Advertisment

BREAKING: ಮಹಿಳೆಯರಿಗೆ ಗುಡ್‌ನ್ಯೂಸ್‌.. ಬಜೆಟ್ ಬಳಿಕ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ ₹4,000 ಇಳಿಕೆ!

author-image
Gopal Kulkarni
Updated On
ನೋಡೋಕೆ ಬೆಳ್ಳಿ ರೀತಿ; ಇದು ಚಿನ್ನಕ್ಕಿಂತಲೂ ಹೆಚ್ಚು ದುಬಾರಿ; ಹೂಡಿಕೆ ಮಾಡಿದ್ರೆ ಡಬಲ್​​ ಆದಾಯ!
Advertisment
  • ಚಿನ್ನದ ಪ್ರಿಯರಿಗೆ ಚಿನ್ನದಂತ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ
  • ಕಸ್ಟಮ್ಸ್ ಡ್ಯೂಟಿ ಕಡಿತದಿಂದ ಇಳಿದ ಹಳದಿ ಲೋಹದ ಬೆಲೆ
  • ಬಂಗಾರ ಮತ್ತು ಬೆಳ್ಳಿಯ ಬೆಲೆಯಲ್ಲಾದ ಬದಲಾವಣೆ ಏನು?

ನವದೆಹಲಿ: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್​ನಲ್ಲಿ ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಕಸ್ಟಮ್ಸ್ ಡ್ಯೂಟಿ ಮೇಲೆ ಭಾರೀ ಇಳಿಕೆ ಮಾಡಿದ್ದರಿಂದ ಈಗ ಬಂಗಾರದ ಬೆಲೆಯಲ್ಲೂ ಇಳಿಕೆ ಆಗಿದೆ. ಈ ಖುಷಿ ಸುದ್ದಿ ಚಿನ್ನ, ಬೆಳ್ಳಿ ಪ್ರಿಯರ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.

Advertisment

ಇದನ್ನೂ ಓದಿ: Budget2024: ಬಜೆಟ್‌ ಬಳಿಕ ಯಾವುದರ ಬೆಲೆ ಏರಿಕೆ? ಯಾವುದೆಲ್ಲಾ ಇಳಿಕೆ? ಇಲ್ಲಿದೆ ಮಾಹಿತಿ 

ಇಂದು ಮಂಡನೆಯಾದ ಕೇಂದ್ರ ಬಜೆಟ್ 2024ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಮ್ಮ ಸರ್ಕಾರ ಚಿನ್ನ ಬೆಳ್ಳಿ ಹಾಗೂ ಪ್ಲಾಟಿನಂ ಮೇಲಿನ ಕಸ್ಟಮ್ಸ್ ಡ್ಯೂಟಿಯನ್ನ ಇಳಿಕೆ ಮಾಡಲಿದೆ. ಚಿನ್ನದ ಮೇಲೆ ಶೇಕಡಾ 15 ರಷ್ಟು ಹಾಗೂ ಬೆಳ್ಳಿಯ ಮೇಲೆ ಶೇಕಡಾ 6 ರಷ್ಟು ಕಸ್ಟಮ್ಸ್ ಡ್ಯೂಟಿ ಇಳಿಕೆ ಮಾಡಲು ನಿರ್ಧರಿಸಿದ ಬಗ್ಗೆ ಹೇಳಿದರು. ಈ ಒಂದು ಬೆಳವಣಿಗೆ ಸದ್ಯ ಬಂಗಾರಕ್ಕೆ ಮತ್ತಷ್ಟು ಬೇಡಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.

publive-image

ಇದನ್ನೂ ಓದಿ: ಡಿಸಿಎಂ ಪವನ್​ ಕಲ್ಯಾಣ್​​ ಹತ್ಯೆಗೆ ಭಾರೀ ಸಂಚು.. ಕೇಂದ್ರ ಗುಪ್ತಚರ ಸಂಸ್ಥೆಯಿಂದ ಎಚ್ಚರಿಕೆ! 

Advertisment

ಯಾಕಂದ್ರೆ ಕಸ್ಟಮ್ಸ್ ಡ್ಯೂಟಿ ಇಳಿಕೆಯಾದ ಬೆನ್ನಲ್ಲೆ ಬಂಗಾರದ ಹಾಗೂ ಬೆಳ್ಳಿಯ ಬೆಲೆಯೂ ಕೂಡ ಸಹಜವಾಗಿ ಇಳಿಯಲಿದೆ. ಈ ಮೊದಲು 10 ಗ್ರಾಂ ಚಿನ್ನದ ಬೆಲೆ 72,838 ರೂಪಾಯಿಯಷ್ಟಿತ್ತು. ಈಗ ಹೊಸ ತೆರಿಗೆ ನೀತಿಯಿಂದಾಗಿ ಅದರ ಬೆಲೆ 68,500 ರೂಪಾಯಿ ಆಗಲಿದೆ. ಅಂದ್ರೆ ಒಂದು 10 ಗ್ರಾಂ ಬಂಗಾರದ ಬೆಲೆಯಲ್ಲಿ 4,000 ರೂಪಾಯಿಯಷ್ಟು ಇಳಿಕೆಯಾಗಿದೆ. ಅದರ ಜೊತೆಗೆ ಬೆಳ್ಳಿ ಕೆಜಿಗೆ 4720 ರೂಪಾಯಿ ಇಳಿಕೆ ಕಂಡಿದೆ. 88,995 ರೂಪಾಯಿಗೆ ಕೆಜಿಯಿದ್ದ ಬೆಳ್ಳಿ ಈಗ ಹೊಸ ಕಸ್ಟಮ್ಸ್​ ನೀತಿಯಿಂದಾಗಿ 84, 275 ರೂಪಾಯಿಗೆ ಇಳಿಕೆಯಾಗಲಿದೆ.

ಬಂಗಾರದ ಬೆಲೆ ಗಗನಕ್ಕೆ ಏರಿದೆ ಎಂದು ಚಿಂತಿಸುತ್ತಿದ್ದವರಿಗೆ ಈಗ ಕೊಂಚ ನಿರಾಳತೆ ಕಂಡಿದೆ. ಬಂಗಾರದ ಬೆಲೆ ಮಾರುಕಟ್ಟೆಯಲ್ಲಿ ಆಗಾಗ ಕಣ್ಣಾಮುಚ್ಚಾಲೆ ಆಟವಾಡುತ್ತಿತ್ತು. ಒಂದಿಷ್ಟು ಏರಿಕೆ ಕೊಂಚ ಇಳಿಕೆ ಕಾಣುತ್ತಿದ್ದ ಹಳದಿ ಲೋಹದ ದರ ಈಗ ಏಕಾಏಕಿ 400 ರೂಪಾಯಿಗೆ ಇಳಿಕೆಯಾಗಿದ್ದು ಗ್ರಾಹಕರ ಜೇಬಿಗೆ ಕೊಂಚ ಭಾರ ಕಡಿಮೆಯಾಗಿದ್ದು ಖುಷಿಯನ್ನು ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment