ದೇಶದಲ್ಲಿ ಚಿನ್ನ ಸಂಚಲನ! RBI ಯಾಕೆ ಗೋಲ್ಡ್ ಸಂಗ್ರಹಿಸುತ್ತೆ..? ಸೀತಾರಾಮನ್ ಉತ್ತರ..!​

author-image
Ganesh
Updated On
800 ಗ್ರಾಂ ಚಿನ್ನ, ವೋಲ್ವೋ ಕಾರು ಕೊಟ್ರೂ ಸಾಕಾಗಲಿಲ್ಲ.. ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಬಲಿ!
Advertisment
  • ಆರ್​ಬಿಐ ಚಿನ್ನ ಸಂಗ್ರಹ ತೀವ್ರ ಗತಿಯಲ್ಲಿ ಹೆಚ್ಚಿಸುತ್ತಿದೆ!
  • ಕಾಂಗ್ರೆಸ್​ ನಾಯಕನ ಪ್ರಶ್ನೆಗೆ ಸೀತಾರಾಮನ್ ಕೊಟ್ಟ ಉತ್ತರ
  • ಒಂದು ಲಕ್ಷದ ಗಡಿಯತ್ತ ಸಮೀಪಿಸುತ್ತಿರುವ ಚಿನ್ನದ ಬೆಲೆ ​

ಚಿನ್ನದ ಬೆಲೆ (Gold rate) ಗಗನಕ್ಕೇರುತ್ತಿದೆ. 2025ರಲ್ಲಿ ಇಲ್ಲಿಯವರೆಗೆ ಚಿನ್ನದ ಬೆಲೆ ಶೇಕಡಾ 10ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಸೋಮವಾರ (ನಿನ್ನೆ) ಚಿನ್ನದ ಬೆಲೆ ಶೇ.1.5 ಕ್ಕೂ ಹೆಚ್ಚು ಏರಿಕೆಯಾಗಿ ಗರಿಷ್ಠ ಮಟ್ಟ ತಲುಪಿದೆ.

ಟ್ರಂಪ್ ಕೊಟ್ಟ ಹೊಡೆತ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಸುಂಕ ಪಾಲಿಸಿ ಘೋಷಿಸಿದ ಬೆನ್ನಲ್ಲೇ ಗ್ಲೋಬಲ್ ಬ್ಯುಸಿನೆಸ್​ ವಾರ್​​​ ಭೀತಿ ಎದುರಾಗಿದೆ. ಹೀಗಾಗಿ ಚಿನ್ನದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಕಳೆದ ಭಾನುವಾರ ಟ್ರಂಪ್, ಎಲ್ಲಾ ಮಾದರಿಯ ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸೋದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ. ಅದೇ ಕಾರಣಕ್ಕೆ ಚಿನ್ನ ಹೆಚ್ಚು ಸುರಕ್ಷಿತ ಹೂಡಿಕೆ ಆಗಿರೋದ್ರಿಂದ ಬೆಲೆಯಲ್ಲಿ ಏರಿಕೆ ಕಂಡಿದೆ.

RBI ಯಾಕೆ ಚಿನ್ನ ಖರೀದಿಸುತ್ತೆ..?

ಅದೇ ರೀತಿ ಆರ್‌ಬಿಐ ಕೂಡ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ನಿನ್ನೆ ಚಿನ್ನದ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಭಾರತ ಚಿನ್ನದತ್ತ ಸಾಗುತ್ತಿರೋದು ಅಮೆರಿಕ ಡಾಲರ್‌ನಿಂದ ದೂರ ಸರಿಯುತ್ತಿರುವುದರ ಸಂಕೇತವೇ ಅಂತಾ ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿರುವ ಸಚಿವೆ ಸೀತಾರಾಮನ್, ಆರ್‌ಬಿಐ ಬಳಿಯಿರುವ ಚಿನ್ನದ ನಿಕ್ಷೇಪಗಳು ಸೇರಿದಂತೆ ಭಾರತದ ಚಿನ್ನದ ನಿಕ್ಷೇಪಗಳಿಂದ ಅಂತಾರಾಷ್ಟ್ರೀಯ ಕರೆನ್ಸಿ ಬದಲಾಯಿಸುವ ಉದ್ದೇಶ ಹೊಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅಚ್ಚರಿ ನಿರ್ಧಾರಕ್ಕೆ ಬಂದ ಬಿಸಿಸಿಐ.. ಕಿಂಗ್ ಕೊಹ್ಲಿಗೆ ಮತ್ತೊಮ್ಮೆ ಕ್ಯಾಪ್ಟನ್ಸಿ ಪಟ್ಟ..!

publive-image

ಬ್ಯಾಲೆನ್ಸ್ ಮೀಸಲು ಬಂಡವಾಳ (Reserves in Balance Sheet) ಕಾಪಾಡಿಕೊಳ್ಳಲು ಕೇಂದ್ರ ಬ್ಯಾಂಕ್ ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಅಮೆರಿಕನ್ ಡಾಲರ್ ಪ್ರಮುಖ ಅಂಶ. ಆರ್‌ಬಿಐನ ಇತರ ಕರೆನ್ಸಿಗಳು, ಚಿನ್ನದಲ್ಲೂ ಮೀಸಲು ಹೊಂದಿದೆ. ಮೀಸಲು ಹಣವನ್ನು ಕಾಯ್ದುಕೊಳ್ಳುವುದು ಭಾರತದ ಕಾರ್ಯತಂತ್ರದ ಭಾಗ ಎಂದು ಸಚಿವರು ತಿಳಿಸಿದ್ದಾರೆ.

ಯಾಕೆ ಚಿನ್ನ ಖರೀದಿ ಹೆಚ್ಚಾಗಿದೆ..?

ಆರ್‌ಬಿಐ ಚಿನ್ನವನ್ನು ಗಣನೀಯವಾಗಿ ಖರೀದಿಸುತ್ತಿದೆ. ವಿದೇಶಿ ವಿನಿಮಯ ಮೀಸಲುಗಳ ಮರುಮೌಲ್ಯಮಾಪನದ ಅಪಾಯವನ್ನು ಕಡಿಮೆ ಮಾಡಲು ಮತ್ತು ಕರೆನ್ಸಿಯಲ್ಲಿ ಆಗುವ ಏರುಪೇರುಗಳನ್ನು ಕಡಿಮೆ ಚಿನ್ನ ಖರೀದಿ ಮಾಡಲಾಗುತ್ತಿದೆ. ಆರ್‌ಬಿಐ ಅಕ್ಟೋಬರ್‌ನಿಂದ ಚಿನ್ನದ ಖರೀದಿಯ ಪ್ರಮಾಣವನ್ನು ಹೆಚ್ಚಿಸುತ್ತಿದೆ.

ಇದನ್ನೂ ಓದಿ: ಕಿಂಗ್ ಕೊಹ್ಲಿಯೇ ಆರ್‌ಸಿಬಿ ನಾಯಕ.. ಸುಳಿವು ಬಿಟ್ಟುಕೊಟ್ಟ ಧೋನಿ ಆಪ್ತ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment