/newsfirstlive-kannada/media/post_attachments/wp-content/uploads/2025/01/GOLD-MAN-4.jpg)
ಐತಿಹಾಸಿಕ ಪ್ರಸಿದ್ಧ ತಿರುಮಲದಲ್ಲಿ ಬಂಗಾರದ ಮನುಷ್ಯರು ಭಾರೀ ಸದ್ದು ಮಾಡುತ್ತಿದ್ದಾರೆ. ಹೊಸ ವರ್ಷದ ಮೊದಲ ದಿನ ಹೈದರಾಬಾದ್ ಮೂಲದ ಚಿನ್ನ ಬಾಬು ವಿಜಯ್ ಕುಮಾರ್ ಆಗಮಿಸಿದ್ದರು. ಅವರ ಬೆನ್ನಲ್ಲೇ ಬೆಂಗಳೂರು ಮೂಲದ ಚಿನ್ನದ ಮನುಷ್ಯನೊಬ್ಬ ಕಾಣಿಸಿಕೊಂಡರು.
ಐದು ಕೆಜಿಗೂ ಅಧಿಕ ಚಿನ್ನಾಭರಣ ಧರಿಸಿ ಶ್ರೀವಾರಿ ದರ್ಶನಕ್ಕೆ ಬಂದಿದ್ದರು. ದೊಡ್ಡ, ದೊಡ್ಡ ಚಿನ್ನದ ಸರಪಳಿಗಳು ಮತ್ತು ಬಳೆಗಳನ್ನು ಹಾಕಿ ತಿಮ್ಮಪ್ಪನ್ನ ಸನ್ನಿಧಿಯಲ್ಲಿ ಗಮನ ಸೆಳೆದರು. ದೇಗುಲದ ಮುಂಭಾಗದಲ್ಲಿದ್ದ ಭಕ್ತರು, ಅಧಿಕಾರಿಗಳು, ಭದ್ರತಾ ಸಿಬ್ಬಂದಿಗೆ ಬಂಗಾರದ ಮನುಷ್ಯರಿಗೆ ವಿಶೇಷ ಆಕರ್ಷಣೆಯಾದರು. ಹೊಸ ವರ್ಷದ ಮೊದಲ ದಿನ ಬೆಂಗಳೂರಿನ ರವಿ ಹಾಗೂ ಹೈದರಾಬಾದ್‌ನ ವಿಜಯಕುಮಾರ್ ಅನ್ನೋರು ತಲಾ 5 ಕೆಜಿಗೂ ಹೆಚ್ಚು ಚಿನ್ನಾಭರಣ ಧರಿಸಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:14 KG ಚಿನ್ನ ವಂಚಿಸಿದ ಐಶ್ವರ್ಯ ಕೇಸ್; ಕಾಂಗ್ರೆಸ್ ಶಾಸಕನ ವಿರುದ್ಧ ಕೆ ಅನ್ನದಾನಿ ಗಂಭೀರ ಆರೋಪ
ರವಿ ಮತ್ತು ವಿಜಯ್ ಕುಮಾರ್ ಕೊರಳಿಗೆ ಹಾಗೂ ತೋಳುಗಳಿಗೆ ಚಿನ್ನಾಭರಣ ಧರಿಸಿ ದೇವರ ದರ್ಶನ ಪಡೆದರು. ಇಬ್ಬರನ್ನೂ ಆಸಕ್ತಿಯಿಂದ ಗಮನಿಸಿದ ಭಕ್ತರು ದೇವಸ್ಥಾನದ ಮುಂದೆ ಸೆಲ್ಫಿಗೆ ಮುಗಿಬಿದ್ದರು. ಚಿನ್ನ ಕೊಳ್ಳಲಾಗದಿದ್ದರೂ ಚಿನ್ನವುಳ್ಳವರ ಜತೆ ಛಾಯಾಚಿತ್ರ ತೆಗೆಸಿಕೊಳ್ಳುವ ಖುಷಿ ತಿಮ್ಮಪ್ಪನ ಭಕ್ತರಿಗೆ ಸಿಕ್ಕಿದೆ.
ಚಿನ್ನದ ಆಭರಣಗಳು ಮತ್ತು ಹೂವು. ಇವೆರಡೂ ಮಹಿಳೆಯರ ಅಲಂಕಾರದ ಪ್ರಮುಖ ವಸ್ತು. ಚಿನ್ನಾಭರಣಗಳಿಲ್ಲದಿದ್ದರೂ ಮಹಿಳೆಯರು ಹೂವುಗಳನ್ನು ಧರಿಸಲು ಇಷ್ಟಪಡ್ತಾರೆ. ತಿರುಮಲ ವೆಂಕಣ್ಣನ ದರ್ಶನಕ್ಕೆ ಬರುವ ಭಕ್ತರು ಹೆಚ್ಚಾಗಿ ಹೂವುಗಳನ್ನ ತರಲ್ಲ. ಯಾಕೆಂದರೆ ಇಲ್ಲಿ ಚಿನ್ನದ ಆಭರಣಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ಇದೀಗ ಅತಿಯಾಗಿ ಚಿನ್ನಾಭರಣ ಧರಿಸುವ ಪುರುಷರು ತಿರುಮಲದಲ್ಲಿ ಈಗ ಗಿಜಿಗುಡುತ್ತಿದ್ದಾರೆ. ಬಹುತೇಕ ಮಂದಿ ಚಿನ್ನದೊಂದಿಗೆ ದರ್ಶನ ನೀಡುತ್ತಿದ್ದಾರೆ.
ಇದನ್ನೂ ಓದಿ:Happy new year! ಚಿನ್ನ, ಬೆಳ್ಳಿ ಖರೀದಿಸೋರಿಗೆ ಗೋಲ್ಡನ್ ನ್ಯೂಸ್.. ಬೆಲೆಯಲ್ಲಿ ಭಾರೀ ಇಳಿಕೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್