/newsfirstlive-kannada/media/post_attachments/wp-content/uploads/2025/05/KRUNAL-PANDYA.jpg)
ಐಪಿಎಲ್ ಸೀಸನ್ 18 ಈ ಹಿಂದೆದಿಗಿಂತಲೂ ಸಖತ್ ಡಿಫರೆಂಟ್ ಆಗಿದೆ. ಲೀಗ್ ಸ್ಟೇಜ್ ಅಂತ್ಯಕ್ಕೆ 2 ಪಂದ್ಯಗಳು ಬಾಕಿ ಉಳಿದಿದ್ರೂ ಟಾಪ್ 2 ಸ್ಥಾನಕ್ಕಾಗಿ 4 ತಂಡಗಳ ನಡುವೆ ಟಫ್ ಫೈಟ್ ನಡೀತಿದೆ. ನಿಜ ಹೇಳಬೇಕಂದ್ರೆ ಮಿಲಿಯನ್ ಡಾಲರ್ ಟೂರ್ನಿಯ ಅಸಲಿ ಕಿಕ್ ಈಗ ಶುರುವಾಗಿದೆ. ಅದ್ರಲ್ಲೂ ಇವತ್ತಿನ ಪಂದ್ಯ ಕ್ರಿಕೆಟ್ ಲೋಕದ ಕುತೂಹಲ ಕೆರಳಿಸಿದೆ.
ಐಪಿಎಲ್ ಸೀಸನ್ 18 ಅಂತಿಮ ಘಟ್ಟ ತಲುಪಿದೆ. ಲೀಗ್ ಸ್ಟೇಜ್ ಅಂತ್ಯಕ್ಕೆ ಜಸ್ಟ್ ಎರಡೇ ಎರಡು ಪಂದ್ಯ ಮಾತ್ರ ಬಾಕಿ ಉಳಿದಿವೆ. ಕಲರ್ಫುಲ್ ಲೀಗ್ನ ಅಂತ್ಯಕ್ಕೆ ಕೌಂಟ್ಡೌನ್ ಶುರುವಾಗಿದ್ರೂ, ಅಭಿಮಾನಿಗಳ ಕುತೂಹಲ ಕಡಿಮೆಯಾಗಿಲ್ಲ. ಇಂದು ಮತ್ತು ನಾಳಿನ ಪಂದ್ಯಗಳ ಮೇಲೆ ಕ್ರಿಕೆಟ್ ಲೋಕದ ಕಣ್ಣಿದೆ. ಈ ಎರಡು ಪಂದ್ಯಗಳಲ್ಲಿ ಟಾಪ್-2 ಸ್ಥಾನಿ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ.
ಇದನ್ನು ಓದಿ: ಕೊರೊನಾ ಮಧ್ಯೆ ಆರೋಗ್ಯ ಇಲಾಖೆಗೆ ಮತ್ತೊಂದು ದೊಡ್ಡ ಆತಂಕ.. ಬೆಂಗಳೂರಲ್ಲೇ ಈ ಸಮಸ್ಯೆ..!
- ಮ್ಯಾಚ್ ನಂ. 64: ಲಕ್ನೋ ಎದುರು ಗುಜರಾತ್ಗೆ ಸೋಲು
- ಮ್ಯಾಚ್ ನಂ. 65: ಹೈದ್ರಾಬಾದ್ ವಿರುದ್ಧ RCBಗೆ ಸೋಲು
- ಮ್ಯಾಚ್ ನಂ. 66: ಡೆಲ್ಲಿ ವಿರುದ್ಧ ಪಂಜಾಬ್ ಕಿಂಗ್ಸ್ಗೆ ಸೋಲು
- ಮ್ಯಾಚ್ ನಂ. 67: ಚೆನ್ನೈ ವಿರುದ್ಧ ಗುಜರಾತ್ಗೆ ಸೋಲು
ಕಳೆದ 4 ದಿನಗಳಿಂದ ನಡೆದ ಈ 4 ಪಂದ್ಯಗಳು ಐಪಿಎಲ್ ಸೀಸನ್ 18ಕ್ಕೆ ಸಖತ್ ಟ್ವಿಸ್ಟ್ ಕೊಟ್ಟಿವೆ. ಈ ನಾಲ್ಕೂ ಪಂದ್ಯಗಳಲ್ಲಿ ಪಾಯಿಂಟ್ಸ್ ಟೇಬಲ್ನ ಟಾಪ್ ಸ್ಥಾನದ ಮೇಲೆ ಕಣ್ಣಿಟ್ಟ ತಂಡಗಳಿಗೆ ಎಲಿಮಿನೇಟ್ ಆಗಿರೋ ತಂಡಗಳು ಸೋಲಿನ ರುಚಿ ತೋರಿಸಿವೆ. ಹೀಗಾಗಿ ಪಾಯಿಂಟ್ಸ್ ಟೇಬಲ್ನಲ್ಲಿ ಹಾವು-ಏಣಿ ಆಟ ಮುಂದುವರೆಸಿದೆ. ಟಾಪ್ 2 ತಂಡವಾಗಿ ಪ್ಲೇ ಆಫ್ ಪ್ರವೇಶಿಸೋಕೆ 4 ತಂಡಗಳಿಗೆ ಡೋರ್ ಈಗಲೂ ಫುಲ್ ಓಪನ್ ಆಗಿದೆ.
ಪಂಜಾಬ್ vs ಮುಂಬೈ ಫೈಟ್
ಪಿಂಕ್ ಸಿಟಿ ಜೈಪುರದಲ್ಲಿಂದು ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಫೈಟ್ ನಡೆಯಲಿದೆ. ಪ್ಲೇ ಆಫ್ಗೆ ಕ್ವಾಲಿಫೈ ಆಗಿರೋ ಉಭಯ ತಂಡಗಳಿಗೆ ಇದು ಕೊನೆಯ ಲೀಗ್ ಪಂದ್ಯವಾಗಿದೆ. ಇಂದಿನ ಪಂದ್ಯ ಗೆದ್ದವರು ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್ 1 ಸ್ಥಾನಕ್ಕೇರಲಿದ್ದಾರೆ. ಸೋತವರಿಗೆ ಸಂಕಷ್ಟ ಎದುರಾಗಲಿದ್ದು ಟಾಪ್ 2 ಸ್ಥಾನದ ಕನಸು ನುಚ್ಚು ನೂರಾಗಲಿದೆ. ಹೀಗಾಗಿ ಇವರಿಬ್ಬರ ನಡುವಿನ ಇಂದಿನ ಬ್ಯಾಟಲ್ ಸಾಕಷ್ಟು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: IPL 2025: ಇವತ್ತು ಮುಂಬೈ ವಿರುದ್ಧ ಪಂಜಾಬ್ ಗೆದ್ದರೆ ಆರ್ಸಿಬಿಗೆ ಲಾಭ ಇದೆಯಾ..?
ಪುಟಿದೇಳುವ ತವಕದಲ್ಲಿ ಪಂಜಾಬ್ ಕಿಂಗ್ಸ್
ನೂತನ ನಾಯಕ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ಶೈನಿಂಗ್ ಪರ್ಫಾಮೆನ್ಸ್ ನೀಡಿದೆ. ಡೆಲ್ಲಿ ವಿರುದ್ಧದ ಕಳೆದ ಪಂದ್ಯದ ಸೋಲು ಟಾಪ್ 2 ಸ್ಥಾನದ ಕನಸನ್ನ ಅತಂತ್ರವಾಗಿಸಿದೆ. ಕಳೆದ ಪಂದ್ಯದಲ್ಲಿ ಸಂಘಟಿತ ಹೋರಾಟ ನಡೆಸುವಲ್ಲಿ ವಿಫಲವಾಗಿದ್ದ ಪಂಜಾಬ್ ಕಿಂಗ್ಸ್, ಇಂದು ಪುಟಿದೇಳೋ ತವಕದಲ್ಲಿದೆ. ಗೆದ್ದು ಮೊದಲ ಸ್ಥಾನಕ್ಕೇರೋ ಲೆಕ್ಕಾಚಾರದಲ್ಲಿದೆ.
ಮುಂಬೈಗೆ ನಂ.1 ಕನಸು..!
ಸೀಸನ್ನ ಆರಂಭದಲ್ಲಿ 5 ಪಂದ್ಯ ಆಡಿ 1 ಪಂದ್ಯ ಮಾತ್ರ ಗೆದ್ದಿದ್ದ ಮುಂಬೈ ಇಂಡಿಯನ್ಸ್ ಆ ಬಳಿಕ ರಾಯಲ್ ಕಮ್ಬ್ಯಾಕ್ ಮಾಡಿ ಪ್ಲೇ ಆಫ್ಗೂ ಎಂಟ್ರಿ ಕೊಟ್ಟಿದೆ. 13 ಪಂದ್ಯದಲ್ಲಿ 8 ಪಂದ್ಯ ಗೆದ್ದು 16 ಪಾಯಿಂಟ್ಸ್ ಹೊಂದಿರೋ ಮುಂಬೈ ಇಂದಿನ ಪಂದ್ಯದಲ್ಲಿ ಗೆದ್ರೆ, 18 ಪಾಯಿಂಟ್ಸ್ನೊಂದಿಗೆ ಅಗ್ರಸ್ಥಾನಕ್ಕೇರಲಿದೆ. ರನ್ರೇಟ್ ಮುಂಬೈಗೆ ಪ್ಲಸ್ ಪಾಯಿಂಟ್ ಆಗಿದ್ದು, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರು ವಿಭಾಗದಲ್ಲಿ ಮಿಂಚಿನ ಪರ್ಫಾಮೆನ್ಸ್ ನೀಡ್ತಾ ಇರೋದ್ರಿಂದ ನಂಬರ್ ಸ್ಥಾನದ ಕನಸು ನನಸಾಗೋದು ಕಷ್ಟವೇನಲ್ಲ.
RCBಗೆ ಗೋಲ್ಡನ್ ಚಾನ್ಸ್.. ಲಕ್ನೋ ಎದುರು ಗೆದ್ರೆ ಲಕ್
ಇಂದಿನ ಪಂದ್ಯದಲ್ಲಿ ಮುಂಬೈ ಅಥವಾ ಪಂಜಾಬ್ ಯಾರೇ ಗೆದ್ದರೂ ಒಬ್ಬರಿಗೆ ಟಾಪ್ 2ರಲ್ಲಿ ಒಂದು ಸ್ಥಾನ ಕನ್ಫರ್ಮ್. ಇನ್ನೊಂದು ಸ್ಥಾನದ ಭವಿಷ್ಯ ನಾಳೆ ನಡೆಯೋ ಆರ್ಸಿಬಿ ಮತ್ತು ಲಕ್ನೋ ಪಂದ್ಯ ಮೇಲೆ ನಿಂತಿದೆ. ಈ ಪಂದ್ಯದಲ್ಲಿ ಆರ್ಸಿಬಿ ಗೆದ್ರೆ ಸಾಕು ಅಂಕಪಟ್ಟಿಯಲ್ಲಿ 2ನೇ ಸ್ಥಾನ ಫಿಕ್ಸ್ ಆಗಲಿದೆ. ಆರ್ಸಿಬಿ ಸೋತ್ರೆ ಗುಜರಾತ್ 2ನೇ ಸ್ಥಾನಿಯಾಗಿ ಪ್ಲೇ ಆಫ್ಗೆ ಎಂಟ್ರಿ ಕೊಡಲಿದೆ.
ಒಟ್ಟಿನಲ್ಲಿ, ಅಂತಿಮ ಘಟ್ಟ ತಲುಪಿರೋ ಹಂತದಲ್ಲಿ ಐಪಿಎಲ್ ಟೂರ್ನಿಯ ಅಸಲಿ ಕಿಕ್ ಅಭಿಮಾನಿಗಳಿಗೆ ಸಿಗ್ತಿದೆ. ಇಂದು ಹಾಗೂ ನಾಳೆಯ ಕದನದಲ್ಲಿ ಟಾಪ್ 2 ಸ್ಥಾನದ ಮೇಲೆ ಕಣ್ಣಿಟ್ಟಿರೋ ತಂಡಗಳು ಜಿದ್ದಾ ಜಿದ್ದಿನ ಹೋರಾಟ ನಡೆಸೋದು ಪಕ್ಕಾ. ಈ ಹೋರಾಟದಲ್ಲಿ ಗೆಲ್ಲೋದ್ಯಾರು? ಸೋಲೋದ್ಯಾರು? ಕಾದು ನೋಡೋಣ.
ಇದನ್ನೂ ಓದಿ: ಟಿಪ್ಪರ್ ಲಾರಿ, ಕಾರು ಮಧ್ಯೆ ಭೀಕರ ಅಪಘಾತ; ಸ್ಥಳದಲ್ಲೇ ಉಸಿರು ಚೆಲ್ಲಿದ ನಾಲ್ವರು!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ