BBK11: ಅಚ್ಚರಿಯ ರೀತಿಯಲ್ಲಿ ಈ ವಾರದ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಸ್ಪರ್ಧಿ ಇವರೇ!

author-image
Veena Gangani
Updated On
BBK11: ಅಚ್ಚರಿಯ ರೀತಿಯಲ್ಲಿ ಈ ವಾರದ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಸ್ಪರ್ಧಿ ಇವರೇ!
Advertisment
  • ಬಿಗ್​ಬಾಸ್​​ನಲ್ಲಿ ಒಟ್ಟು 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ
  • ‘ಕಿಚ್ಚನ ಚಪ್ಪಾಳೆ’ ಕೊಡೋದಕ್ಕೆ ಮುಖ್ಯವಾದ ಕಾರಣವೇನು?
  • 7ನೇ ವಾರದಲ್ಲಿ ಸುದೀಪ್‌ರಿಂದ ಚಪ್ಪಾಳೆ ಗಿಟ್ಟಿಸಿಕೊಂಡವರು ಇವರೇ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ 48ನೇ ದಿನಕ್ಕೆ ಕಾಲಿಟ್ಟಿದೆ. ಒಟ್ಟು 17 ಸ್ಪರ್ಧಿಗಳು ಬಿಗ್​ಬಾಸ್​ ಸೀಸನ್​ 11ಕ್ಕೆ ಎಂಟ್ರಿ ಕೊಟ್ಟಿದ್ದರು. 17 ಸ್ಪರ್ಧಿಗಳಲ್ಲಿ ಸದ್ಯ 13 ಜನ ಬಿಗ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇನ್ನೂ ಪ್ರತಿ ವಾರದಂತೆ ಕಾರ್ಯಕ್ರಮದಲ್ಲಿ ಕೊನೆಯಲ್ಲಿ ಕಿಚ್ಚ ಸುದೀಪ್​ ಅವರು 13 ಸ್ಪರ್ಧಿಗಳಲ್ಲಿ ಓರ್ವ ಸ್ಪರ್ಧಿಗೆ ಚಪ್ಪಾಳೆಯನ್ನು ಕೊಡುತ್ತಾರೆ.

ಇದನ್ನೂ ಓದಿ:BBK11: ಉಗ್ರಂ ಮಂಜುಗೆ ಹೊರಗಿನ ಗುಟ್ಟು ಹೇಳಿದ ಚೈತ್ರಾ ಕುಂದಾಪುರ; ಏನದು?

publive-image

ಇನ್ನೂ ಕಳೆದ ವಾರ ಕಿಚ್ಚನ ಚಪ್ಪಾಳೆಯನ್ನು ಭವ್ಯಾ ಗೌಡ ಅವರು ಮಿಸ್​ ಮಾಡಿಕೊಂಡಿದ್ದರು. ಮೊದಲು ಕಿಚ್ಚನ ಕಡೆಯಿಂದ ಗಾಯಕ ಹನುಮಂತ ಅವರು ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಹೀಗಾಗಿ ಈ ವಾರ ಯಾವ ಸ್ಪರ್ಧಿಗೆ ಕಿಚ್ಚನ ಚಪ್ಪಾಳೆ ಬರುತ್ತೆ ಅಂತ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಕಳೆದ ಸೀಸನ್​ 10ರಿಂದ ಬಿಗ್​ಬಾಸ್ ಮನೆಯಲ್ಲಿ ಪ್ರತಿ ವಾರ ಕಿಚ್ಚ ಸುದೀಪ್ ಅವರು ಉತ್ತಮ ಪ್ರದರ್ಶನ ತೋರಿದ ಸ್ಪರ್ಧಿಗೆ ಚಪ್ಪಾಳೆ ಹೊಡೆಯುತ್ತಿದ್ದರು.

publive-image

ಇನ್ನೂ, ಕಿಚ್ಚ ಸುದೀಪ್​ ಅವರು ಸುಖಾ ಸುಮ್ಮನೆ ಚೆಪ್ಪಾಳೆ ತಟ್ಟುವುದಿಲ್ಲ. ಉತ್ತಮ ಪ್ರದರ್ಶನ ತೋರಿದ ಸ್ಪರ್ಧಿಗೆ ಚಪ್ಪಾಳೆ ಹೊಡೆಯುತ್ತಿದ್ದರು. ಈ ಹೊಸ ಅಧ್ಯಾಯದೊಂದಿಗೆ ಬಿಗ್​ಬಾಸ್ ಮನೆಗೆ ಬಂದಿದ್ದ 17 ಸ್ಪರ್ಧಿಗಳಲ್ಲಿ ಮೊದಲ ವಾರದಿಂದ ಮೂರನೇ ವಾರದವರೆಗೂ ಕಿಚ್ಚ ಸುದೀಪ್​ ಯಾರಿಗೂ ‘ಕಿಚ್ಚನ ಚಪ್ಪಾಳೆ’ ಸಿಕ್ಕಿರಲಿಲ್ಲ. ಆದರೆ ನಾಲ್ಕನೇ ವಾರಕ್ಕೆ ಹನುಮಂತಗೆ ಕಿಚ್ಚ ಸುದೀಪ್​ ತಮ್ಮ ಚಪ್ಪಾಳೆಯನ್ನು ಕೊಟ್ಟಿದ್ದರು. ಇದಾದ ಬಳಿಕ ಭವ್ಯಾ ಅವರು ಕೊನೆಯ ಕ್ಷಣದಲ್ಲಿ ಮಿಸ್ ಮಾಡಿಕೊಂಡಿದ್ದರು. ಇದೀಗ ಗೋಲ್ಡ್​ ಸುರೇಶ್​ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಇಡೀ ವಾರದ ಟಾಸ್ಕ್​ ನೋಡಿ ಈ ವಾರದ ಚಪ್ಪಾಳೆಯನ್ನು ಕಿಚ್ಚ ಸುದೀಪ್​ ಗೋಲ್ಡ್​ ಸುರೇಶ್​ಗೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment