newsfirstkannada.com

×

ನಟಿ ಹರ್ಷಿಕಾ ಪೂಣಚ್ಚಗೆ ಸರ್ಪ್ರೈಸ್ ಕೊಟ್ಟ ನಟ ಗಣೇಶ್ ದಂಪತಿ; ಗೋಲ್ಡನ್ ಪಾರ್ಟಿಗೆ ಯಾರೆಲ್ಲಾ ಬಂದಿದ್ರು?

Share :

Published September 22, 2024 at 1:28pm

Update September 22, 2024 at 1:33pm

    ನಟ ಗಣೇಶ್ ಶಿಲ್ಪಾ ದಂಪತಿ ಕಡೆಯಿಂದ ಸರ್ಪ್ರೈಸ್ ಪಾರ್ಟಿ

    ಹರ್ಷಿಕಾ ಪೂಣಚ್ಚ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳು ಭಾಗಿ

    ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಸ್ಟಾರ್​ ದಂಪತಿ

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಮ್ಮನಾಗುತ್ತಿರೋ ನಟಿ ಹರ್ಷಿಕಾಗೆ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಸರ್ಪ್ರೈಸ್ ಬೇಬಿ ಶವರ್ ಪಾರ್ಟಿ ಆಯೋಜಿಸಿದ್ದಾರೆ.

ಬೇಬಿ ಶವರ್ ಪಾರ್ಟಿಯಲ್ಲಿ ನಟಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಹೌದು, ನಟ ಸ್ಯಾಂಡಲ್‌ವುಡ್ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಸರ್ಪ್ರೈಸ್ ಬೇಬಿ ಶವರ್ ಪಾರ್ಟಿಯನ್ನು ಮನೆಯಲ್ಲಿ ಆಯೋಜಿಸಿದ್ದಾರೆ.

ಬೇಬಿ ಶವರ್ ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ ನಟ ನಟಿಯರು ಭಾಗಿಯಾಗಿದ್ದಾರೆ. ಕನ್ನಡದ ಹಿರಿಯ ನಟಿ ಮಾಲಾಶ್ರೀ, ಶೃತಿ, ಅನುಪ್ರಭಾಕರ್ ದಂಪತಿ, ಅಮೂಲ್ಯ ಜಗದೀಶ್ ದಂಪತಿ, ಪ್ರಿಯಾಂಕಾ ಉಪೇಂದ್ರ, ಆರಾಧನಾ ರಾಮ್, ಶೃತಿ ಮಗಳು ಗೌರಿ, ಶರಣ್ಯ ಶೆಟ್ಟಿ ಸೇರಿದಂತೆ ಸಾಕಷ್ಟು ಮಂದಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚಗೆ ಮತ್ತೊಂದು ಸಂಭ್ರಮ; ಗಣೇಶನ ಹಬ್ಬಕ್ಕೆ ಸ್ಟಾರ್‌ಗಳ ಸರ್‌ಪ್ರೈಸ್‌!

ಇನ್ನು, 8 ತಿಂಗಳು ತುಂಬು ಗರ್ಭಿಣಿ ಆಗಿರುವ ಹರ್ಷಿಕಾಗೆ ಬೇಬಿ ಶವರ್ ಪಾರ್ಟಿಯಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಇನ್ನು, ಅಕ್ಟೋಬರ್‌ನಲ್ಲಿ ಹರ್ಷಿಕಾ ಮತ್ತು ಭುವನ್ ಜೋಡಿ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಪುಟ್ಟ ಕಂದಮ್ಮನನ್ನು ನೋಡಲು ಎದುರು ನೋಡುತ್ತಿದ್ದಾರೆ.

ಹಲವು ವರ್ಷಗಳು ಪ್ರೀತಿಸಿ ಕಳೆದ ವರ್ಷ ಆಗಸ್ಟ್‌ನಲ್ಲಿ ಹರ್ಷಿಕಾ ಮತ್ತು ಭುವನ್ ಹುಟ್ಟೂರಿನಲ್ಲಿ ಮದುವೆಯಾದರು. ಸದ್ಯ ಭುವನ್ ನಟನೆಯ ಹೊಸ ಚಿತ್ರಕ್ಕೆ ಪತ್ನಿ ಹರ್ಷಿಕಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಪತಿ ಸಿನಿಮಾವನ್ನು ನಟಿಯೇ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟಿ ಹರ್ಷಿಕಾ ಪೂಣಚ್ಚಗೆ ಸರ್ಪ್ರೈಸ್ ಕೊಟ್ಟ ನಟ ಗಣೇಶ್ ದಂಪತಿ; ಗೋಲ್ಡನ್ ಪಾರ್ಟಿಗೆ ಯಾರೆಲ್ಲಾ ಬಂದಿದ್ರು?

https://newsfirstlive.com/wp-content/uploads/2024/09/harshika-2.jpg

Load More