‘ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’.. ವಂಚನೆ ಆರೋಪದ ಬೆನ್ನಲ್ಲೇ ಗೋಲ್ಡ್ ಸುರೇಶ್‌ ಗರಂ

author-image
Veena Gangani
Updated On
ಬಿಗ್​ಬಾಸ್​ ಗೋಲ್ಡ್​ ಸುರೇಶ್​ಗೆ ಸಿಕ್ತು ಚಿನ್ನಕ್ಕೂ ಮಿಗಿಲಾದ ಉಡುಗೊರೆ; ಫೋಟೋ ಇಲ್ಲಿದೆ ನೋಡಿ
Advertisment
  • ಗೋಲ್ಡ್​ ಸುರೇಶ್​ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ
  • ‘ಯಾವುದೇ ರೀತಿಯ ಬಾಕಿ ಹಣವನ್ನ ನಾನು ಉಳಿಸಿಕೊಂಡಿಲ್ಲ’
  • ನ್ಯೂಸ್‌ಫಸ್ಟ್‌ಗೆ ಪ್ರತಿಕ್ರಿಯಿಸಿದ ಬಿಗ್‌ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್‌

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ಗೋಲ್ಡ್​ ಸುರೇಶ್​ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಕೇಬಲ್ ಚಾನೆಲ್ ಸೆಟ್ ಅಪ್ ಮಾಡಿ ಕೊಡೋದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಆರೋಪ ಮಾಡಿದ್ದಾರೆ. ನಾಲ್ಕು ಲಕ್ಷ ಹಣ ಹಿಂದಿರುಗಿಸಲು ಯಾಮಾರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಸಿನಿಮಾವನ್ನೂ ಮೀರಿಸುವಂತಿದೆ ಸೋನಂ ಪ್ಲಾನ್.. ತನಿಖೆಯಲ್ಲಿ ಪ್ರತಿ ಸನ್ನಿವೇಶಗಳೂ ಮರುಸೃಷ್ಟಿ..

publive-image

ಇನ್ನೂ, ಬಿಗ್​ಬಾಸ್​ ಮಾಜಿ ಸ್ಪರ್ಧಿಯಾಗಿರೋ ಗೋಲ್ಡ್​ ಸುರೇಶ್ ಅವರು ನ್ಯೂಸ್​ಫಸ್ಟ್​ನೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ​2017ರಲ್ಲಿಯೇ ನಾನು ಆ ವ್ಯಕ್ತಿಗೆ ಪಡೆದ ಹಣ ವಾಪಸ್ ನೀಡಿದ್ದೇನೆ. ಈಗ ನನ್ನ ಬಳಿ ಹಣವಿದೆ ಅನ್ನೋ ಕಾರಣಕ್ಕೆ ಆರೋಪ ಮಾಡಿದ್ದಾನೆ. ನಾನು ಉದ್ಯಮಿಯಾಗಿ ಬೆಳೆದಿರುವ ಕಾರಣ ವಿನಾಕಾರಣ ಆರೋಪ ಮಾಡಿದ್ದಾರೆ. ಆ ವ್ಯಕ್ತಿಯ ಸಾಲವನ್ನೆಲ್ಲಾ ನಾನು ಮರು ಪಾವತಿ ಮಾಡಿದ್ದೇನೆ. ಯಾವುದೇ ರೀತಿಯ ಬಾಕಿ ಹಣವನ್ನ ನಾನು ಉಳಿಸಿಕೊಂಡಿಲ್ಲ. ಸುಳ್ಳು ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮಾಡುತ್ತೇನೆ ಅಂತ ಹೇಳಿದ್ದಾರೆ.

publive-image

ಹೌದು, ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮೈನುದ್ದಿನ್ ಎಂಬ ಯುವಕನ ಜೊತೆ ಗೋಲ್ಡ್​ ಸುರೇಶ್​ ಬರೋಬ್ಬರಿ 14 ಲಕ್ಷಕ್ಕೆ ಅಗ್ರೀಮೆಂಟ್ ಮಾಡಿಕೊಂಡಿದ್ದಂತೆ. ಸ್ಟುಡಿಯೋ ನಿರ್ಮಾಣ ಹಾಗೂ ಉಪಕರಣಗಳ ಖರೀದಿಗೆ ಸಂಬಂಧಿಸಿ 2017ರಲ್ಲೇ ಗೋಲ್ಡ್ ಸುರೇಶ್ ಜೊತೆ 14 ಲಕ್ಷ ರೂ.ಗೆ ಒಪ್ಪಂದ (ಅಗ್ರಿಮೆಂಟ್) ಮಾಡಲಾಗಿತ್ತಂತೆ. ಇದರ ಭಾಗವಾಗಿ ಪ್ರಾರಂಭದಲ್ಲಿ 4 ಲಕ್ಷ ರೂ. ಮುಂಗಡವಾಗಿ ನೀಡಲಾಗಿತ್ತು. ನಂತರ ಹಂತ ಹಂತವಾಗಿ 7 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಮೈನುದ್ದಿನ್ ಆರೋಪಿಸಿದ್ದಾರೆ. ಆದರೆ, ಕೆಲಸವನ್ನು ಅರ್ಧಕ್ಕೆ ಬಿಟ್ಟು, ಅತಂತ್ರ ಸ್ಥಿತಿಗೆ ಸಿಲುಕಿದಂತಾಗಿದೆ. ಹಣ ಕೊಟ್ಟ ಕೆಲವು ದಿನಗಳು ಮಾತ್ರ ಒಂದಷ್ಟು ಕೆಲಸ ಮಾಡಿ ನಂತರ ಕೆಲಸ ಮಾಡಿಸದೇ ಗೋಲ್ಡ್ ಸುರೇಶ್ ಸುಮ್ಮನಾಗಿದ್ದಾರಂತೆ. ಜೊತೆಗೆ, ಬಾಕಿ ಹಣವನ್ನು ಕೊಟ್ಟರೂ ಕೆಲಸ ಮುಗಿಸಲು ನಿರಾಕರಿಸಿದ್ದಾರಂತೆ. ನಂತರ ಮೈನುದ್ದಿನ್ ಮತ್ತು ಆತನ ಸ್ನೇಹಿತ ಬಸವರಾಜ್ ಅವರು ಸುರೇಶ್ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ, ಸುರೇಶ್ ಕಾಣೆಯಾಗಿದ್ದಾರೆ ಎಂದು ದೂರಿದ್ದರು.

publive-image

2025ರ ಏಪ್ರಿಲ್ 29ರಂದು ಸುರೇಶ್ ಮೈನುದ್ದಿನ್ ಸ್ನೇಹಿತ ಬಸವರಾಜ್ ಅವರ ಖಾತೆಗೆ 50,000 ರೂ. ವರ್ಗಾಯಿಸಿದ್ದರೂ, ಉಳಿದಿರುವ ಸುಮಾರು 4 ಲಕ್ಷ ರೂ. ಪಾವತಿ ಮಾಡಿಲ್ಲ ಎನ್ನಲಾಗಿದೆ. ಬಾಕಿ ಹಣ ನೀಡುವ ಭರವಸೆ ನೀಡಿ 'ಮುಂಬೈಗೆ ಬನ್ನಿ, ಹಣ ಕೊಡ್ತೀನಿ' ಎಂದು ಲೊಕೇಶನ್ ಶೇರ್ ಮಾಡಿದ್ದರು. ಅಲ್ಲಿಯೂ ಹಣ ಪಾವತಿ ಮಾಡಿಲ್ಲ ಎಂದು ಮೈನುದ್ದಿನ್ ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment