/newsfirstlive-kannada/media/post_attachments/wp-content/uploads/2025/03/GOLD-RATE.jpg)
ನವದೆಹಲಿ: ದಿನದಿಂದ ದಿನಕ್ಕೆ ಚಿನ್ನದ ದರದಲ್ಲಿ ಭಾರೀ ಏರಿಕೆ ಕಾಣುತ್ತಿರುವುದರಿಂದ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಇದ್ದಂತಹ ಬೆಲೆ ನಾಳೆ ಇರುವುದಿಲ್ಲ. ಒಂದೇ ಬಾರಿ ನೂರು, ಸಾವಿರಗಟ್ಟಲೇ ಹಣ ಏರಿಕೆ ಆಗುತ್ತಿರುವುದು ಬಂಗಾರ ಖರೀದಿಗಾರರ ಚಿಂತನೆಗೆ ಕಾರಣವಾಗಿದೆ. ಚಿನ್ನದ ಬೆಲೆಯಲ್ಲಿ ಈ ರೀತಿ ನಿರಂತರ ಏರಿಕೆ ಯಾಕೆಂದು ಗಮನಿಸುವುದಾದರೆ..
ಸದ್ಯ ಇಂದಿನ ಬಂಗಾರದ ಬೆಲೆಗಳು ಈ ಕೆಳಕಂಡಂತೆ ಇವೆ
- ನಿನ್ನೆ 22 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ 8,720 ರೂಪಾಯಿ ಇತ್ತು. ಇದು ಇಂದು 8,720 ಇದ್ದು 95 ರೂಪಾಯಿ ಏರಿಕೆ ಆಗಿದೆ.
- ನಿನ್ನೆ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 87,200 ರೂಪಾಯಿ ಇತ್ತು. ಇಂದು 88,150 ಆಗಿದ್ದು ಬರೋಬ್ಬರಿ 950 ರೂಪಾಯಿ ಹೆಚ್ಚಳವಾಗಿದೆ.
- ನಿನ್ನೆ 24 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ 9518 ರೂಪಾಯಿ ಇತ್ತು. ಇಂದು 9,617 ರೂಪಾಯಿ ಆಗಿದೆ. ಬೆಲೆಯಲ್ಲಿ 99 ರೂಪಾಯಿ ಅಧಿಕ ಕಂಡಿದೆ.
- ನಿನ್ನೆ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 95,180 ರೂಪಾಯಿ ಇತ್ತು. ಇಂದು 96,170 ರೂಪಾಯಿ ಆಗಿದೆ. ಬೆಲೆಯಲ್ಲಿ 990 ರೂಪಾಯಿ ಏರಿಕೆ ಆಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಅಬ್ಬರಿಸಿದ ಮಳೆರಾಯ.. ರಾಜ್ಯದ ಹಲವೆಡೆ ಭರ್ಜರಿ ವರ್ಷಧಾರೆ; IMD ಅಲರ್ಟ್ ಏನು?
ಚಿನ್ನದ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದರೆ..?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ ರಾಷ್ಟ್ರಗಳ ಮೇಲೆ ಅಧಿಕ ಸುಂಕ ವಿಧಿಸುತ್ತಿರುವುದು ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಯುಎಸ್ ಡಾಲರ್ ದುರ್ಬಲವಾಗುತ್ತಿದೆ. ಇದರ ಜೊತೆಗೆ ಚಿನ್ನದ ದರ ಸರ್ವಕಾಲಿಕ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿದೆ.
ಈಗಾಗಲೇ ಯುಎಸ್ ಡಾಲರ್ ಸೂಚ್ಯಂಕವು 0.5% ರಷ್ಟು ಕುಸಿತ ಕಂಡಿದೆ. ಬೇರೆ ಬೇರೆ ಕರೆನ್ಸಿ ಹೊಂದಿರುವ ಹೂಡಿಕೆದಾರರಿಗೆ ಚಿನ್ನದ ಮೇಲೆ ಇನ್ವೆಸ್ಟ್ ಮಾಡಲು ಹೆಚ್ಚು ಆಕರ್ಷಣೆ ಆಗಿದೆ. ಡಾಲರ್ ದುರ್ಬಲವಾಗುತ್ತಿದ್ದಂತೆ ವಿದೇಶಿ ಹೂಡಿಕೆದಾರರಿಗೆ ಚಿನ್ನವು ಅಗ್ಗವಾಗಿ ಕಾಣುತ್ತಿದೆ. ಇದರ ಜೊತೆ ಪ್ರಮುಖ ಕೇಂದ್ರ ಬ್ಯಾಂಕ್‌ಗಳ ಬಡ್ಡಿ ದರ ಕಡಿತವಾಗುತ್ತಿವೆ ಎನ್ನಲಾಗುತ್ತಿದೆ.
ಯುಎಸ್ ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಂದಾಗಿ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ತೀವ್ರ ಏರಿಕೆ ಆಗುತ್ತಿದೆ. ಟ್ರಂಪ್ ಆಡಳಿತದಲ್ಲಿ ತೆರಿಗೆ ಯುದ್ಧ, ಡಾಲರ್‌ನಲ್ಲಿನ ದುರ್ಬಲತೆ, ಭೂ-ರಾಜಕೀಯ ಅನಿಶ್ಚಿತತೆ, ETF ಹರಿವು ಹೆಚ್ಚಳ, ಪ್ರಮುಖ ಕೇಂದ್ರ ಬ್ಯಾಂಕ್‌ಗಳ ಬಡ್ಡಿ ದರ ಕಡಿತ ಇವೆಲ್ಲವೂ ಬಂಗಾರದ ಬೆಲೆಯಲ್ಲಿ ಏರಿಕೆಗೆ ಕಾರಣ ಎನ್ನಬಹುದು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ