newsfirstkannada.com

ಅಯೋಧ್ಯೆಯ ಅದ್ಭುತ ಫೋಟೋಗಳು.. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಇಂದು ಮಹತ್ವದ ಮಾಹಿತಿ

Share :

Published January 15, 2024 at 12:48pm

  ಜನವರಿ 22 ರಂದು ಲೋಕಾರ್ಪಣೆ ಆಗಲಿರುವ ಅಯೋಧ್ಯೆ ರಾಮಮಂದಿರ

  ಮಾಧ್ಯಮಗೋಷ್ಠಿಯಲ್ಲಿ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಹೇಳುವುದೇನು?

  ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್​ ವತಿಯಿಂದ ಮಾಧ್ಯಮಗೋಷ್ಠಿ

ಲಕ್ನೋ: ಇದೇ ಜನವರಿ 22 ರಂದು ಅಯೋಧ್ಯೆ ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಭವ್ಯ ರಾಮಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಸಿದ್ಧತಾ ಕಾರ್ಯಗಳು ಆರಂಭವಾಗಿದೆ. ಈ ತಯಾರಿಗಳ ಮಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್​ ಇಂದು ಮಹತ್ವದ ಸುದ್ದಿಗೋಷ್ಠಿಯನ್ನು ಕರೆದಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಮಾಧ್ಯಮಗೋಷ್ಠಿ ನಡೆಸಲಿದ್ದಾರೆ.

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂಭ್ರಮ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಮಾಧ್ಯಮಗೋಷ್ಠಿ ಕರೆದಿದ್ದಾರೆ. ಮಂದಿರ ಸಮಾರಂಭದ ಬಗೆಗಿನ ರೂಪುರೇಷಗಳನ್ನು, ಕಾರ್ಯಕ್ರಮದ ವಿವರ, ರಾಜಕೀಯ, ಸಿನಿಮಾ, ಉದ್ಯಮ ಕ್ಷೇತ್ರಗಳ ಗಣ್ಯರ ಭಾಗಿ ಸೇರಿದಂತೆ ಮಂದಿರದ ಬಗ್ಗೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಈ ಬೆನ್ನಲ್ಲೇ ಅಯೋಧ್ಯೆಯ ರಾಮಮಂದಿರದ ಒಳಭಾಗದ ಪೋಟೋಗಳನ್ನ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್​​ ಬಿಡುಗಡೆ ಮಾಡಿದೆ. ರಾಮಮಂದಿರದ ಗರ್ಭಗುಡಿಯ ಚಿನ್ನದ ಬಾಗಿಲು ಸಿದ್ಧವಾಗಿದೆ. ಜನವರಿ 22 ರಂದು ಪವಿತ್ರೀಕರಣದ ನಂತರ ರಾಮ ಲಲ್ಲಾನ ವಿಗ್ರಹವನ್ನ ಗರ್ಭಗುಡಿ ಒಳಗೆ ಪ್ರತಿಷ್ಠಾಪಿಸಲಾಗುವುದು. ಇದೀಗ ಚಿನ್ನದ ಲೇಪಿತ ಬಾಗಿಲಿನ ಫೋಟೋ ರಿಲೀಸ್ ಆಗಿದೆ.

ಇನ್ನೊಂದು ಫೋಟೋದಲ್ಲಿ ರಾಮ ದೇವಾಲಯದ ಆವರಣದಲ್ಲಿ ದೀಪಗಳನ್ನು ಆನ್ ಮಾಡುವುದರೊಂದಿಗೆ ರಾಮ ಮಂದಿರದ ಅದ್ಭುತ ನೋಟ ಕಣ್ಣಿಗೆ ಮುದ ನೀಡುವಂತಿದೆ. ನೃತ್ಯ ಮಂಟಪ ಸೇರಿದಂತೆ ಮಂದಿರದೊಳಗೆ 5 ಮಂಟಪಗಳ ನಿರ್ಮಾಣ ಮಾಡಲಾಗಿದೆ. ಈ ಫೋಟೋಗಳನ್ನ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಿಲೀಸ್ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯ ಅದ್ಭುತ ಫೋಟೋಗಳು.. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಇಂದು ಮಹತ್ವದ ಮಾಹಿತಿ

https://newsfirstlive.com/wp-content/uploads/2024/01/RAM_TEMPLE_1.jpg

Load More