newsfirstkannada.com

ಚಿನ್ನ ಖರೀದಿಸಲು ಸುವರ್ಣಾವಕಾಶ ಬಂದರೂ ಅಚ್ಚರಿ ಇಲ್ಲ.. ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ

Share :

Published July 13, 2024 at 12:53pm

    ಒಂದು ತಿಂಗಳಲ್ಲಿ ಚಿನ್ನದ ಬೆಲೆಯು ಅತ್ಯಂತ ದುಬಾರಿ

    ಬಜೆಟ್ ನಂತರ ಚಿನ್ನದ ಬೆಲೆ ಇಳಿಕೆ ಆಗಲಿದೆಯೇ..?

    ಒಂದು ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಶೇ.15 ರಷ್ಟು ಹೆಚ್ಚಳ

ಜುಲೈ 23 ರಂದು ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ. ಬಜೆಟ್​ ಮಂಡನೆ ಬಳಿಕ ದೇಶದಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತಾ ಎಂಬ ನಿರೀಕ್ಷೆಯಲ್ಲಿ ಆಭರಣಪ್ರಿಯರಿದ್ದಾರೆ.

ಕಾರಣ ಇಷ್ಟೇ, ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಸ್ವಲ್ಪ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ ಆಗಲು ಶುರುವಾಗಿದೆ. ಈಗ ಒಂದು ತಿಂಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಚಿನ್ನದ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನ ಖರೀದಿ ನಿರ್ಧಾರವನ್ನು ಮುಂದೂಡುತ್ತಿದ್ದಾರೆ.

ಇದನ್ನೂ ಓದಿ:KL ರಾಹುಲ್ ಟಿ-20 ಕರಿಯರ್​ ಖತಂ..? ಕೋಚ್ ಗಂಭೀರ್ ಕೂಡ ರಾಹುಲ್​ ಎಂಟ್ರಿಗೆ ಅಡ್ಡಿ..!

ಈ ವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇಕಡ 2 ರಷ್ಟು ಹೆಚ್ಚಾಗಿದೆ. ಅದರ ಪರಿಣಾಮ ದೇಶೀಯ ಮಾರುಕಟ್ಟೆ ಮೇಲೆ ತಟ್ಟಿದೆ. ಶುಕ್ರವಾರ ಅಂತ್ಯದ ವೇಳೆಗೆ 10 ಗ್ರಾಂಗೆ 73,285 ರೂಪಾಯಿ ಆಗಿದೆ.

ಈ ವರ್ಷ ಶೇ 15 ರಷ್ಟು ಹೆಚ್ಚಳ
ವರ್ಷದ ಆರಂಭದಲ್ಲಿ ಚಿನ್ನದ ಬೆಲೆ 10 ಗ್ರಾಮ್​​ಗೆ 63,870 ಇತ್ತು. ಇಂದು ಅದರ ಬೆಲೆ 73 ಸಾವಿರ ಗಡಿ ದಾಟಿದೆ. ಅಂದರೆ ವರ್ಷಕ್ಕೆ ಚಿನ್ನದ ಬೆಲೆ ಶೇಕಡ 15ರಷ್ಟು ಹೆಚ್ಚಾಗಿದೆ. ಅದರ ನೇರ ಪರಿಣಾಮ ಬೇಡಿಕೆಯ ಮೇಲೆ ಗೋಚರಿಸುತ್ತಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ವಾರ್ಷಿಕ ವರದಿ ಪ್ರಕಾರ ದೇಶದಲ್ಲಿ ಚಿನ್ನದ ಬೇಡಿಕೆಯು ಶೇಕಡಾ 15 ರಷ್ಟು ಕುಸಿದಿದೆ. ನಿರಂತರ ಬೆಲೆ ಏರಿಕೆಯಿಂದಾಗಿ ಜನ ಚಿನ್ನ ಖರೀದಿಯಿಂದ ದೂರ ಉಳಿದಿದ್ದಾರೆ. ಮತ್ತೊಂದು ಕಡೆ ಇದು ಮಳೆಗಾಲ. ಜೂನ್, ಜುಲೈನಲ್ಲಿ ಮದುವೆ ಸೇರಿದಂತೆ ಯಾವುದೇ ಶುಭ ಕಾರ್ಯಕ್ರಮಗಳು ಕಡಿಮೆ ಇರುವ ಕಾರಣ ಚಿನ್ನಕ್ಕೆ ಬೇಡಿಕೆ ಬಂದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ:ಗಂಭೀರ್​ ಆಯ್ಕೆ ಹಿಂದೆ ಸಿಕ್ಕಾಪಟ್ಟೆ ಲೆಕ್ಕಾಚಾರ.. ಎಷ್ಟು ಕೋಟಿ ಸಂಭಾವನೆ ಪಡೀತಾರೆ ಕೋಚ್..?

ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದರಿಂದ ಆಭರಣ ಉದ್ಯಮ ಕಂಗಾಲಾಗಿದೆ. ಬಜೆಟ್‌ನಲ್ಲಿ ಸರ್ಕಾರ ಆಭರಣ ಪ್ರಿಯರಿಗೆ ಗುಡ್​​ನ್ಯೂಸ್​ ನೀಡುವ ಆಗ್ರಹಗಳು ಕೇಳಿಬಂದಿವೆ. ಚಿನ್ನಾಭರಣಗಳ ಆಮದು ಸುಂಕವನ್ನು ಶೇಕಡಾ 15 ರಿಂದ 10ಕ್ಕೆ ಇಳಿಸಬೇಕೆಂಬ ಆಗ್ರಹವನ್ನು ಆಭರಣ ಉದ್ಯಮ ಮಾಡಿದೆ. ಕೆಲವರು ಸುಂಕವನ್ನು ಶೇಕಡಾ 4ಕ್ಕೆ ಇಳಿಸಲು ಒತ್ತಾಯಿಸುತ್ತಿದ್ದಾರೆ.

ಬೇಡಿಕೆ ಈಡೇರಿದರೆ ಚಿನ್ನ ಅಗ್ಗ..!
ಉದ್ಯಮದ ಈ ಬೇಡಿಕೆಯನ್ನು ಬಜೆಟ್‌ನಲ್ಲಿ ಈಡೇರಿಸುವ ನಿರೀಕ್ಷೆ ಇದೆ. ಒಂದು ವೇಳೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡರೆ ಚಿನ್ನದ ಬೆಲೆ ಮೇಲೆ ನೇರ ಪರಿಣಾಮ ಬೀರಲಿದೆ. ಬಜೆಟ್ ನಂತರ ಚಿನ್ನ ಖರೀದಿಸಲು ಸುವರ್ಣ ಅವಕಾಶ ಬರುವ ಸಾಧ್ಯತೆ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23 ರಂದು 2024-25ನೇ ಹಣಕಾಸು ವರ್ಷದ ಸಂಪೂರ್ಣ ಬಜೆಟ್ ಮಂಡಿಸಲಿದ್ದಾರೆ.

ಇದನ್ನೂ ಓದಿ:ಇಂದು ಮೊದಲ 6 ಓವರ್​​ಗಳೇ ನಿರ್ಣಾಯಕ.. ಡೇಂಜರಸ್​​ MMMಗಳೇ ಟೀಂ ಇಂಡಿಯಾಗೆ ಥ್ರೆಟ್​​​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿನ್ನ ಖರೀದಿಸಲು ಸುವರ್ಣಾವಕಾಶ ಬಂದರೂ ಅಚ್ಚರಿ ಇಲ್ಲ.. ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ

https://newsfirstlive.com/wp-content/uploads/2024/07/GOLD.jpg

Load More