ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ; ರನ್ಯಾ ರಾವ್ ಜಾಮೀನು ಅರ್ಜಿ ವಜಾ

author-image
Bheemappa
Updated On
ನಟಿ ರನ್ಯಾಗೆ ಬಿಗ್ ಶಾಕ್.. ಕೋಟಿ ಕೋಟಿ ಮೌಲ್ಯದ ಯಾವೆಲ್ಲ ಪ್ರಾಪರ್ಟಿ ED ಜಪ್ತಿ ಮಾಡಿದೆ?
Advertisment
  • ಅಕ್ರಮ ಚಿನ್ನ ಕಳ್ಳಸಾಗಾಟ ಕೇಸ್​ನಲ್ಲಿ ರನ್ಯಾ ಅರೆಸ್ಟ್ ಆಗಿದ್ರು
  • ದುಬೈನಿಂದ ಬಂಗಾರದ ಬಿಸ್ಕತ್​ಗಳ ಕಳ್ಳ ಸಾಗಣೆ ಪ್ರಕರಣ
  • ಕಸ್ಟಮ್ಸ್ ಬ್ಯಾಗೇಜ್ ನಿಯಮ ಉಲ್ಲಂಘನೆ ಮಾಡಲಾಗಿದೆ

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

ಜಾಮೀನು ಅರ್ಜಿ ಕೋರಿ ನಟಿ ರನ್ಯಾ ಪರ ವಕೀಲರು, ನಗರದ 64ನೇ ಸಿಸಿಹೆಚ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ಕೋರ್ಟ್​ ವಜಾ ಮಾಡಿ ಆದೇಶ ನೀಡಿದೆ. ಇದರಿಂದ ರನ್ಯಾ ಜೈಲಿನಲ್ಲೇ ಮುಂದುವೆಯಬೇಕಾಗಿದೆ. ಜಾಮೀನಿಗಾಗಿ ಈ ಹಿಂದೆ ರನ್ಯಾ ರಾವ್ ಆರ್ಥಿಕ‌ ಅಪರಾಧಗಳ ವಿಶೇಷ ನ್ಯಾಯಾಲಯ ಅರ್ಜಿ ಸಲ್ಲಿಕೆ ಮಾಡಿದ್ದರು. ಇಲ್ಲಿಯೂ ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು.

ಇದನ್ನೂ ಓದಿ: ದಲಿತ ಸಮುದಾಯಕ್ಕೆ ಒಳ ಮೀಸಲಾತಿ.. ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

publive-image

ರನ್ಯಾ ಅವರ ಜಾಮೀನು ಅರ್ಜಿಯನ್ನ ಆರ್ಥಿಕ‌ ಅಪರಾಧಗಳ ವಿಶೇಷ ನ್ಯಾಯಾಲಯ ಹಾಗೂ 64ನೇ ಸಿಸಿಹೆಚ್ ಕೋರ್ಟ್ ಎರಡು ವಜಾ ಮಾಡಿವೆ. ಹೀಗಾಗಿ ರನ್ಯಾ ಅವರು ಜಾಮೀನಿಗಾಗಿ ಹೈಕೋರ್ಟ್ ‌ಮೆಟ್ಟಿಲೇರಲೇಬೇಕಾದ ಅನಿವಾರ್ಯತೆ ಬಂದಿದೆ.

ಜಾಮೀನು ಅರ್ಜಿ ವಜಾಗೆ ಕಾರಣಗಳು ಏನು?

  • ರನ್ಯಾ ರಾವ್ ಕೇಸ್​ನಲ್ಲಿ ಅಂತರರಾಷ್ಟ್ರೀಯ ಸಂಪರ್ಕ ಇವೆ
  • ಕಸ್ಟಮ್ಸ್ ಬ್ಯಾಗೇಜ್ ನಿಯಮ ಉಲ್ಲಂಘನೆ ಮಾಡಲಾಗಿದೆ
  • ಹೊರ ಬಂದಲ್ಲಿ ಸಾಕ್ಷಿ ನಾಶ ಹಾಗೂ ಮಿಸ್ ಲೀಡ್ ಮಾಡಬಹುದು
  • ಪ್ರಭಾವಿ ಆಗಿರುವುದರಿಂದ ಸಾಕ್ಷಿಗಳ‌ ಮೇಲೆ ಪ್ರಭಾವ ಬೀರಬಹುದು
  • ಕೇವಲ 1 ವರ್ಷದಲ್ಲಿ 27 ಬಾರಿ ವಿದೇಶಿ ಪ್ರಯಾಣ ಮಾಡಿದ್ದಾರೆ
  • ರನ್ಯಾರಿಂದ ಶೇಕಾಡ 38 ರಷ್ಟು ಕಸ್ಟಮ್ಸ್ ಸುಂಕ ವಂಚನೆ ಆಗಿದೆ
  • ಈ ವಂಚನೆಯಿಂದ ಕಸ್ಟಮ್ಸ್​ಗೆ ಒಟ್ಟು 4,83,72,694 ನಷ್ಟ ಆಗಿದೆ
  • ಒಂದು ವೇಳೇ ಜಾಮೀನು ಕೊಟ್ಟರೇ ದೇಶ ಬಿಟ್ಟು ಹೋಗಬಹದು

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment