Video: 4 ಜನ.. 4 ನಿಮಿಷ.. 30 ಲಕ್ಷ ಎಗರಿಸಿದ ಖತರ್ನಾಕ್ ಕಳ್ಳರು! ವಿಡಿಯೋದಲ್ಲೇನಿದೆ?

author-image
Gopal Kulkarni
Updated On
Video: 4 ಜನ.. 4 ನಿಮಿಷ.. 30 ಲಕ್ಷ ಎಗರಿಸಿದ ಖತರ್ನಾಕ್ ಕಳ್ಳರು! ವಿಡಿಯೋದಲ್ಲೇನಿದೆ?
Advertisment
  • ಕಾರಿನಿಂದ ಇಳಿದು ಬಂದ ನಾಲ್ವರು ವ್ಯಕ್ತಿಗಳು ಮಾಡಿದ್ದೇನು?
  • ಕೈಯಲ್ಲಿ ಗ್ಯಾಸ್​ ಕಟರ್, ರಾಡ್ ಹಿಡಿದುಕೊಂಡ ಬಂದ ಕಿರಾತಕರು
  • ನಾಲ್ಕೇ ನಾಲ್ಕು ನಿಮಿಷಗಳಲ್ಲಿ ಅಂದುಕೊಂಡಿದ್ದನ್ನು ಮಾಡಿ ಎಸ್ಕೇಪ್​

ಮುಖಕ್ಕೆ ಮಾಸ್ಕ್ ಹಾಕಿಕೊಂಡು ಎಟಿಎಂಗೆ ನುಗ್ಗಿದ ನಾಲ್ಕು ಮಂದಿ ಕಳ್ಳರು ಎಟಿಎಂ ಮಷಿನ್​ನ್ನು ಕಟ್​ ಮಾಡಿ ಓಪನ್ ಮಾಡಿ ಸುಮಾರು 30 ಲಕ್ಷ ರೂಪಾಯಿ ಅಧಿಕ ಹಣವನ್ನು ಎಗರಿಸಿಕೊಂಡು ಹೋಗಿದ್ದಾರೆ. ಎಟಿಎಂಗೆ ನುಗ್ಗಿದ ಈ ನಾಲ್ಕು ಜನರು ಕೇವಲ ನಾಲ್ಕು ನಿಮಿಷದಲ್ಲಿಯೇ ತಮ್ಮ ಕೆಲಸವನ್ನು ಮುಗಿಸಿ ಎಸ್ಕೇಪ್​ ಆಗಿದ್ದಾರೆ. ಈ ಒಂದು ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ರವಿವಾರ ತಡರಾತ್ರಿ ನಡೆದಿದೆ.

ರಾತ್ರಿ ಸುಮಾರು 1.56ರ ಸಮಯದಲ್ಲಿ ಒಬ್ಬ ವ್ಯಕ್ತಿ ಕಾರ್​ನಿಂದ ಇಳಿದು ಸಾಮಾನ್ಯರ ಹಾಗೆ ಎಟಿಎಂ ಮಷಿನ್​ನತ್ತ ನಡೆದುಕೊಂಡು ಬಂದಿದ್ದಾನೆ. ಆಮೇಲೆ ಏನನ್ನೋ ಸಿಸಿಟಿವಿಗೆ ಕ್ಯಾಮರಾಗೆ ಸ್ಪ್ರೇ ಮಾಡಿದದ್ದಾನೆ. ಅದರ ಜೊತೆಗೆ ಎಮರ್ಜೆನ್ಸಿ ಸೈರನ್​ನ ವೈರ್​ ಕೂಡ ಕಟ್ ಮಾಡಿದ್ದಾನೆ. ಆದರೆ ಸಿಸಿಟಿವಿಯನ್ನು ಕಾರ್ಯನಿರ್ವಹಿಸದಂತೆ ಮಾಡುವಲ್ಲಿ ವಿಫಲಗೊಂಡಿದ್ದಾರೆ. ಕಿರಾತಕರು ಮಾಡಿದ ಒಂದೊಂದು ಕೃತ್ಯವು ಕೂಡ ಸಿಸಿಟಿವಿಯಲ್ಲಿ ಸೆರೆಯಗಿದೆ.


">March 2, 2025

ಇದಾದ ಬಳಿಕ ಮೂರು ಜನರು ಕೈಯಲ್ಲಿ ರಾಡ್​ ಮತ್ತು ಗ್ಯಾಸ್​ ಕಟರ್ ಹಿಡಿದುಕೊಂಡು ಬಂದು ಎಷ್ಟು ಸಾಧ್ಯವೋ ಅಷ್ಟು ಬೇಗ ಎಟಿಎಂ ಮಷಿನ್​ನ್ನು ಓಪನ್ ಮಾಡಿದ್ದಾರೆ. ಈ ಕೃತ್ಯದಲ್ಲಿ ಮೂರು ಜನ ಭಾಗವಹಿಸಿದ್ದರೆ ಮತ್ತೊಬ್ಬ ಆಚೆ ನಿಂತು ಇವರನ್ನು ಕಾಯುತ್ತಿದ್ದ. ಎಲ್ಲವೂ ಮುಗಿದ ಬಳಿಕ ಕತ್ತರಿಸಿ ತೆರೆಯಲಾಗಿದ್ದ ಎಟಿಎಂನಿಂದ ಸುಮಾರು 29.69 ಲಕ್ಷ ರೂಪಾಯಿಯನ್ನು ಬಾಚಿಕೊಂಡು ಸುಮಾರು ರಾತ್ರಿ 2 ಗಂಟೆಯ ಸಮಯಕ್ಕೆ ಎಸ್ಕೇಪ್ ಆಗಿದ್ದಾರೆ. ಈ ನಾಲ್ಕು ನಿಮಿಷದಲ್ಲಿ ಎಟಿಎಂ ಮಷಿನ್ ಇರುವ ಶೆಟರ್ಸ್​ನ್ನು ಕೂಡ ಮುಚ್ಚಿ ಓಡಿ ಹೋಗಿದ್ದಾರೆ.

ಇದನ್ನೂ ಓದಿ: ಭಾರತದ ಈ ಒಂದು ಜಾಗದಲ್ಲಿ ನೀವು ಕಾಲಿಟ್ರೆ ಖಲ್ಲಾಸ್​! ಇದು ಜಗತ್ತಿನ ಅತ್ಯಂತ ಖತರ್ನಾಕ್ ದ್ವೀಪ!

ಈಗಾಗಲೇ ಈ ಬಗ್ಗೆ ಜಿಲ್ಲೆಯ ಅಸಿಸ್ಟಂಟ್ ಕಮಿಷನರ್ ಪೊಲೀಸ್​ ರಾಜು ಮಾತನಾಡಿದ್ದು. ಅವರ ಕಾರನ್ನು ಪತ್ತೆ ಮಾಡಲು ಹಲವು ಸಿಸಿಟಿವಿಗಳನ್ನು ಚೆಕ್ ಮಾಡಲಾಗಿದೆ. ಅವರು ಯಾವ ದಾರಿಯಿಂದ ಬಂದು ಯಾವ ದಾರಿಯಲ್ಲಿ ಹೋದರು ಎಂಬದನ್ನು ಗಮನಿಸುಲಾಗುತ್ತಿದೆ. ಎಲ್ಲರೂ ಒಂದೇ ಕಾರಿನಲ್ಲಿ ಬಂದಿದ್ದಾರೆ ಅದರಲ್ಲಿ ಮೂವರು ಎಟಿಎಂ ಇರುವಲ್ಲಿಗೆ ಹೋದರೆ ಒಬ್ಬ ಆಚೆ ಕಾಯುತ್ತಾ ನಿಂತಿದ್ದಾನೆ. ಗ್ಯಾಸ್​ ಕಟರ್ ಮತ್ತು ರಾಡ್​ ತೆಗೆದುಕೊಂಡು ಬಂದ ಅವರು ಎಟಿಎಂ ಮಷಿನ್​ ಒಡೆದು ಹಣವನ್ನು ಬಾಚಿಕೊಂಡು ಹೋಗಿದ್ದಾರೆ. ಈಗಾಗಲೇ ನಾವು ತನಿಖೆಯನ್ನು ಆರಂಭಿಸಿದ್ದೇವೆ ಎಂದು ರಾಜು ಹೇಳಿದ್ದಾರೆ.

ಇದನ್ನೂ ಓದಿ:ವಿಶ್ವದಲ್ಲಿಯೇ ಅತಿಹೆಚ್ಚು ನದಿಗಳನ್ನು ಹೊಂದಿರುವ ದೇಶಗಳು ಯಾವುವು? ಭಾರತದಲ್ಲಿ ಎಷ್ಟಿವೆ?

ಇನ್ನು ಹರಿಯಾಣ ಗ್ಯಾಂಗ್ ಈ ಕೃತ್ಯದ ಹಿಂದೆ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ಎಸಿಪಿ ರಾಜು. ಅವರು ಮೈರಾದೇವಪಾಳ್ಯಾದಲ್ಲಿಯೂ ಕೂಡ ಎಟಿಎಂ ಮಷಿನ್​ ಲೂಟಿ ಮಾಡಲು ಯತ್ನಿಸಿದ್ದು ಬೆಳಕಿಗೆ ಬಂದಿದೆ. ಆದ್ರೆ ಅಲಾರಂ ಸೆನ್ಸರ್ಸ್​​ ಶಾಕ್​​ ಹೊಡೆದ ಕಾರಣ ಬೆಚ್ಚಿದ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಹಿಂದೆ ಬೆಂಗಳೂರಿನ ಮತ್ತು ತಮಿಳುನಾಡಿನ ಹೊಸುರಿನಲ್ಲಿಯೂ ಇದೇ ಮಾದರಿಯ ಕಳ್ಳತನವಾಗಿದೆ ಇದರ ಹಿಂದೆ ಹರಿಯಾಣ ಗ್ಯಾಂಗ್ ಕೈವಾಡವಿರುವ ಶಂಕೆ ಇದೆ ಎಂದು ಹೇಳಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment