/newsfirstlive-kannada/media/post_attachments/wp-content/uploads/2024/12/gold-suresh4.jpg)
ಕನ್ನಡ ಕಿರುತೆರೆಯ ಗೀತಾ ಸೀರಿಯಲ್ ಮೂಲಕವೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಬಿಗ್ಬಾಸ್ಗೆ ಎಂಟ್ರಿ ಕೊಟ್ಟು ಕಮಾಲ್ ಮಾಡುತ್ತಿದ್ದಾರೆ ಭವ್ಯಾ ಗೌಡ. ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಭವ್ಯಾ ಗೌಡ ಬಿಗ್ಬಾಸ್ ಮನೆಯಲ್ಲಿ ನಿಜಕ್ಕೂ ಹೇಗಿರುತ್ತಾರೆ ಅಂತ ಗೋಲ್ಡ್ ಸುರೇಶ್ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಮನೆಯ ವಿಲನ್ ಮಂಜು ಡೈಲಾಗ್; ತ್ರಿವಿಕ್ರಮ್‌ಗೆ ಗುರಾಯಿಸಿದ ಧನರಾಜ್!
ಕಳೆದ ವಾರ ಬಿಗ್ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಅವರು ಆಚೆ ಬಂದಿದ್ದಾರೆ. ಬಿಗ್ಬಾಸ್ನಿಂದ ಆಚೆ ಬರುತ್ತಿದ್ದಂತೆ ಗೋಲ್ಡ್ ಸುರೇಶ್ ಯಾರೆಲ್ಲಾ ಸ್ಪರ್ಧಿಗಳು ಹೇಗೆ ಅಂತ ಹೇಳಿಕೊಂಡಿದ್ದಾರೆ. ಈ ಬಗ್ಗೆ ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಮಾತಾಡಿದ ಗೋಲ್ಡ್ ಸುರೇಶ್, ನಾನು ಬಿಗ್ಬಾಸ್ ಮನೆಗೆ ಹೋಗಿ ಎರಡನೇ ವಾರದಲ್ಲಿ ಹೇಳಿದ್ದೇ. ನಿಮಗೆ ತುಂಬಾ ಆ್ಯಟಿಟ್ಯೂಡ್ ಜಾಸ್ತಿ ಇದೆ. ಇದೇ ಆ್ಯಟಿಟ್ಯೂಡ್ನಲ್ಲಿ ಆಟವನ್ನು ಆಡುತ್ತಾರೆ. ಬಳಿಕ ಎಲ್ಲೋ ಒಂದು ಕಡೆ ಕಳೆದು ಹೋಗುವುದನ್ನು ನಾನು ನೋಡಿದ್ದೇನೆ ಅಂತ ಹೇಳಿದ್ದಾರೆ.
ಬಿಗ್ಬಾಸ್ ಕೊಟ್ಟ ಟಾಸ್ಕ್ನಲ್ಲಿ ಭವ್ಯಾ ಗೌಡ ಸಖತ್ ಸ್ಟ್ರಾಂಗ್ ಆಡುತ್ತಾರೆ. ಯಾವುದೇ ಟಾಸ್ಕ್ ಕೊಟ್ಟರು ತಮ್ಮ ಶ್ರಮವನ್ನು ಹಾಕ್ತಾರೆ. ಆದ್ರೆ ಕೆಲವೊಂದು ಬಾರಿ ತ್ರಿವಿಕ್ರಮ್ ಜೊತೆಗೆ ಇರುವುದರಿಂದ ಯಾರ ಜತೆ ಅಷ್ಟಾಗಿ ಮಾತಾಡೋದಿಲ್ಲ ಎಂಬ ಮಾತುಗಳು ಸ್ಪರ್ಧಿಗಳ ಬಾಯಲ್ಲಿ ಕೇಳಿಬಂದಿವೆ. ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿದ್ದಂತೆ ಭವ್ಯಾ ಗೌಡ ಹೇಗೆ ಆಟ ಆಡ್ತಾರೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ