Gold rate: ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ.. ಮಹಿಳೆಯರ ಆಸೆಗೆ ಮತ್ತೆ ಮತ್ತೆ ತಣ್ಣೀರು..!

author-image
Ganesh
Updated On
ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ; ಚಿನ್ನ ಖರೀದಿ ಮಾಡೋರಿಗೆ ಇದು ಬೆಸ್ಟ್​ ಟೈಮ್
Advertisment
  • ಕೇವಲ 30 ದಿನದಲ್ಲಿ 4600 ರೂಪಾಯಿ ಏರಿಕೆ
  • ವ್ಯಾಪಾರಿಗಳು ಭಾರೀ ಪ್ರಮಾಣದಲ್ಲಿ ಚಿನ್ನ ಖರೀದಿ
  • ಬೆಳ್ಳಿ ದರದಲ್ಲೂ ಏರಿಕೆ, ಇಂದು 910 ರೂ ಹೆಚ್ಚಳ

ಬೆಂಗಳೂರು: ಚಿನ್ನ ಖರೀದಿ ಮಾಡೋರಿಗೆ ಆಘಾತದ ಮೇಲೆ ಆಘಾತ ಆಗುತ್ತಿದೆ. ದಿನದಿಂದ ದಿನಕ್ಕೆ ಬಂಗಾರದ ಬೆಲೆಯಲ್ಲಿ ಏರಿಕೆ ಆಗುತ್ತಿದ್ದು, ಮಹಿಳೆಯರಿಗೆ ಚಿನ್ನ ಖರೀದಿ ಕನಸಾಗಿಯೇ ಉಳಿಯುತ್ತದೆ.

ಹೊಸ ವರ್ಷದ ಮೊದಲ ತಿಂಗಳಲ್ಲೇ ಚಿನ್ನದ ಬೆಲೆ ಏರಿಕೆಯಾಗಿದೆ. ಇಂದಿನ ಬೆಲೆಯು 22 ಕ್ಯಾರೆಟ್​ನ 10 ಗ್ರಾಮ್ ಚಿನ್ನಕ್ಕೆ 7,610 ರೂಪಾಯಿ ಆಗಿದೆ. 24 ಕ್ಯಾರೆಟ್​ನ 10 ಗ್ರಾಮ್ ಚಿನ್ನಕ್ಕೆ 8,302 ರೂಪಾಯಿ ಆಗಿದೆ. 22 ಗ್ರಾಂ ಚಿನ್ನದ ಬೆಲೆ ಕೇವಲ 30 ದಿನಗಳಲ್ಲಿ 4,600 ರೂಪಾಯಿ ಏರಿಕೆಯಾಗಿದೆ. ಇಂದಿನ ಬೆಲೆ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 7,610 ರೂಪಾಯಿ ಆಗಿದೆ.

ಇದನ್ನೂ ಓದಿ: ಹೈದರಾಬಾದ್​​ನಲ್ಲಿ ಮೊದಲ ಗುಯಿಲಿನ್ ಬ್ಯಾರೆ ಸಿಂಡ್ರೋಮ್ ಪತ್ತೆ.. ಕೋಲ್ಕತ್ತಾದಲ್ಲಿ 4 ದಿನಲ್ಲಿ 3 ಜೀವ ಹೋಗಿದೆ

ದೇಶೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ದರ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 910 ರೂಪಾಯಿ ಏರಿಕೆ ಆಗಿದೆ. ಆ ಮೂಲಕ 10 ಗ್ರಾಮ ಚಿನ್ನದ ಬೆಲೆ 83,750 ರೂಪಾಯಿಗೆ ತಲುಪಿ ಸಾರ್ವಕಾಲಿದ ದಾಖಲೆ ಬರೆದಿದೆ. ಇನ್ನು 1 ಕೆಜಿ ಬೆಳ್ಳಿ ದರ 1000 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 93,000 ರೂಪಾಯಿ ತಲುಪಿದೆ. ಚಿನ್ನಾಭರಣದ ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ ಖರೀದಿ ಮಾಡ್ತಿದ್ದಾರೆ. ಚಿನ್ನ ಹಾಗೂ ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದ್ದು, ಇದೇ ಕಾರಣದಿಂದಾಗಿ ದರ ಏರಿಕೆಯಾಗಿದೆ ಅನ್ನೋ ಮಾಹಿತಿ ಇದೆ.

ಇದನ್ನೂ ಓದಿ: ಸ್ಟಾರ್​ ಡೈರೆಕ್ಟರ್​ SS ರಾಜಮೌಳಿ ಸ್ಟ್ರಾಟಜಿ ಬಳಸಿದ ರಾಮ್ ಚರಣ್.. ಏನ್ ಮಾಡಿದ್ರು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment