ಗೋಲ್ಡ್​ ಸ್ಮಂಗ್ಲಿಂಗ್ ರಾಣಿಗೆ ಈಗ ಒಂದಲ್ಲ, ಎರಡಲ್ಲ, ಮೂರು ಟೆನ್ಶನ್​! ಯಾವೆಲ್ಲಾ ಒತ್ತಡದಲ್ಲಿದ್ದಾರೆ ರನ್ಯಾ ರಾವ್​?

author-image
Gopal Kulkarni
Updated On
ಗೋಲ್ಡ್​ ಸ್ಮಂಗ್ಲಿಂಗ್ ರಾಣಿಗೆ ಈಗ ಒಂದಲ್ಲ, ಎರಡಲ್ಲ, ಮೂರು ಟೆನ್ಶನ್​! ಯಾವೆಲ್ಲಾ ಒತ್ತಡದಲ್ಲಿದ್ದಾರೆ ರನ್ಯಾ ರಾವ್​?
Advertisment
  • ಗೋಲ್ಡ್ ಸ್ಮಂಗ್ಲಿಂಗ್ ಕೇಸ್​ನಲ್ಲಿರುವ ರನ್ಯಾಗೆ 3 ಟೆನ್ಶನ್​
  • ಸ್ನೇಹಿತ ತರುಣ್ ರಾಜ್ ಏನೆಲ್ಲಾ ಬಾಯಿಬಿಡುತ್ತಾನೋ?
  • ಜಾಮೀನು ಮತ್ತು ಹೈಕೋರ್ಟ್, ಒಟ್ಟು ಮೂರು ಭೀತಿಗಳು

ನಟಿ ರನ್ಯಾ ರಾವ್ ಸದ್ಯ ಗೋಲ್ಡ್ ಸ್ಮಂಗ್ಲಿಂಗ್ ಕೇಸ್​ನಲ್ಲಿ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದಾರೆ.ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಆರೋಪ ಅವರ ಮೇಲಿದೆ. ಈಗಾಗಲೇ ಜೈಲಿನಲ್ಲಿ ಹಲವು ದಿನಗಳನ್ನು ಕಳೆದಿರುವ ರನ್ಯಾ ರಾವ್​, ಮತ್ತಷ್ಟು ಒತ್ತಡದಲ್ಲಿದ್ದಾರೆ. ಒಂದಲ್ಲ ಎರಡಲ್ಲ, ಮೂರು ಮೂರು ಟೆನ್ಶನ್ ಅವರಿಗೆ ಕಾಡುತ್ತಿವೆ. ಈ ನಟಿಗೆ ಕಾಡುತ್ತಿರುವ ಈ ಮೂರು ಟೆನ್ಶನ್​ಗಳು ಯಾವುವು ಅಂತ ನೋಡಿದ್ರೆ

ಟೆನ್ಷನ್ ನಂಬರ್ - 1

ನಟಿ ರನ್ಯಾ ಬಂಧನದ ಬೆನ್ನಲ್ಲೆ ಆಕೆಯ ಸ್ನೇಹಿತ ತರುಣ್ ರಾಜ್​ರನ್ನು ಕೂಡ ಡಿಆರ್​ಐ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧನ ಮಾಡಿ ಐದು ದಿನಗಳ ಕಾಲ ವಶಕ್ಕೂ ಕೂಡ ಪಡೆದಿದ್ದಾರೆ. ಕಸ್ಟಡಿಯಲ್ಲಿರುವ ತರುಣ್ ರಾಜ್ ಏನು ಹೇಳಿಕೆ ಕೊಡ್ತಾನೋ ಎಂಬ ಒತ್ತಡ ರನ್ಯಾರಾವ್​ಗೆ ಕಾಡುತ್ತಿದೆ. ನಟಿ ರನ್ಯಾ ಜೊತೆ ಬಹುತೇಕ ವಿದೇಶ ಪ್ರವಾಸಗಳಲ್ಲಿ ಭಾಗಿಯಾಗಿದ್ದದ ತರುಣ್​. ಇದರ ಜೊತೆಗೆ ಆಕೆಯೊಂದಿಗೆ ನಿರಂತರ ಸಂಪರ್ಕದಲ್ಲಿಯೂ ಕೂಡ ಇದ್ದ. ಈತನೂ ಕೂಡ ಸ್ಮಂಗ್ಲಿಂಗ್ ಕೇಸ್​ನಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು ಡಿಆರ್​ಐ ಬಂಧಸಿದ್ದು ವಿಚಾರಣೆ ನಡೆಸುತ್ತಿದೆ. ಹೀಗಾಗಿ ತರುಣ್ ಏನೆಲ್ಲಾ ಹೇಳ್ತಾನೋ ಅನ್ನೋ ಭಯ ರನ್ಯಾಗೆ ಕಾಡುತ್ತಿದೆ.

publive-image

ಟೆನ್ಷನ್ ನಂಬರ್ 2
ರನ್ಯಾಗೆ ಕಾಡುತ್ತಿರುವ ಮತ್ತೊಂದು ಟೆನ್ಶನ್ ಅಂದ್ರೆ ಅದು ಜಾಮೀನು ಅರ್ಜಿ ವಿಚಾರಣೆ. ಈಗಾಗಲೇ ಪ್ರಕರಣದಲ್ಲಿ ಜಾಮೀನು ಕೋರಿ ಎಪಿಎಂಎಂ ನ್ಯಾಯಾಲಯದಲ್ಲಿ ರನ್ಯಾ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು. ಜಾಮೀನು ಸಿಗುತ್ತೋ ಸಿಗಲ್ವೋ ಅನ್ನೋ ಒತ್ತಡದಲ್ಲಿದ್ದಾರೆ ರನ್ಯಾ. ಕಾರಣ ಡಿಆರ್​ಐ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಸೂಚಿಸಿದೆ. ಯಾವೆಲ್ಲಾ ಅಂಶಗಳನ್ನಿಟ್ಟುಕೊಂಡು ಆಕ್ಷೇಪಣೆ ಸಲ್ಲಿಕೆ ಮಾಡ್ತಾರೆ? ಇದರಿಂದ ನನ್ನ ಜಾಮೀನು ಅರ್ಜಿ ರದ್ದಾಗುತ್ತಾ ಎಂಬುದು ರನ್ಯಾಳ ಮತ್ತೊಂದು ಟೆನ್ಶನ್

ಇದನ್ನೂ ಓದಿ:ಅಕ್ರಮ ಚಿನ್ನ ಸಾಗಾಣಿಕೆ ಕೇಸ್; ನಟಿ ರನ್ಯಾ ರಾವ್​​ಗೆ 15 ದಿನ ನ್ಯಾಯಾಂಗ ಬಂಧನ

ಟೆನ್ಷನ್ ನಂಬರ್ - 3
ಒಂದು ವೇಳೆ ಎಪಿಎಂಎಂ ನ್ಯಾಯಾಲಯದಲ್ಲಿ ಜಾಮೀನು ಮಂಜೂರು ಆಗದೆ ಇದ್ದಲ್ಲಿ. ಹೈಕೋರ್ಟ್​ಗೆ ಅರ್ಜಿ ಸಲ್ಲಿಸಸಲು ರನ್ಯಾ ಪರ ವಕೀಲರು ಸಜ್ಜಾಗಿದ್ದಾರೆ. ಪ್ರಕರಣ ರದ್ದು ಕೋರಿ ಹಾಗೂ ತನಿಖೆಗೆ ತಡೆ ಕೋರಿ ಅರ್ಜಿ ಸಲ್ಲಿಸಲಿದ್ದಾರೆ. ಈ ಅರ್ಜಿಯನ್ನು ಹೈಕೋರ್ಟ್​ ಯಾವ ರೀತಿ ಪರಿಗಣಿಸಲಿದೆ, ಯಾವ ಆದೇಶ ನೀಡುತ್ತೆ ಎಂಬ ಟೆನ್ಶನ್​ನಲ್ಲಿ ರನ್ಯಾ ಬಳಲುತ್ತಿದ್ದಾರೆ. ಪರಪ್ಪನ ಅಗ್ರಹಾರದ ಜೈಲಿನ ಕಂಬಿಗಳ ಹಿಂದೆ ಈ ಮೂರ ಒತ್ತಡಗಳಿಂದ ಬಳಲುತ್ತಿದ್ದಾರೆ ರನ್ಯಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment