/newsfirstlive-kannada/media/post_attachments/wp-content/uploads/2025/03/Airport-Snacks-Prize.jpg)
ನವದೆಹಲಿ: ವಿಮಾನ ಪ್ರಯಾಣ ಅಂದ್ರೆನೇ ದುಬಾರಿ. ಏರ್‌ಪೋರ್ಟ್‌ಗಳಲ್ಲಿ ಸಿಗುವ ಊಟ, ತಿಂಡಿ ಕೂಡ ಅಷ್ಟೇ ತುಟ್ಟಿ ಅಂತ ಬಾಯಿ ಮೇಲೆ ಬೆರಳಿಟ್ಟು ಕೊಳ್ಳುವ ಪ್ರಯಾಣಿಕರಿಗೆ ಕೊನೆಗೂ ಸಿಹಿ ಸುದ್ದಿಯೊಂದು ಸಿಕ್ಕಿದೆ. ದೇಶದ ಕೆಲವು ವಿಮಾನ ನಿಲ್ದಾಣದಲ್ಲಿ ಕಡಿಮೆ ಬೆಲೆಗೆ ಟೀ, ಕಾಫಿ, ಸಮೋಸಾ, ನೀರಿನ ಬಾಟಲ್ ಮಾರಾಟ ಮಾಡಲಾಗುತ್ತಿದೆ.
ನಿಜಕ್ಕೂ ಇದು ಅಚ್ಚರಿಯಾದ್ರೂ ನಿಜ. ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ಪ್ರಯಾಣಿಕರು ಅಲ್ಲಿ ರೇಟ್‌ಗಳನ್ನೇ ಕೇಳಿ ಶಾಕ್ ಆಗುತ್ತಿದ್ದರು. ಪ್ರಯಾಣಿಕರ ಈ ಕಷ್ಟ ನೀಗಿಸಲು ಉಡಾನ್ ಯಾತ್ರಿ ಕೆಫೆ ಮುಂದೆ ಬಂದಿದೆ.
ಸದ್ಯ ಕೋಲ್ಕತ್ತಾ ಮತ್ತು ಚೆನ್ನೈ ಏರ್‌ಪೋರ್ಟ್‌ಗಳಲ್ಲಿ ಉಡಾನ್ ಯಾತ್ರಿ ಕೆಫೆ ತೆರೆಯಲಾಗಿದೆ. ಇದರಲ್ಲಿ ಬಹಳ ಕಡಿಮೆ ಬೆಲೆಯಲ್ಲಿ ಟೀ, ಕಾಫಿ, ಸಮೋಸಾ, ನೀರಿನ ಬಾಟಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.
ಯಾವುದಕ್ಕೆ ಎಷ್ಟು ರೂಪಾಯಿ!
ಟೀ : ₹10
ನೀರು : ₹10
ಕಾಫಿ : ₹20
ಸಮೋಸ : ₹20
ಸ್ವೀಟ್ : ₹20
ಉಡಾನ್ ಯಾತ್ರಿ ಕೆಫೆ ಭಾರತದಲ್ಲಿ ಮೊದಲ ಬಾರಿಗೆ ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುವ ಅಂಗಡಿಗಳನ್ನು ತೆರೆದಿದೆ. ಕೋಲ್ಕತ್ತಾ, ಚೆನ್ನೈ ಏರ್‌ಪೋರ್ಟ್‌ಗಳಲ್ಲಿ ತೆರೆದಿರುವ ಉಡಾನ್ ಯಾತ್ರಿ ಕೆಫೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಇದನ್ನೂ ಓದಿ: 19 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ ವಿಮಾನ ನಿಲ್ದಾಣ; ಇಲ್ಲಿ ವಿಮಾಣವೂ ಇಲ್ಲ, ಪ್ರಯಾಣಿಕರು ಇಲ್ಲ!
ಪ್ರಯಾಣಿಕರು ಕಡಿಮೆ ಬೆಲೆಗೆ ಟೀ, ಕಾಫಿ, ಸಮೋಸ, ಸ್ವೀಟ್ ತಿಂದು ಖುಷಿ ಪಡುತ್ತಿದ್ದಾರೆ. ಸದ್ಯದಲ್ಲೇ ದೆಹಲಿ ಏರ್‌ಪೋರ್ಟ್‌ನಲ್ಲೂ ಉಡಾನ್ ಯಾತ್ರಿ ಕೆಫೆ ತನ್ನ ಸೇವೆ ನೀಡಲಿದೆ. ಇದಾದ ಬಳಿಕ ಶೀಘ್ರವೇ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಕಡಿಮೆ ಬೆೆಲೆಗೆ ಟೀ, ಕಾಫಿ, ನೀರು ಮಾರಾಟ ಮಾಡುವ ಮಳಿಗೆಗಳನ್ನು ತೆರೆಯಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ