/newsfirstlive-kannada/media/post_attachments/wp-content/uploads/2024/11/RAJATH.jpg)
ಬಿಗ್ಬಾಸ್ ಮನೆಯಲ್ಲಿ ಕಳಪೆ ಮತ್ತು ಉತ್ತಮ ನೀಡುವ ವಿಚಾರದಲ್ಲಿ ಹೊತ್ತಿ ಉರಿದಿದೆ. ಬಹುತೇಕ ಸ್ಪರ್ಧಿಗಳು ಕಳಪೆಗೆ ರಜತ್ ಕಿಶನ್ ಹೆಸರು ತೆಗೆದುಕೊಂಡಿದ್ದು, ಜೈಲು ಸೇರಿದ್ದಾರೆ.
ಇಂದು ರಾತ್ರಿ ಪ್ರಸಾರವಾಗುವ ಎಪಿಸೊಡ್ನ ಪ್ರೊಮೋ ಒಂದನ್ನು ಬಿಗ್ಬಾಸ್ ಶೇರ್ ಮಾಡಿದ್ದಾರೆ. ಅದರಲ್ಲಿ ಮೋಕ್ಷಿತಾ, ಹನುಮಂತ, ಗೋಲ್ಡ್ ಸುರೇಶ್, ಶೋಭಾ ಶೆಟ್ಟಿ, ಐಶ್ವರ್ಯ, ಶಿಶೀರ್ ಸೇರಿದಂತೆ ಹಲವರು ಕಳಪೆ ರಜತ್ ಎಂದು ಹೇಳಿದ್ದಾರೆ. ಇದರಿಂದ ರಜತ್ ಕೆರಳಿ ಕೆಂಡವಾಗಿದ್ದಾರೆ.
ಇದನ್ನೂ ಓದಿ:ನಾಮಿನೇಷನ್ ಹಿಟ್ಲಿಸ್ಟ್! ಈ ವಾರ ಬಿಗ್ಬಾಸ್ನಿಂದ ಆಚೆ ಹೋಗೋ ಸ್ಪರ್ಧಿ ಯಾರು?
ಕಳಪೆ ನೀಡುವ ವೇಳೆ ರಜತ್ ಬಳಸಿದ ಪದಗಳ ಬಗ್ಗೆ ಗೋಲ್ಡ್ ಸುರೇಶ್ ಪ್ರಶ್ನೆ ಮಾಡಿದ್ದಾರೆ. ವೇದಿಕೆಗೆ ಬರುವ ರಜತ್, ಮತ್ತೆ ಗೋಲ್ಡ್ ಸುರೇಶ್ ಅವರತ್ತ ಬೆರಳು ತೋರಿಸಿ.. ಇಂತವರನ್ನೆಲ್ಲ ಮನೆಗೆ ಕಳುಹಿಸಿಯೇ ನಾನು ಹೋಗೋದು ಎಂದು ಚಾಲೇಂಜ್ ಮಾಡಿದ್ದಾರೆ. ನಾನು ಹುಟ್ಟಿದಾಗಿಂದ ಹೀಗೇ ಇದ್ದೀನಿ, ಇವಾಗಲೂ ಹೀಗೆ ಇದ್ದೀನಿ. ಇನ್ಮುಂದೆ ಇದಕ್ಕಿಂತ ತ್ರಿಬಲ್ ಮಾತಾಡ್ತೀನಿ. ತೋರಿಸ್ತೀನಿ. ಇನ್ಮುಂದೆ ನಿಜವಾದ ಆಟ ಶುರು ಎಂದು ಚಿಟಿಕೆ ಹೊಡೆದಿದ್ದಾರೆ.
ಅಂದ್ಹಾಗೆ ರಜತ್ ಕಳೆವಾರವಷ್ಟೇ ವೈಲ್ಡ್ ಕಾರ್ಡ್ ಮೂಲಕ ಬಿಗ್ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬರ್ತಿದ್ದಂತೆಯೇ ಕೆಲವು ಸ್ಪರ್ಧಿಗಳನ್ನು ನೇರವಾಗಿ ಟಾರ್ಗೆಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ಅವರು ಬಳಸುತ್ತಿರುವ ಪದಗಳ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಸ್ಪರ್ಧಿಗಳಿಗೂ ಅಸಮಾಧಾನ ಇದೆ.
ಇದನ್ನೂ ಓದಿ:ಬಿಗ್ಬಾಸ್ನಲ್ಲಿ ಅನೀರಿಕ್ಷಿತ ಬೆಳವಣಿಗೆ; ಮನೆಯಿಂದ ಹೊರ ಬರಲು ಡೋರ್ ತಟ್ಟಿದ ಗೋಲ್ಡ್ ಸುರೇಶ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ