ರನ್ಯಾ ರಾವ್ ಬೆನ್ನಲ್ಲೇ ದುಬೈನಿಂದ ಬೆಂಗಳೂರಿಗೆ ಮತ್ತೆ ಚಿನ್ನ ಕಳ್ಳ ಸಾಗಣೆ; ಸಿಕ್ಕಿಬಿದ್ದಿದ್ದೇ ರೋಚಕ ಸ್ಟೋರಿ!

author-image
admin
Updated On
ರನ್ಯಾ ರಾವ್ ಬೆನ್ನಲ್ಲೇ ದುಬೈನಿಂದ ಬೆಂಗಳೂರಿಗೆ ಮತ್ತೆ ಚಿನ್ನ ಕಳ್ಳ ಸಾಗಣೆ; ಸಿಕ್ಕಿಬಿದ್ದಿದ್ದೇ ರೋಚಕ ಸ್ಟೋರಿ!
Advertisment
  • ದುಬೈನಿಂದ 14 ಕೆಜಿ ಚಿನ್ನ ಸಾಗಿಸುವಾಗ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್!
  • ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಕೇಸ್‌
  • ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಗೋಲ್ಡ್ ಸ್ಮಗ್ಲಿಂಗ್ ಪತ್ತೆ!

ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್ ಅವರು ದುಬೈನಿಂದ 14 ಕೆಜಿ ಚಿನ್ನ ಸಾಗಾಟ ಮಾಡುವಾಗ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು. ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ರನ್ಯಾ ರಾವ್ ಅವರ ವಿಚಾರಣೆ ಮುಂದುವರಿದಿದೆ.

ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುವ ಈ ಪ್ರಕರಣ ದೇಶದ್ಯಾಂತ ಸದ್ದು ಮಾಡುತ್ತಿದೆ. ನಟಿ ರನ್ಯಾ ರಾವ್ ಬಂಧನದ ಬೆನ್ನಲ್ಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಅದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು.. ಪರ ವಿರೋಧ ಕುರಿತು ಏನೆಲ್ಲ ಚರ್ಚೆ ಆಗ್ತಿದೆ..? 

ಅಸಲಿಗೆ ಆಗಿದ್ದೇನು?
ನಟಿ ರನ್ಯಾ ರಾವ್ ಬಂಧನದ ಬಳಿಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ DRI ಅಧಿಕಾರಿಗಳ ತಪಾಸಣೆ ಚುರುಕಾಗಿದೆ. ಈ ಮಧ್ಯೆ ದುಬೈನಿಂದ ಆಗಮಿಸಿದ್ದ ಅಂಧ ಪ್ರಯಾಣಿಕನಿಂದ ಬರೋಬ್ಬರಿ 3.44 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿಯಾಗಿದೆ.

ಆರೋಪಿ ತಾನು ಅಂಧ ಅನ್ನೋದನ್ನೇ ಬಂಡವಾಳ ಮಾಡಿಕೊಂಡು ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನವನ್ನು ಸಾಗಿಸಲು ಯತ್ನಿಸಿದ್ದ. ಅಂಧನ ವರ್ತನೆ ಮೇಲೆ ಅನುಮಾನ ಬಂದು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದರು. ಅಂಧ ಪ್ರಯಾಣಿಕನ ಬಳಿ 3.995 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ.

ಅಕ್ರಮ ಚಿನ್ನ ಕಳ್ಳ ಸಾಗಣೆ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment