newsfirstkannada.com

ಗುದದ್ವಾರದಲ್ಲಿಟ್ಟು 50 ಲಕ್ಷ ಮೌಲ್ಯದ ಚಿನ್ನ ಸಾಗಾಟ.. ಮಂಗಳೂರು ಏರ್​ಪೋರ್ಟ್​ನಲ್ಲಿ ಇಬ್ಬರು ಅರೆಸ್ಟ್​

Share :

Published January 15, 2024 at 6:06pm

Update January 15, 2024 at 7:44pm

    ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದ ಇಬ್ಬರು

    ಗುದದ್ವಾರದಲ್ಲಿ ಬಚ್ಚಿಟ್ಟು ಕೊಂಡು ಚಿನ್ನ ಸಾಗಾಟ

    ವಿದೇಶದಿಂದ ತಂದಿದ್ದ 50 ಲಕ್ಷ ಮೌಲ್ಯದ ಚಿನ್ನ

ಮಂಗಳೂರು: ಗುದದ್ವಾರದಲ್ಲಿ ಬಚ್ಚಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಸುಮಾರು 50.93 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಈ ಘಟನೆ ಬೆಳಕಿಗೆ ಬಂದಿದೆ. ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿ ಕ್ಯಾಪ್ಸೂಲ್ ಗಳಲ್ಲಿ ತುಂಬಿಸಿಟ್ಟು ಗುದದ್ವಾರದಲ್ಲಿ ಅಡಗಿಸಿ ಸಾಗಾಟಕ್ಕೆ ಯತ್ನಿಸಲು ಮುಂದಾಗಿದ್ದಾರೆ. ಮತ್ತೋರ್ವ ಚಾಕಲೇಟ್ ಬಾಕ್ಸ್ ನಲ್ಲಿ ಚಿನ್ನವನ್ನು ಅಡಗಿಸಿ ಸಾಗಾಟ ಮಾಡಲು ಯತ್ನಿಸಿದ್ದಾನೆ. ಪ್ರಯಾಣಿಕರ ವರ್ತನೆಯ ಮೇಲೆ ಅನುಮಾನ ಗೊಂಡ ಕಸ್ಟಮ್ಸ್ ಅಧಿಕಾರಿಗಳು ಈ ವೇಳೆ ಪರಿಶೀಲಿಸಿದಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ.

ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಇಬ್ಬರು ದುಬೈನಿಂದ ಮಂಗಳೂರಿಗೆ ಬಂದಿದ್ದು, ಅಕ್ರಮ ಚಿನ್ನ ಸಾಗಾಟ ಮಾಡಲು ಯತ್ನಿಸಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಲಾಗಿದ್ದು, ತನಿಖೆಗೆ ಒಳಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುದದ್ವಾರದಲ್ಲಿಟ್ಟು 50 ಲಕ್ಷ ಮೌಲ್ಯದ ಚಿನ್ನ ಸಾಗಾಟ.. ಮಂಗಳೂರು ಏರ್​ಪೋರ್ಟ್​ನಲ್ಲಿ ಇಬ್ಬರು ಅರೆಸ್ಟ್​

https://newsfirstlive.com/wp-content/uploads/2024/01/Gold-1.jpg

Load More