ವಿಶ್ವದಲ್ಲೇ ಮೊದಲ ಬಾರಿ ‘ಗೋಲ್ಗೊಂಡಾ ನೀಲಿ ವಜ್ರ’ ಹರಾಜು; ಎಷ್ಟು ಕೋಟಿಗೆ? ಏನಿದರ ಇತಿಹಾಸ?

author-image
admin
Updated On
ವಿಶ್ವದಲ್ಲೇ ಮೊದಲ ಬಾರಿ ‘ಗೋಲ್ಗೊಂಡಾ ನೀಲಿ ವಜ್ರ’ ಹರಾಜು; ಎಷ್ಟು ಕೋಟಿಗೆ? ಏನಿದರ ಇತಿಹಾಸ?
Advertisment
  • ಇಂದೋರ್, ಬರೋಡಾ ಮಹಾರಾಜರ ಪರಂಪರೆಯ ಸಂಕೇತ
  • ಗೋಲ್ಗೊಂಡ ಗಣಿಗಳಲ್ಲಿ ಕಂಡು ಬರುವ ರಾಯಲ್ ನೀಲಿ ಬಣ್ಣದ ವಜ್ರ
  • ಈ ಉಂಗುರ ಒಂದು ಸರಿ ಇಂದೋರ್ ಮಹಾರಾಜರ ಒಡೆತನದಲ್ಲಿತ್ತು

ವಿಶ್ವದಲ್ಲೇ ಅತಿ ಅಪರೂಪದಲ್ಲೇ ಅಪರೂಪ, ಇಂದೋರ್ ಹಾಗೂ ಬರೋಡಾ ಮಹಾರಾಜರ ಪರಂಪರೆಯ ಸಂಕೇತವಾಗಿರೋ ಗೋಲ್ಗೊಂಡಾ ನೀಲಿ ವಜ್ರ, ಫರ್ ದಿ ಫಸ್ಟ್​ ಟೈಂ ಹರಾಜು ಆಗ್ತಿದೆ. ಸ್ವಿಜರ್ಲೆಂಡ್‌ನ ಜಿನಿವಾದಲ್ಲಿ ಕ್ರಿಸ್ಟೀಸ್ ಸಂಸ್ಥೆ ಮೇ 14ನೇ ತಾರೀಖು ನಡೆಯೋ "ಮ್ಯಾಗ್ನಿಫಿಸೆಂಟ್ ಜ್ಯುವೆಲ್ಸ್' ಕಾರ್ಯಕ್ರಮದಲ್ಲಿ ಐತಿಹಾಸಿಕ ವಜ್ರವನ್ನ ಹರಾಜಿಗೆ ಇಡ್ತಿದ್ದಾರೆ.

ಗೋಲ್ಗೊಂಡ ಗಣಿಗಳಲ್ಲಿ ಕಂಡು ಬರುವ ಈ ರಾಯಲ್ ನೀಲಿ ಬಣ್ಣದ ವಜ್ರವನ್ನ ಖರೀದಿ ಮಾಡೋದಕ್ಕೆ ನಾ ಮುಂದು.. ತಾ ಮುಂದು ಅಂತ ಹರಾಜಿನಲ್ಲಿ ಭಾಗಿಯಾಗೋದಕ್ಕೆ ಹಲವಾರು ಮಂದಿ ರೆಡಿಯಾಗಿದ್ದಾರೆ.

ಕ್ರಿಸ್ಟೀಸ್‌ ಇಂಟರ್‌ನ್ಯಾಷನಲ್ ಜ್ಯುವೆಲ್ಲರಿ ಮುಖ್ಯಸ್ಥರಾದ ರಾಹುಲ್ ಕಡಕಿಯಾ ಈ ಬಗ್ಗೆ ಮಾಹಿತಿ ಕೊಟ್ಟಿದ್ದು, ಈ ಉಂಗುರ ಒಂದು ಸರಿ ಇಂದೋರ್ ಮಹಾರಾಜರ ಒಡೆತನದಲ್ಲಿತ್ತು. ಆದ್ರೆ, ಇಲ್ಲಿಯವರೆಗೆ ಅಂತಹ ಉಂಗುರವನ್ನು ಹರಾಜಿಗೆ ಇಟ್ಟಿರಲಿಲ್ಲ. ಈಗ ನಾವು ಈ ನೀಲಿ ಬಣ್ಣದ ಗೋಲ್ಗೊಂಡ ವಜ್ರವನ್ನು ಹರಾಜಿಗೆ ಇಡೋದಕ್ಕೆ ತೀರ್ಮಾನ ಮಾಡಿದ್ದೇವೆ ಅಂತ ಮಾಹಿತಿ ಕೊಟ್ಟಿದ್ದಾರೆ.

publive-image

ಇಂತಹ ಗತಕಾಲದ ಅಪರೂಪದ್ದು ಹಾಗೂ ಕೋಟಿ ಕೋಟಿಗೆ ಬೆಲೆ ಬಾಳೋ ವಜ್ರಗಳು ಜೀವಿತಾವಧಿಯಲ್ಲಿ ಒಂದು ಸರಿ ಮಾತ್ರ ಹರಾಜಿಗೆ ಬರುತ್ವೆ. ಇದಕ್ಕೆ ಬರೋಬ್ಬರಿ 259 ವರ್ಷಗಳ ಇತಿಹಾಸವಿದೆ ಅಂತ ವರದಿಯಲ್ಲಿ ಹೇಳಿದೆ.

ಕ್ರಿಸ್ಟೀಸ್ ಸಂಸ್ಥೆ ವಿಶ್ವದ ಕೆಲವು ಪ್ರಸಿದ್ದ ಹಾಗೂ ಪ್ರಮುಖ ವಜ್ರಗಳನ್ನು ಮಾತ್ರ ಮಾರಾಟ ಮಾಡಿತ್ತು. ಆರ್ಚ್‌ ಡ್ಯೂಕ್ ಜೋಸೆಫ್ ಡೈಮಂಡ್, ಪ್ರಿನ್ಸಿ ಡೈಮಂಡ್ ಹಾಗೂ ವಿಟ್ಟೆಲ್‌ಬಾಚ್ ಡೈಮಂಡ್‌ಗಳನ್ನು ಈ ಹಿಂದೆ ನಡೀತಿದ್ದ ಹರಾಜುಗಳಲ್ಲಿ ಮಾರಾಟ ಮಾಡಿದ್ವಿ ಅಂತ ರಾಹುಲ್ ಕಡಕಿಯಾ ಹೇಳ್ತಾರೆ.

'ಗೋಲ್ಗೊಂಡ ನೀಲಿ' ವಜ್ರವು ವಿಶ್ವದ ಅಪರೂಪದ ನೀಲಿ ವಜ್ರಗಳಲ್ಲಿ ಒಂದಾಗಿದೆ. ಕ್ರಿಸ್ಟೀಸ್ ಸಂಸ್ಥೆ ಪ್ರಕಾರ, ಈ ವಜ್ರವು ಒಂದ್ ಸರಿ, ಭಾರತದ ಇಂದೋರ್‌ನ ಮಹಾರಾಜ ಯಶವಂತ್ ರಾವ್ ಹೋಲ್ಕರ್​ಗೆ ಸೇರಿತ್ತು.

1923ರಲ್ಲಿ, ಮಹಾರಾಜರ ತಂದೆ, ಪ್ರಸಿದ್ದ ಫ್ರೆಂಚ್ ಐಷಾರಾಮಿ ಆಭರಣ ಬ್ರಾಂಡ್ ಚೌಮೆಟ್ ವಜ್ರದಿಂದ ಕಂಕಣ ತಯಾರಿಸೋದಕ್ಕೆ ಪ್ರಸ್ತಾಪ ಇಟ್ಟಿದ್ದರು. ಹಿಂದೆ ಅದೇ ಆಭರಣ ಕಂಪನಿಯಿಂದ 'ಇಂದೋರ್ ಪಿಯರ್ಸ್' ಅನ್ನೋ ಎರಡು ಗೋಲ್ಗೊಂಡ ವಜ್ರಗಳನ್ನು ಖರೀದಿ ಮಾಡಿದ್ರು ಅಂತ ಕ್ರಿಸ್ಟೀಸ್ ಸಂಸ್ಥೆ ಹೇಳಿದೆ.

publive-image

ನ್ಯೂಯಾರ್ಕ್‌ನ ಪ್ರಸಿದ್ಧ ಆಭರಣ ವ್ಯಾಪಾರಿ ಹ್ಯಾರಿ ವಿನ್‌ಸ್ಟನ್, 1947ರಲ್ಲಿ ಈ ಅಪರೂಪದ ನೀಲಿ ವಜ್ರವನ್ನು ಖರೀದಿ ಮಾಡಿದ್ರು. ಈ ನೀಲಿ ವಜ್ರ ಹಾಗೂ ಅದೇ ಗಾತ್ರದ ಮತ್ತೊಂದು ಬಿಳಿ ವಜ್ರವನ್ನು ಯೂಸ್ ಮಾಡಿಕೊಂಡು ಬ್ರೂಚ್ ತಯಾರಿಸಿದ್ರು. ಈ ಬ್ರೂಚ್, ಬರೋಡಾದಲ್ಲಿನ ಮಹಾರಾಜರ ಕೈಗೆ ಸೇರಿತು. ಕೆಲವು ವರ್ಷಗಳಾದ್ಮೇಲೆ, ರಾಜಮನೆತನವು ಆ ಬ್ರೂಚ್ ಅನ್ನು, ಒಬ್ಬ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದ್ರು. ಈಗ ಅದೇ ವಜ್ರ ಜಿನೀವಾದ ಫೋರ್ ಸೀಸನ್ಸ್ ಹೋಟೆಲ್ ಡೆಸ್ ಬರ್ಗೆಸ್‌ನಲ್ಲಿ ಹರಾಜಿಗೆ ಲಗ್ಗೆ ಇಡ್ತಿದೆ.

ಪುರಾತನ ಹಾಗೂ ವೈಭವದ ಈ ಗೋಲ್ಕೋಂಡದ ನೀಲಿ ವಜ್ರದ ಬೆಲೆ ಎಷ್ಟು, ನಾವೇನಾದ್ರೂ ಖರೀದಿ ಮಾಡಬಹುದಾ ಅನ್ನೋ ಮಾಹಿತಿಯನ್ನ ಕಲೆ ಹಾಕಿದಾಗ, 23.24 ಕ್ಯಾರೆಟ್‌ನ ಈ ವಜ್ರವನ್ನು ಹರಾಜಿನ ಪ್ರಕ್ರಿಯೆಯಲ್ಲಿ 35 ರಿಂದ 50 ಮಿಲಿಯನ್ ಡಾಲರ್ ಬೆಲೆಯನ್ನ ನಿಗದಿ ಪಡಿಸಲಾಗ್ತಿದೆ. ಭಾರತೀಯ ರೂಪಾಯಿಯಲ್ಲಿ ಸುಮಾರು 300 ಕೋಟಿ ರೂಪಾಯಿಯಿಂದ 430 ಕೋಟಿ ರೂಪಾಯಿ ಮೌಲ್ಯ ಇದೆ ಅಂತ ಅಂದಾಜಿಸಲಾಗಿದೆ.

ಇದನ್ನೂ ಓದಿ: ಹಲ್ಲುಗಳ ಹುಳುಕು, ನೋವು, ಮುರಿದ್ರೆ ಚಿಂತೆ ಬೇಡ.. ವಿಜ್ಞಾನಿಗಳಿಂದ ನಿಮಗೆ ಗುಡ್​ನ್ಯೂಸ್​! 

ಇಷ್ಟೊಂದು ಬೆಲೆ ಬಾಳೋ ಗತಕಾಲದ ನೀಲಿ ವಜ್ರವನ್ನ ನೀವೇನಾದ್ರೂ ಖರೀದಿ ಮಾಡಬೇಕು ಅಂತಂದ್ರೇ ಕ್ರಿಸ್ಟೀಸ್ ಸಂಸ್ಥೆಯ ಅಫಿಶಿಯಲ್ ವೆಬ್​ಸೈಟ್​​ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ. ಆಮೇಲೆ, ಕೆಲವೊಂದು ರೂಲ್ಸ್ & ರೆಗ್ಯೂಲೇಷನ್​ಗಳನ್ನ ಫಾಲೋ ಮಾಡಿದ್ರೆ, ಈ ಅತ್ಯದ್ಭುತ ವಜ್ರ ತಮ್ಮದಾಗಿಸಿಕೊಳ್ಳಬಹುದು. ಇದೆಲ್ಲದರ ನಡುವೆ, ಈ ವಜ್ರ, ಯಾವ ಕೋಟ್ಯಾಧೀಶ್ವರನ ಕೈಗೆ ಸೇರುತ್ತೆ ಅನ್ನೋ ಎಂಬ ಕುತೂಹಲ ಹೆಚ್ಚಾಗಿ ಮೂಡಿಸ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment