ಗುಡ್ ಬ್ಯಾಡ್ ಅಗ್ಲಿ ನಟ ಅಜಿತ್ ಕಾರು ಅಪಘಾತ.. ವಿಡಿಯೋ ನೋಡಿ ಅಭಿಮಾನಿಗಳು ಶಾಕ್‌!

author-image
admin
Updated On
ಗುಡ್ ಬ್ಯಾಡ್ ಅಗ್ಲಿ ನಟ ಅಜಿತ್ ಕಾರು ಅಪಘಾತ.. ವಿಡಿಯೋ ನೋಡಿ ಅಭಿಮಾನಿಗಳು ಶಾಕ್‌!
Advertisment
  • ತಮಿಳು ಸಿನಿಮಾದ ಖ್ಯಾತ ನಟ ಅಜಿತ್ ಕಾರು ಮತ್ತೊಮ್ಮೆ ಅಪಘಾತ
  • ಕಾರು ಅಪಘಾತದ ಬಳಿಕ ನೋವಿನಲ್ಲೇ ಓಡಾಡಿದ ನಟ ಅಜಿತ್!
  • ಅಜಿತ್ ಕಾರು ಓಡಿಸುತ್ತಿದ್ದಾಗ ತಡೆಗೋಡೆಗೆ ಡಿಕ್ಕಿಯಾದ ವಿಡಿಯೋ

ತಮಿಳು ಸಿನಿಮಾದ ಖ್ಯಾತ ನಟ ಅಜಿತ್ ಕಾರು ಮತ್ತೊಮ್ಮೆ ಅಪಘಾತಕ್ಕೀಡಾಗಿದೆ. ರೇಸ್‌ ಟ್ರ್ಯಾಕ್‌ ಮೇಲೆ ಅಜಿತ್ ಕಾರು ಓಡಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

publive-image

ಅಜಿತ್ ಓಡಿಸುತ್ತಿದ್ದ ಕಾರು ಅತಿವೇಗವಾಗಿ ಟ್ರ್ಯಾಕ್‌ನ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ರೇಸ್ ಕಾರು ಅಪಘಾತದ ಬಳಿಕ ಅಜಿತ್ ಅವರು ನೋವಿನಲ್ಲಿ ಓಡಾಡಿದ್ದಾರೆ. ಕಾರಿನ ಅಪಘಾತ ಹಾಗೂ ಅಜಿತ್ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


">April 19, 2025

ಇತ್ತೀಚೆಗಷ್ಟೇ ಅಜಿತ್ ಅಭಿನಯದ ಗುಡ್ ಬ್ಯಾಡ್ ಅಗ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಅಭಿಮಾನಿಗಳಿಂದ ಅಜಿತ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿತ್ತು.

ಇದನ್ನೂ ಓದಿ: ಮುಖ್ಯಮಂತ್ರಿ ಆದ ನಟ ದರ್ಶನ್.. ಕರುನಾಡ ಪ್ರಜಾ ಪಕ್ಷದ ಬ್ಯಾನರ್‌ ಫೋಟೋಗಳು ವೈರಲ್‌! 

ನಟ ಅಜಿತ್ ಅವರು ಬೆಲ್ಜಿಯಂ ರೇಸ್‌ನಲ್ಲಿ ಭಾಗಿಯಾಗಿದ್ದಾಗ ಈ ಆ್ಯಕ್ಸಿಡೆಂಟ್ ನಡೆದಿದೆ. ಅಪಘಾತದಲ್ಲಿ ಅಜಿತ್ ಅವರಿಗೆ ಸಣ್ಣ - ಪುಟ್ಟ ಗಾಯಗಳಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment