/newsfirstlive-kannada/media/post_attachments/wp-content/uploads/2025/04/GOLD_RATE_1.jpg)
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬಂಗಾರದ ದರ ನೋಡಿದರೆ ಯಾರು ಖರೀದಿ ಮಾಡಲು ಮುಂದಾಗುವುದಿಲ್ಲ. ಆದರೆ ಮದುವೆಯಂತಹ ಕೆಲ ಅವಶ್ಯಕತೆ ಬಂದರೆ ಚಿನ್ನವನ್ನು ಖರೀದಿ ಮಾಡಲೇ ಬೇಕಾಗುತ್ತದೆ. ಎಲ್ಲರನ್ನು ಬಂಗಾರ, ಬೆಳ್ಳಿ ಆಕರ್ಷಣೆ ಮಾಡಿದರೂ ಅವುಗಳ ಬೆಲೆಗಳಿಂದ ಗ್ರಾಹಕರು ದಂಗಾಗುತ್ತಿದ್ದಾರೆ. ಸದ್ಯ ಸಿಲಿಕಾನ್ ಸಿಟಿಯಲ್ಲಿ ಚಿನ್ನ, ಬೆಳ್ಳಿಯ ಬೆಲೆ ಎಷ್ಟು ಇಳಿಕೆ ಆಗಿದೆ?.
ದಿನದಿಂದ ದಿನಕ್ಕೆ ಚಿನ್ನದ ದರದಲ್ಲಿ ಏರಿಕೆ ಕಾಣುತ್ತಿತ್ತು. ಆದರೆ ಇಂದು ಬಂಗಾರ ದರದಲ್ಲಿ ಇಳಿಕೆ ಕಂಡಿದ್ದು ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಇದ್ದಂತಹ ಬೆಲೆ ನಾಳೆ ಇರುವುದಿಲ್ಲ. ಒಂದೇ ಬಾರಿ 550 ರಿಂದ 600 ರೂಪಾಯಿಯಷ್ಟು ಇಳಿಕೆ ಆಗಿದೆ. ಚಿನ್ನದ ಅವಶ್ಯಕತೆ ಇರುವವರು ಈಗಲೇ ಖರೀದಿ ಮಾಡಬಹುದು.
ಸದ್ಯ ಇಂದಿನ ಬಂಗಾರದ ಬೆಲೆಗಳು
- ನಿನ್ನೆ 22 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ 8,985 ರೂಪಾಯಿ ಇತ್ತು. ಇದು ಇಂದು 8,930 ಇದ್ದು 55 ರೂಪಾಯಿ ಇಳಿಕೆ ಆಗಿದೆ.
- ನಿನ್ನೆ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 89,850 ರೂಪಾಯಿ ಇತ್ತು. ಇಂದು 89,300 ಆಗಿದ್ದು ಬರೋಬ್ಬರಿ 550 ರೂಪಾಯಿ ಕಡಿಮೆ ಆಗಿದೆ.
- ನಿನ್ನೆ 24 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ 9,802 ರೂಪಾಯಿ ಇತ್ತು. ಇಂದು 9,742 ರೂಪಾಯಿ ಆಗಿದೆ. ಬೆಲೆಯಲ್ಲಿ 60 ಕಡಿಮೆ ಆಗಿದೆ.
- ನಿನ್ನೆ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 98,020 ರೂಪಾಯಿ ಇತ್ತು. ಇಂದು 97,420 ರೂಪಾಯಿ ಆಗಿದೆ. ಬೆಲೆಯಲ್ಲಿ 600 ಇಳಿಕೆ ಆಗಿದೆ.
ಇದನ್ನೂ ಓದಿ: ಆ್ಯಂಕರ್ ಸ್ವೇಚ್ಚ ವೋಟಾರ್ಕರ್ ನಿಧನ.. ಇನ್ಸ್ಟಾದಲ್ಲಿ ಫೋಟೋ ಶೇರ್, ಹಲವು ಅನುಮಾನ!
ಈ ನಗರಗಳಲ್ಲಿ ಬಂಗಾರದ ಬೆಲೆ..!
- ಅಹಮದಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನ ₹89,350 ಇದೆ
- ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹89,450 ಇದೆ.
- ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರ ₹89,300 ಇದೆ.
- ಬಳ್ಳಾರಿಯಲ್ಲಿ 22 ಕ್ಯಾರೆಟ್ ಚಿನ್ನ ₹89,300 ಇದೆ.
ಬೆಳ್ಳಿಯ ಬೆಲೆ ಎಷ್ಟಿದೆ?
ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹107.80 ಇದೆ. ಇದು ನಿನ್ನೆ ₹107.90 ಇತ್ತು. ಬೆಲೆಯಲ್ಲಿ 10 ಪೈಸೆ ಕಡಿಮೆ ಆಗಿದೆ.
ಹಾಗೇ ಇಂದು 10 ಗ್ರಾಂ ಬೆಳ್ಳಿಯ ಬೆಲೆ ₹1,078 ಇದ್ದು ನಿನ್ನೆ ಇದರ ಬೆಲೆ ₹1,079 ಇತ್ತು. ಹೀಗಾಗಿ ಬೆಳ್ಳಿಯ ಬೆಲೆಯಲ್ಲಿ 1 ರೂಪಾಯಿ ಇಳಿಕೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ