳೆದ ವಾರ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 86,070 ರೂಪಾಯಿ ಇದ್ದು ಇಂದು 88,500 ರೂಪಾಯಿಗೆ ತಲುಪಿದೆ. ಚಿನ್ನದಂತೆ ಬೆಳ್ಳಿ ಕೂಡ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದು, ಒಂದು ಕೆಜಿ ಬೆಳ್ಳಿ 97,500 ರೂಪಾಯಿಗೆ ತಲುಪಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment