ರಾತ್ರಿ ನಿದ್ರೆ ಬರ್ತಿಲ್ವಾ? ನೀವು ಚೆನ್ನಾಗಿ ನಿದ್ದೆ ಮಾಡಲು ಏನು ಮಾಡಬೇಕು..?

author-image
Ganesh
Updated On
ರಾತ್ರಿ ನಿದ್ರೆ ಬರ್ತಿಲ್ವಾ? ನೀವು ಚೆನ್ನಾಗಿ ನಿದ್ದೆ ಮಾಡಲು ಏನು ಮಾಡಬೇಕು..?
Advertisment
  • ರಾತ್ರಿಯ ನಿದ್ದೆ ಆರೋಗ್ಯಕ್ಕೆ ಬಹಳ ಮುಖ್ಯ
  • ದೇಹ ಮತ್ತು ಮನಸ್ಸು ಎರಡಕ್ಕೂ ವಿಶ್ರಾಂತಿ ಬೇಕು
  • ಮಲಗುವುದರಿಂದ ಒತ್ತಡ, ಆಯಾಸ, ಆಲಸ್ಯ ಕಮ್ಮಿ ಆಗ್ತದೆ

ರಾತ್ರಿಯ ನಿದ್ದೆ ಆರೋಗ್ಯಕ್ಕೆ ಬಹಳ ಮುಖ್ಯ. ನಿದ್ರೆ ಸರಿಯಾಗಿದ್ದರೆ ಮಾತ್ರ ಒತ್ತಡ, ಆತಂಕದಂತಹ ಸಮಸ್ಯೆಗಳನ್ನು ತಡೆಯಬಹುದು. ದೇಹ ಮತ್ತು ಮನಸ್ಸು ಎರಡಕ್ಕೂ ವಿಶ್ರಾಂತಿ ಬೇಕು. ಅದಿಲ್ಲದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ನೀವು ಚೆನ್ನಾಗಿ ನಿದ್ದೆ ಮಾಡಲು ಬಯಸಿದರೆ ಈ ಆಹಾರಗಳನ್ನು ತ್ಯಜಿಸಬೇಕು.

ಬೆಳಗ್ಗೆ ಎದ್ದ ನಂತರ ಎಷ್ಟೇ ಕೆಲಸ ಮಾಡಿದರೂ ರಾತ್ರಿ ಮಲಗುವುದರಿಂದ ಒತ್ತಡ, ಆಯಾಸ, ಆಲಸ್ಯ ಕಡಿಮೆಯಾಗುತ್ತದೆ. ಒಂದು ವೇಳೆ ಸರಿಯಾಗಿ ನಿದ್ದೆ ಮಾಡದಿದ್ದರೆ.. ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ರಾತ್ರಿಯಲ್ಲಿ ನಾವು ಮಾಡುವ ಕೆಲವು ತಪ್ಪುಗಳಿಂದ ನಿದ್ರೆಯ ಸಮಸ್ಯೆಗಳನ್ನು ಎದುರಿಸುತ್ತೇವೆ.

ಇದನ್ನೂ ಓದಿ: ಕ್ಯಾಪ್ಟನ್ ರೋಹಿತ್ ಶರ್ಮಾ ಕರಿಯರ್​​ ಅಂತ್ಯಕ್ಕೆ ಮುಹೂರ್ತ ಫಿಕ್ಸ್..!

ಹಾಗಾಗಿ ರಾತ್ರಿ ಮಲಗುವ ಮುನ್ನ ಕೆಲವು ರೀತಿಯ ಆಹಾರ ತ್ಯಜಿಸುವುದು ಉತ್ತಮ. ರಾತ್ರಿ ವೇಳೆ ಹೆಚ್ಚಾಗಿ ಪಿಜ್ಜಾ, ಬರ್ಗರ್ ಮುಂತಾದ ಆಹಾರ ಸೇವಿಸುತ್ತಾರೆ. ಇದು ನಿದ್ರೆಯ ಮೇಲೆ ಪರಿಣಾಮ ಬೀರಲಿದೆ. ಅನೇಕರು ಊಟದ ನಂತರ ಸಿಹಿ ತಿನ್ನುತ್ತಾರೆ. ಸಿಹಿತಿಂಡಿಗಳು, ಚಾಕೊಲೇಟ್​ಗಳು ಮತ್ತು ಮಿಠಾಯಿಗಳನ್ನು ತಪ್ಪಿಸಿ. ಇವು ಪಥ್ಯದ ಆಹಾರ ಆಗಿರುವುದರಿಂದ ಜೀರ್ಣವಾಗುವುದಿಲ್ಲ. ಇವುಗಳಿಂದ ಕೆಮ್ಮು ಬರುತ್ತದೆ, ನಿದ್ರಿಸಲು ತೊಂದರೆ ಆಗುತ್ತದೆ.

ಇದನ್ನೂ ಓದಿ: ಯಾವ ಪವರೂ ಇಲ್ಲ, ಶೇರಿಂಗೂ ಇಲ್ಲ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಲಸ -ಡಿಕೆಶಿ ಹೊಸ ಗಾಳ?

ಕೆಫೀನ್, ಕೊಬ್ಬಿನ ಪದಾರ್ಥಗಳು, ಕೋಕೋ ಮುಂತಾದ ಆಹಾರ ಸೇವಿಸುವುದರಿಂದ ನಿದ್ರೆಯ ಸಮಸ್ಯೆ ಉಂಟಾಗುತ್ತದೆ. ಇವು ಅಸಿಡಿಟಿ ಸಮಸ್ಯೆ ಉಂಟು ಮಾಡಬಹುದು. ಆಲ್ಕೋಹಾಲ್, ಕಾರ್ಬೊನೇಟೆಡ್ ಆಹಾರಗಳು ಮತ್ತು ಜಂಕ್ ಫುಡ್‌ಗಳನ್ನು ಸಹ ತ್ಯಜಿಸಬೇಕು.
ನೀರು ಮತ್ತು ಮಜ್ಜಿಗೆಯನ್ನೂ ಕಡಿಮೆ ಸೇವಿಸಬೇಕು. ಇದರ ಸೇವನೆಯಿಂದ ಆಗಾಗ ವಾಶ್​​ರೂಮ್​ಗೆ ಹೋಗಬೇಕಾಗುತ್ತದೆ. ರಾತ್ರಿ ಸುಲಭವಾಗಿ ಜೀರ್ಣವಾಗುವ ಆಹಾರ ಮಾತ್ರ ತೆಗೆದುಕೊಳ್ಳಬೇಕು. ರಾತ್ರಿಯ ಊಟವನ್ನು ಆದಷ್ಟು ಬೇಗ ಮುಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: ಈ 4 ಪ್ರಮುಖ ಅಭ್ಯಾಸಗಳು ನಿಮ್ಮ ದಂತಗಳನ್ನು ಸ್ವಚ್ಛ ಹಾಗೂ ಬಿಳಿಯಾಗಿಸುತ್ತವೆ.. ಯಾವುವು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment