Advertisment

Golden time: ಚಿನ್ನದ ಮೇಲಿನ ಹೂಡಿಕೆಯಿಂದ ಭಾರೀ ಲಾಭ; ತಜ್ಞರ ಸಲಹೆ ಏನು ಗೊತ್ತಾ?

author-image
admin
Updated On
Gold Rate: ಇಂದು ಚಿನ್ನ ಖರೀದಿ ಮಾಡ್ತೀರಾ? ಬೆಲೆ ಇಳಿಕೆ ಆಗಿದ್ಯಾ? ಇಲ್ಲಿದೆ ಮಾಹಿತಿ
Advertisment
  • 2024ರ ಜನವರಿಯಿಂದ ಶೇ.24 ರಷ್ಟು ಚಿನ್ನದ ಬೆಲೆ ಏರಿಕೆ
  • ಷೇರುಪೇಟೆಯ ಷೇರುಗಳು, ಮಾರ್ಕೆಟ್ ರಿಸ್ಕ್‌ಗೆ ಒಳಪಟ್ಟಿರುತ್ತವೆ
  • ಚಿನ್ನದ ಮೇಲಿನ ಹೂಡಿಕೆಗೆ ಯಾವುದೇ ರಿಸ್ಕ್ ಇರಲ್ಲ ಎಂದ ತಜ್ಞರು

ಜನರಿಗೆ ಯಾವುದರ ಮೇಲೆ ಹೂಡಿಕೆ ಮಾಡಿದ್ರೆ ಹೆಚ್ಚಿನ ರಿಟರ್ನ್ಸ್ ಹಾಗೂ ಲಾಭ ಬರುತ್ತೆ ಅನ್ನೋ ಬಗ್ಗೆ ಗೊಂದಲ ಇದೆ. ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಬೇಕೋ, ಷೇರು ಪೇಟೆಯಲ್ಲಿ ಬ್ಲೂ ಚಿಪ್ ಷೇರುಗಳನ್ನು ಖರೀದಿ ಮಾಡಬೇಕೋ ಅಂತ ಜನರು ತಲೆ ಕೆಡಿಸಿಕೊಂಡಿದ್ದಾರೆ. ಷೇರುಪೇಟೆಯಲ್ಲೂ ಒಳ್ಳೆಯ ಬೆಳವಣಿಗೆ ಆಗುತ್ತಿದೆ. ರಿಯಲ್ ಎಸ್ಟೇಟ್‌ನಲ್ಲಿ ನಷ್ಟ ಆಗುವ ಮಾತೇ ಇಲ್ಲ. ಆದರೂ, ನಿಮ್ಮ ಹಣದ ಹೂಡಿಕೆ ಒಂದೇ ವರ್ಷದಲ್ಲಿ ಒಳ್ಳೆಯ ರಿಟರ್ನ್ಸ್ ನೀಡಬೇಕೆಂದರೆ ಚಿನ್ನದ ಮೇಲೆ ಹೂಡಿಕೆ ಮಾಡೋದು ಉತ್ತಮ ಅಂತ ಹೂಡಿಕೆ ತಜ್ಞರು ಅಂಕಿ-ಅಂಶದ ಸಾಕ್ಷಿ ಸಮೇತ ಹೇಳುತ್ತಿದ್ದಾರೆ.

Advertisment

ಇದನ್ನೂ ಓದಿ: 13 ಲಕ್ಷದ ವಾಚ್​.. 2 ಲಕ್ಷದ ಬ್ಯಾಗ್; ಆಧ್ಯಾತ್ಮಿಕ ವಾಗ್ಮಿ ಜೀವನ ಶೈಲಿಗೆ ಬೆಚ್ಚಿ ಬಿದ್ದ ನೆಟ್ಟಿಗರು; ಇವರ ಹಿನ್ನೆಲೆ ಏನು? 

ಚಿನ್ನದ ಮೇಲಿನ ಹೂಡಿಕೆ ಒಂದೇ ವರ್ಷದಲ್ಲಿ ಶೇ.30ರಷ್ಟು ಲಾಭವನ್ನು ತಂದುಕೊಟ್ಟಿದೆ. ಜೊತೆಗೆ ಬೇರೆ ಹೂಡಿಕೆಗಳಂತೆ ಚಿನ್ನದ ಮೇಲೆ ಹೂಡಿಕೆ ಹೆಚ್ಚಿನ ರಿಸ್ಕ್‌ಗಳನ್ನು ಹೊಂದಿಲ್ಲ. ಕಳೆದ ವರ್ಷದ ದೀಪಾವಳಿ ವೇಳೆಯ ಬೆಲೆಗೆ ಹೋಲಿಸಿದರೆ ಚಿನ್ನದ ಬೆಲೆ ಕಳೆದೊಂದು ವರ್ಷದಲ್ಲಿ ಶೇ.30 ರಷ್ಟು ಏರಿಕೆಯಾಗಿದೆ.

publive-image

ಗೋಲ್ಡನ್ ಟೈಮ್‌ ಯಾಕೆ? 

  • 2024ರ ಜನವರಿಯಿಂದ ಇಲ್ಲಿಯವರೆಗೂ ಶೇ.24 ರಷ್ಟು ಚಿನ್ನದ ಬೆಲೆಯಲ್ಲಿ ಏರಿಕೆ
  • ಕಳೆದ ವರ್ಷ ನವೆಂಬರ್ 10 ರಂದು 10 ಗ್ರಾಂ ಚಿನ್ನದ ಬೆಲೆ 60,750 ರೂಪಾಯಿ
  • ಇಂದು 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 80 ಸಾವಿರ ರೂಪಾಯಿಗೆ ಏರಿಕೆ
  • ಒಂದೇ ವರ್ಷದಲ್ಲಿ 10 ಗ್ರಾಂ ಚಿನ್ನದ ಬೆಲೆ 20 ಸಾವಿರ ರೂಪಾಯಿ ಏರಿಕೆ
  • ಕಳೆದ ವರ್ಷ 50 ಗ್ರಾಂ ಚಿನ್ನ ಖರೀದಿಸಿದ್ದವರಿಗೆ ಈಗ ಬರೋಬ್ಬರಿ 1 ಲಕ್ಷ ರೂಪಾಯಿ ಲಾಭ
  • ಷೇರುಪೇಟೆಯಲ್ಲಿ ಈಕ್ವಿಟಿ ಹೂಡಿಕೆಗಿಂತ ಹೆಚ್ಚಿನ ಲಾಭ ನೀಡಿದ ಚಿನ್ನದ ಖರೀದಿ
  • ಈ ವರ್ಷ ಭಾರತದ ಷೇರುಪೇಟೆ ಶೇ.11 ರಷ್ಟು ಮಾತ್ರ ಏರಿಕೆ
  • ಕಳೆದ 6 ತಿಂಗಳಿನಲ್ಲಿ ಭಾರತದ ಷೇರುಪೇಟೆ ಶೇ. 8 ರಷ್ಟು ಏರಿಕೆ
  • ಷೇರುಪೇಟೆಗೆ ಹೋಲಿಸಿದರೆ ಚಿನ್ನದ ಮೇಲಿನ ಹೂಡಿಕೆಯಿಂದ ಹೆಚ್ಚಿನ ಲಾಭ, ರಿಟರ್ನ್ಸ್ ಅಂತ ಅಂಕಿಅಂಶಗಳಿಂದಲೇ ಸಾಬೀತು
  • ಜಾಗತಿಕ ಅನಿಶ್ಚಿತತೆ, ರಷ್ಯಾ -ಉಕ್ರೇನ್ ಯುದ್ಧ, ಇಸ್ರೇಲ್- ಇರಾನ್ ಯುದ್ಧದಿಂದ ಚಿನ್ನದ ಮೇಲೆ ಹೂಡಿಕೆ ಸೇಫ್
  • ಯುದ್ಧದಿಂದ ಇಡೀ ಜಗತ್ತಿನ ಕಂಪನಿಗಳ ಷೇರು ಬೆಲೆಯಲ್ಲಿ ಕುಸಿತದ ಸಾಧ್ಯತೆ ಹೆಚ್ಚು
  • ಆದರೆ ಚಿನ್ನದ ಮೇಲೆ ಹೂಡಿಕೆಯಿಂದ ಕುಸಿತದ ಸಾಧ್ಯತೆಯೇ ಇಲ್ಲ
  • ಚಿನ್ನಕ್ಕೆ ಹೆಚ್ಚಾಗಿರುವ ಬೇಡಿಕೆಯಿಂದ ಚಿನ್ನದ ಬೆಲೆ ಏರಿಕೆ
  • ಜಾಗತಿಕ ಬಿಕ್ಕಟ್ಟಿನ ವೇಳೆ ಚಿನ್ನದ ಮೇಲಿನ ಹೂಡಿಕೆಯೇ ಸೇಫ್ ಎಂಬ ಅಭಿಪ್ರಾಯ
Advertisment

ಈಗ ದೀಪಾವಳಿ ಸಮಯವಾಗಿರುವುದರಿಂದ ಈಗ ಚಿನ್ನ ಖರೀದಿ ಉತ್ತಮ ಎಂದು ಹೂಡಿಕೆ ತಜ್ಞರು ಹೇಳುತ್ತಾರೆ. ಹಬ್ಬ, ಮದುವೆಯ ವೇಳೆ ಜನರು ಚಿನ್ನ ಖರೀದಿ ಮಾಡ್ತಾರೆ. ಮನೆಯಲ್ಲಿ ಚಿನ್ನ ಇದ್ದರೆ ಕಷ್ಟ ಕಾಲಕ್ಕೆ ಜನರ ನೆರವಿಗೆ ಬರುತ್ತೆ. ಚಿನ್ನ ಮಾರಿ ಕಷ್ಟದಿಂದ ಪಾರಾಗಬಹುದು. ಕೆಲವೊಮ್ಮೆ ಭೂಮಿಯನ್ನು ಮಾರಲು ಖರೀದಿದಾರರು ಸಿಗಲ್ಲ, ಭೂಮಿಗೆ ನಿರೀಕ್ಷಿತ ಬೆಲೆ ಸಿಗಲ್ಲ. ಆದರೆ ಚಿನ್ನವನ್ನು ಸುಲಭವಾಗಿ ಮಾರಬಹುದು.
ಷೇರುಪೇಟೆಯ ಷೇರುಗಳು, ಮಾರ್ಕೆಟ್ ರಿಸ್ಕ್‌ಗೆ ಒಳಪಟ್ಟಿರುತ್ತವೆ. ಆದರೆ ಚಿನ್ನದ ಮೇಲಿನ ಹೂಡಿಕೆ ಯಾವುದೇ ರಿಸ್ಕ್ ಇರಲ್ಲ. ಜನರು ತಮ್ಮ ಒಟ್ಟಾರೆ ಹೂಡಿಕೆಯ ಶೇ.10 ರಷ್ಟು ಅನ್ನು ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಎಂದ ತಜ್ಞರು ಸಲಹೆ ನೀಡುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment