ಆಭರಣ ಪ್ರಿಯರಿಗೆ ಬಿಗ್ ಶಾಕ್; ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ.. 10 ಗ್ರಾಂಗೆ ಎಷ್ಟು ಹೆಚ್ಚಳ ಆಗಿದೆ?

author-image
Bheemappa
Updated On
ಚಿನ್ನಾಭರಣ ಪ್ರಿಯರಿಗೆ ಅತಿ ದೊಡ್ಡ ಶಾಕ್‌.. ₹10,000 ಆಗುತ್ತಾ 10 ಗ್ರಾಂ ಗೋಲ್ಡ್ ರೇಟ್‌; ಕಾರಣವೇನು?
Advertisment
  • ಮದುವೆ ಸೀಸನ್​ನಲ್ಲಿ ಚಿನ್ನ, ಬೆಳ್ಳಿಯ ಬೆಲೆಗಳು ಹೇಗೆಲ್ಲಾ ಇದೆ.?
  • ಬೆಂಗಳೂರಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟು ರೂ. ಇದೆ?
  • ಇಂದಿನ ಚಿನ್ನ, ಬೆಳ್ಳಿ ಬೆಲೆ ಹೇಗಿದೆ.? ಮಾಹಿತಿ ಇಲ್ಲಿ ನೀಡಲಾಗಿದೆ

ಮದುವೆ ದಿನಗಳಂದು ವಧು, ವರನಿಗಾಗಿ ಬಂಗಾರ, ಬೆಳ್ಳಿಯ ಆಭರಣಗಳನ್ನು ಖರೀದಿ ಮಾಡುವ ಅವಶ್ಯಕತೆ ಇದ್ದೇ ಇರುತ್ತದೆ. ಈ ಚಿನ್ನ, ಬೆಳ್ಳಿಯ ಬೆಲೆ ಎಷ್ಟೇ ಆಗಲಿ ಗ್ರಾಹಕರು ಕೊಂಡುಕೊಳ್ಳತ್ತಾರೆ. ಅಗತ್ಯಕ್ಕಾಗಿ ಜನ ಚಿನ್ನದ ಅಂಗಡಿಗಳ ಮುಂದೆ ಕ್ಯೂ ನಿಲ್ಲುತ್ತಾರೆ. ಇಂತಹ ಸಮಯದಲ್ಲೇ ಚಿನ್ನದ ಬೆಲೆ ಇಳಿಕೆ ಆಗುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಏರಿಕೆ ಆಗಿರುವುದು ಬೇಸರವೇ ಸರಿ.

ಚಿನ್ನದ ಬೆಲೆ ಏರಿಕೆ ಆಗುತ್ತಿರುವುದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಬಂಗಾರ ಅನ್ನೋದು ಎಲ್ಲರಿಗೂ ಗಗನ ಕುಸುಮವಾಗಿದೆ. ಏಕೆಂದರೆ 100 ರೂಪಾಯಂತೆ ಏರಿಕೆ ಆದರೆ ಕೇವಲ 10, 20 ರೂಪಾಯಿ ಅಷ್ಟು ಇಳಿಕೆ ಆಗುತ್ತದೆ. ಇದು ಖರೀದಿ ಮಾಡೋರಿಗೆ ಬೇಸರದ ಜೊತೆಗೆ ಚಿನ್ನ ಏಕೆ ಬಿಡು ಈಗ ಎನ್ನುವಂತೆ ಆಗಿದೆ ಎನ್ನಲಾಗಿದೆ. ಸದ್ಯ ಬಂಗಾರ, ಬೆಳ್ಳಿಯ ಬೆಲೆ ಹೇಗಿದೆ ಎಂದರೆ..?

ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹8,065 ಇದೆ. ಇದು ನಿನ್ನೆ ₹8,010 ಇತ್ತು. ನಿನ್ನೆ ಬೆಲೆಗೆ ಹೋಲಿಕೆ ಮಾಡಿದರೆ 55 ರೂಪಾಯಿ ಏರಿಕೆ ಕಂಡಿದೆ.
22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹80,650 ಇದೆ. ಇದು ನಿನ್ನೆ ₹80,100 ಇತ್ತು. ಇಲ್ಲಿಯ ದರದಲ್ಲಿ ₹550 ರೂಪಾಯಿ ಹೆಚ್ಚಳ ಆಗಿದೆ.

ಇದನ್ನೂ ಓದಿ:13 ವರ್ಷದ ಬಾಲಕನನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ ಆಗಿ ನೇಮಿಸಿದ ಡೋನಾಲ್ಡ್ ಟ್ರಂಪ್!

publive-image

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹8,798 ಆಗಿದೆ. ಇದು ನಿನ್ನೆ ₹8,738 ಇತ್ತು. ಇವತ್ತು 60 ರೂಪಾಯಿ ಏರಿಕೆ ಆಗಿದೆ.
24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹87,980 ಇದೆ. ಇದು ನಿನ್ನೆ ₹87,380 ಇತ್ತು. ನಿನ್ನೆ ದರಕ್ಕೆ ಹೋಲಿಸಿದರೆ ₹600 ಹೆಚ್ಚಾಗಿದೆ.

ಈ ನಗರಗಳಲ್ಲಿ ಬಂಗಾರದ ಬೆಲೆ..!

  • ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ₹80,800 ಇದೆ.
  • ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ದರ ₹80,650 ಇದೆ. ​
  • ಅಯೋಧ್ಯೆಯಲ್ಲಿ 22 ಕ್ಯಾರೆಟ್ ಚಿನ್ನ ₹80,800 ಇದೆ.

ಬೆಳ್ಳಿಯ ಬೆಲೆ ಎಷ್ಟಿದೆ?

ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 98 ಇದೆ. ಇದು ನಿನ್ನೆ ₹ 98 ರೂಪಾಯಿ ಇತ್ತು. ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಹಾಗೇ ಇಂದು 10 ಗ್ರಾಂ ಬೆಳ್ಳಿಯ ಬೆಲೆ ₹ 980 ಇದ್ದು ನಿನ್ನೆ ಇದರ ಬೆಲೆ ₹ 980 ಇತ್ತು. ಹೀಗಾಗಿ ಬೆಳ್ಳಿಯ ಬೆಲೆ ಸೇಮ್ ಟು ಸೇಮ್ ಇದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment