ಚಿನ್ನಾಭರಣ ಪ್ರಿಯರಿಗೆ ಬಿಗ್ ಶಾಕ್.. ಮತ್ತೆ ₹2000 ಏರಿಕೆ; ಬಂಗಾರದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ!

author-image
Bheemappa
Updated On
ಚಿನ್ನಾಭರಣ ಪ್ರಿಯರಿಗೆ ಒಳ್ಳೆಸುದ್ದಿ; ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ.. ಎಷ್ಟು ರೂಪಾಯಿ?
Advertisment
  • 10 ಗ್ರಾಂ ಚಿನ್ನದ ಬೆಲೆ ಒಟ್ಟು ಎಷ್ಟು ಸಾವಿರ ರೂಪಾಯಿಗೆ ಆಗಿದೆ?
  • ಒಂದು ಲಕ್ಷ ರೂಪಾಯಿ ಸಮೀಪಕ್ಕೆ ಬಂದಿರುವ ಬಂಗಾರದ ರೇಟ್
  • ಎರಡು ತಿಂಗಳ ಅಂತರದಲ್ಲಿ ಗರಿಷ್ಠ ಬೆಲೆ ಏರಿಕೆ ಕಂಡಿರುವ ಬಂಗಾರ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರು, ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ಮೇಲೆ ಏಪ್ರಿಲ್ 2 ರಂದು ಗರಿಷ್ಠ ತೆರಿಗೆ ವಿಧಿಸಲಿದ್ದಾರೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದು 10 ಗ್ರಾಂಗೆ 2,000 ರೂಪಾಯಿ ಏರಿಕೆ ಕಂಡಿದೆ.

ಎರಡು ತಿಂಗಳಲ್ಲೇ 2ನೇ ಬಾರಿಗೆ ಚಿನ್ನದ ಬೆಲೆ ಗರಿಷ್ಠ ಏರಿಕೆ ಕಾಣುತ್ತಿರುವುದು ಗ್ರಾಹಕರಿಗೆ ಆಶ್ಚರ್ಯ ಮೂಡಿಸಿದೆ. ಕಳೆದ ಫೆಬ್ರುವರಿ 10 ರಂದು 10 ಗ್ರಾಂಗೆ 2400 ರೂಪಾಯಿ ಹೆಚ್ಚಳವಾಗಿದ್ದ ಚಿನ್ನ, ಇದೀಗ 2000 ರೂಪಾಯಿ ಏರಿಕೆ ಆಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ​​ತಿಳಿಸಿದೆ.

ಸದ್ಯ 10 ಗ್ರಾಂ ಚಿನ್ನದ ಬೆಲೆ 94,150 ರೂಪಾಯಿ ಆಗಿದೆ. ಮಾರ್ಚ್​ 28 ಶುಕ್ರವಾರದಂದು ಶೇಕಡಾ 99.9 ರಷ್ಟು ಶುದ್ಧತೆಯ ಬಂಗಾರ 10 ಗ್ರಾಂಗೆ 92,150 ರೂಪಾಯಿ ಇತ್ತು. ಆದರೆ ಈಗ 2000 ರೂಪಾಯಿ ಹೆಚ್ಚಳ ಆಗಿದ್ದರಿಂದ 94,150 ರೂಪಾಯಿ ಆಗಿದೆ. ಈ ಬೆಲೆಯೂ ಇನ್ನು ಅಧಿಕ ಆಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಬಿಗ್​ಬ್ಯಾಷ್​ ಕ್ರಿಕೆಟ್​ ಲೀಗ್​ಗೆ ಕಿಂಗ್​ ಕೊಹ್ಲಿ ಎಂಟ್ರಿ.. ಅಧಿಕೃತ ಘೋಷಣೆ, ವಿರಾಟ್​ಗೆ ಸಿಕ್ಸರ್ಸ್ ಸ್ವಾಗತ​!

publive-image

ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಷೇರು ಮಾರುಕಟ್ಟೆಗಳಲ್ಲಿ ಹಳದಿ ಲೋಹದ ಬೆಲೆ ಕುಸಿದಿದೆ. ಸತತ ನಾಲ್ಕನೇ ದಿನವೂ ನಿರಂತರವಾಗಿ ಏರಿಕೆ ಕಾಣುತ್ತಿರುವ ಬಂಗಾರ ಎರಡು ಸಾವಿರ ರೂಪಾಯಿ ಏರಿಕೆಯೊಂದಿಗೆ ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದೆ. ಚಿನ್ನದ ಬೆಲೆ ಏರಿಕೆ ಆಗಿದ್ದರಿಂದ ಗ್ರಾಹಕರು ಸೇರಿದಂತೆ ಜನರು ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 2 ಅಂದರೆ ನಾಳೆ ವಿಶ್ವದ ಹಲವು ದೇಶಗಳ ಮೇಲೆ ಗರಿಷ್ಠ ಸುಂಕ ವಿಧಿಸಲಿದ್ದಾರೆ. ಇದರಲ್ಲಿ ಭಾರತ ಕೂಡ ಸೇರಿದ್ದು ರಪ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಸಾಧ್ಯತೆ ದಟ್ಟವಾಗಿದೆ. ಸದ್ಯ 94,150 ರೂಪಾಯಿಗೆ ಏರಿಕೆ ಆಗಿರುವ ಚಿನ್ನ ನಾಳೆ 1 ಲಕ್ಷ ರೂಪಾಯಿಗೂ ಅಧಿಕವಾಗುವ ಸಾಧ್ಯತೆ ಇದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment